More

    ವಸತಿಗಾಗಿ ಹಮಾಲಿ ಕಾರ್ವಿುಕರ ಪ್ರತಿಭಟನೆ

    ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿಯಿಂದ ಲೈಸನ್ಸ್ ಪಡೆದ ಹಮಾಲಿ ಕಾರ್ವಿುಕರಿಗೆ ವಸತಿ ಯೋಜನೆ ರೂಪಿಸಿ ಎಲ್ಲರಿಗೂ ಮನೆ ಒದಗಿಸಬೇಕೆಂದು ಆಗ್ರಹಿಸಿ ಬಸವ ಕಾಲನಿ ನಾಗರಿಕರ ಸೇವಾ ಸಂಘದ ವತಿಯಿಂದ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದ ಬಸವ ಕಾಲನಿಯಿಂದ ನೂರಾರು ಮಹಿಳೆಯರು, ಪುರುಷರು ಮೆರವಣಿಗೆ ಆರಂಭಿಸಿ ಎಪಿಎಂಸಿ ಆಡಳಿತ ಕಚೇರಿಗೆ ಆಗಮಿಸಿ ಕೆಲಕಾಲ ಧರಣಿ ನಡೆಸಿದರು.

    1999ರಲ್ಲಿ ಎಪಿಎಂಸಿ ಆವರಣದಲ್ಲಿ ವಸತಿ ಗೃಹ ನಿರ್ವಿುಸಿ ಕಾರ್ವಿುಕರಿಗೆ 132 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಇಲ್ಲಿಯವರೆಗೂ ಮನೆಗಳ ಹಕ್ಕುಪತ್ರ ನೀಡಿಲ್ಲ. ಕಟ್ಟಿದ ಮನೆಗಳ ಗೃಹಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಲಾಗಿತ್ತು. ಇದಲ್ಲದೇ ಕುಡಿಯುವ ನೀರು, ಬೀದಿದೀಪ ಸೇರಿ ಯಾವುದೇ ಮೂಲ ಸೌಲಭ್ಯಗಳಿಲ್ಲ ಎಂದು ನಿವಾಸಿಗಳು ದೂರಿದರು.

    15 ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತ ಬಂದಿದ್ದರೂ ಈ ಬೇಡಿಕೆಗಳು ಈಡೇರಿಲ್ಲ. ಹಾಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ಸಂಘದ ಅಧ್ಯಕ್ಷ ಹನಮಂತಪ್ಪ ಪೂಜಾರ ಹೇಳಿದರು.

    ಹಮಾಲಿ ಕಾರ್ವಿುಕರ ವಸತಿ ಗೃಹಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. ಮೂಲ ಸೌಕರ್ಯ ಒದಗಿಸಬೇಕು, ಹೊಸ ವಸತಿ ಯೋಜನೆಯಡಿ ಕಾರ್ವಿುಕರಿಗೆ ನಿವೇಶನ, ಮನೆ ನಿರ್ವಿುಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಮನವಿ ಸ್ವೀಕರಿಸಿದ ಎಪಿಎಂಸಿ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

    ಸಂಘದ ಉಪಾಧ್ಯಕ್ಷ ಗುರುಸಿದ್ದಪ್ಪ ಅಂಬಿಗೇರ, ಪ್ರಧಾನ ಕಾರ್ಯದರ್ಶಿ ದುರಗಪ್ಪ ಚಿಕ್ಕತುಂಬಳ, ಮಂಜುನಾಥ ಹುಜರಾತಿ, ಬಸವರಾಜ ಅಂಬಿಗೇರ, ದೇವಪ್ಪ ಟನಕೆದಾರ್, ಹಣಮಂತ ಅಂಬಿಗೇರ, ಚನ್ನಮ್ಮ ಅರಗಾನೂರ, ಯಲ್ಲಮ್ಮ ಅಂಬಿಗೇರ ಇತರರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts