More

    ವಸತಿ ಶಾಲೆ ಸುತ್ತ ಬಂದೋಬಸ್ತ್

    ರಾಣೆಬೆನ್ನೂರ: ಮಾಕನೂರಿನ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಇರುವ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಒಂದೇ ಕುಟುಂಬದ ನಾಲ್ವರಲ್ಲಿ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ, ಗಿರಿಜನ ವಸತಿ ಶಾಲೆ ಹಾಗೂ ಈಶ್ವರ ನಗರದ ದೇವರಾಜ ಅರಸು ವಸತಿ ನಿಲಯದ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

    ಮಹಾರಾಷ್ಟ್ರದಲ್ಲಿ ಬೀದಿ ಬಿದಿ ವ್ಯಾಪಾರ ಮಾಡಿಕೊಂಡಿದ್ದ ತುಮ್ಮಿನಕಟ್ಟಿ ಗ್ರಾಮದ ನಾಲ್ವರು ಮೇ 17ರಂದು ಬಸ್ ಮೂಲಕ ಜಿಲ್ಲೆಗೆ ಆಗಮಿಸಿದ್ದರು. ಅವರನ್ನು ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ತುಮ್ಮಿನಕಟ್ಟಿ ಗ್ರಾಮವನ್ನು ಬಫರ್ ಜೋನ್ ಎಂದು ಘೊಷಿಸಿದ್ದು, ಗ್ರಾಮದಲ್ಲಿ ಜನತೆ ಓಡಾಡದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಈಶ್ವರ ನಗರದ ದೇವರಾಜ ಅರಸು ವಸತಿ ನಿಲಯದ ಹತ್ತಿರವೂ ಜನತೆ ಸುಳಿಯುತ್ತಿಲ್ಲ.

    ಬರಬೇಕಿದೆ ಇನ್ನೂ 41 ಜನರ ವರದಿ: ಮೇ 17ರಂದು ಮಹಾರಾಷ್ಟ್ರದ ಥಾಣೆಯಿಂದ ಒಟ್ಟು 89 ಜನರು ಬಂದಿದ್ದಾರೆ. ಎಲ್ಲರ ರಕ್ತ ಹಾಗೂ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 44 ಜನರ ವರದಿ ನೆಗೆಟಿವ್ ಬಂದಿದೆ. ನಾಲ್ವರಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ 41 ಜನರ ಪರೀಕ್ಷಾ ವರದಿ ಬರುವುದು ಬಾಕಿ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts