More

    ವಸತಿ ನಿಲಯದ ಸಾಮಗ್ರಿ ಕಾಳಸಂತೆಯಲ್ಲಿ ಮಾರಾಟ

    ಯಾದಗಿರಿ: ಎಸ್ಸಿ, ಎಸ್ಟಿ ವಸತಿ ನಿಲಯದ ಮಕ್ಕಳಿಗೆ ನೀಡುವ ಸಾಮಗ್ರಿಗಳನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಜಯ ಕನರ್ಾಟಕ ರಕ್ಷಣಾ ಸೇನೆ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸರಕಾರದಿಂದ ಬಂದಿರುವ ಹೊದಿಕೆ, ಜಮಾಖಾನೆ, ಇತರೆ ಸಾಮಾಗ್ರಿಗಳು. ಒಂದುವರೆ ವರ್ಷ ಕಳೆದರೂ ಮಕ್ಕಳಿಗೆ ನೀಡದೆ ಗೋದಾಮಿನಲ್ಲಿಯೇ ಸಂಗ್ರಹಿಸಿಡಲಾಗಿದೆ. ಬಡ ಮಕ್ಕಳಿಗೆ ಅನ್ಯಾಯ ಮಾಡಿ, ಸಕರ್ಾರದ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿದ್ದು, ಈ ಸಾಮಾಗ್ರಿಗಳು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಅನುಮಾನ ಕಾಡುತ್ತಿದೆ ಎಂದು ಪದಾಧಿಕಾರಿಗಳು ಆರೋಪಿಸಿದರು.

    ಸರಕಾರದ ನಿಯಮದ ಪ್ರಕಾರ ಬಂದಿರುವ ಸಾಮಾಗ್ರಿ ಆ ಮಕ್ಕಳಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳದ್ದು, ಆದರೆ ಗೋದಾಮಿನಲ್ಲಿ ಸಂಗ್ರಹಿಸಿಟ್ಟು, ಪ.ಜಾತಿ, ಪಂಗಡ ವಿದ್ಯಾಥಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಒಂದುವರೆ ವರ್ಷದ ಹಿಂದೆಯೇ ಬಂದ ಸಾಮಗ್ರಿ ದಾಸ್ತಾನನ್ನು ಇಲ್ಲಿನ ಡಾ.ಬಾಬು ಜಗಜೀವನರಾಂ ಭವನದಲ್ಲಿ ಅಡಗಿಸಿಟ್ಟು ಕ್ರಮೇಣ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts