More

    ವಲಸೆ ಕುಟುಂಬಗಳಿಗೆ ಉದ್ಯೋಗ ಖಾತ್ರಿ

    ಬೀದರ್: ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದಿರುವ ವಲಸೆ ಕುಟುಂಬಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಡಿ ಜೀವನಾಂಶ ಆಶ್ರಿತ ಉದ್ಯೋಗ ಕಲ್ಪಿಸುವ ಸಂಬಂಧ ಚರ್ಚಿಸಲು ಸ್ವ ಸಹಾಯ ಗುಂಪುಗಳ ಪ್ರತಿನಿಧಿಗಳು ಹಾಗೂ ಸ್ವಯಂ ಸೇವಾ ಮುಖ್ಯಸ್ಥರೊಂದಿಗೆ ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಶನಿವಾರ ಸಭೆ ನಡೆಸಿದರು.
    ಕರೊನಾ ತುರ್ತು ಸಂದರ್ಭದಲ್ಲಿ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ವಲಸೆ ಬಂದಿರುವ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಈ ಸಭೆ ಕರೆದಿದ್ದು, ವಲಸಿಗರಿಗೆ ಸಣ್ಣಪುಟ್ಟ ಕೆಲಸ ನೀಡಿ ಸಂಕಷ್ಟದಿಂದ ಪಾರು ಮಾಡುವುದೇ ಸಭೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಸರಸ್ವತಿ ಮಹಿಳಾ ಮಂಡಳ, ಆರ್ಬಿಟ್ ಸ್ವಯಂ ಸೇವಾ ಸಂಸ್ಥೆ, ಮೈರಾಡ್ ಸೇರಿ 10ಕ್ಕೂ ಹೆಚ್ಚು ಸೇವಾ ಸಂಸ್ಥೆ ಪ್ರತಿನಿಧಿಗಳು ಮಾತನಾಡಿ, ಸ್ಯಾನಿಟರಿ ಪ್ಯಾಡ್, ಮಾಸ್ಕ್ ತಯಾರಿಕೆ, ಲಾಲಿಪಾಪ್, ರೊಟ್ಟಿ, ಉಪ್ಪಿನಕಾಯಿ, ಫೀನಾಯಿಲ್ ತಯಾರಿಕೆ ಮಾಡುವುದಾಗಿ ತಿಳಿಸಿದರು. ಸಂಸ್ಥೆಗಳು ತುರ್ತಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸಿಇಒ ಸೂಚಿಸಿದರು. ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪತರ್ಾಪುರೆ, ಫಾದರ್ ಅನೀಲ್, ಚಿನ್ನಮ್ಮ ಬಾವಗೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts