More

    ವರ್ಷದೊಳಗೆ ಡಿಸಿಸಿ ಬ್ಯಾಂಕ್ ಎಲ್ಲ ಖಾತೆದಾರರಿಗೆ ಎಟಿಎಂ ಕಾರ್ಡ್ ವಿತರಣೆ

    ಶಿಡ್ಲಘಟ್ಟ: ಮುಂದಿನ ಒಂದು ವರ್ಷದೊಳಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಸಿ ಬ್ಯಾಂಕ್‌ನ ಎಲ್ಲ ಖಾತೆದಾರರಿಗೂ ಎಟಿಎಂ ಕಾರ್ಡ್ ನೀಡುವ ಗುರಿ ಹೊಂದಲಾಗಿದೆ, ಈ ನಿಟ್ಟಿನಲ್ಲಿ ಈಗಾಗಲೇ ಎರಡು ಲಕ್ಷ ಕಾರ್ಡ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ತಾಲೂಕಿನ ಕುಂದಲಗುರ್ಕಿ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಗುರುವಾರ ಮಹಿಳಾ ಸ್ವಸಹಾಯ ಸಂಘಗಳಿಗೆ ಮೈಕ್ರೋ ಎಟಿಎಂ ಮೂಲಕ ಸಾಲ ವಿತರಣೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಂಪ್ಯೂಟರ್ ವಿತರಿಸಿ ಮಾತನಾಡಿದರು.

    ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಪೈಪೋಟಿ ನಡೆಸುವ ಉದ್ದೇಶದಿಂದ ಅವಳಿ ಜಿಲ್ಲೆಗಳ ಎಲ್ಲ ಸಹಕಾರಿ ಬ್ಯಾಂಕ್‌ಗಳನ್ನು ಗಣಕೀಕೃತ ಮಾಡುವ ಜತೆಗೆ ಮೈಕ್ರೋ ಎಟಿಎಂ ಮನೆ ಬಾಗಿಲಲ್ಲೇ ಹಣ ಡ್ರಾ ಮಾಡಲು ಹಾಗೂ ಫಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಕಳೆದ 7 ವರ್ಷಗಳ ಡಿಸಿಸಿ ಬ್ಯಾಂಕ್ ಸಾಧನೆಗಿಂತ ಆಡಳಿತ ಮಂಡಳಿ ಹಾಗು ಸಿಬ್ಬಂದಿಯ ಸಹಕಾರದೊಂದಿಗೆ ಕಳೆದ ಎರಡು ತಿಂಗಳಲ್ಲಿ ಎರಡೂ ಜಿಲ್ಲೆಗಳ ಎಲ್ಲ ಸಹಕಾರ ಸಂಘಗಳನ್ನು ಗಣಕೀಕೃತಗೊಳಿಸುವ ಜತೆಗೆ ಮೈಕ್ರೋ ಎಟಿಎಂ ಸೌಲಭ್ಯಕ್ಕೆ ಚಾಲನೆ ನೀಡಿರುವುದು ಹೆಚ್ಚಿನ ತೃಪ್ತಿ ತಂದಿದೆ ಎಂದು ಗೋಂವಿದಗೌಡ ಸಂತಸ ವ್ಯಕ್ತಪಡಿಸಿದರು.

    ದೇಶಕ್ಕೆ ಮಾದರಿ: ಜಿಲ್ಲೆಯ ಎಲ್ಲ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳನ್ನು ಗಣಕೀಕೃತಗೊಳಿಸಲು ಅಪೆಕ್ಸ್ ಬ್ಯಾಂಕ್‌ನಿಂದ ಸುಮಾರು 6 ಲಕ್ಷ ವೆಚ್ಚದಲ್ಲಿ ಉಚಿತ ಕಂಪ್ಯೂಟರ್ ವಿತರಿಸಲಾಗುತ್ತಿದೆ. ಮೈಕ್ರೋ ಎಟಿಎಂ ಮೂಲಕ ಸಾಲ ವಿತರಣೆ ಸೇರಿ ಹಣ ಡ್ರಾ, ಫಾವತಿ ಮಾಡುವ ವ್ಯವಸ್ಥೆಗೆ ಚಾಲನೆ ನೀಡುವ ಮೂಲಕ ಕೋಲಾರ ಡಿಸಿಸಿ ಬ್ಯಾಂಕ್ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ ಬಣ್ಣಿಸಿದರು.

    ಶಿಡ್ಲಘಟ್ಟ ತಾಲೂಕಿನ 11 ಸಹಕಾರಿ ಸಂಘಗಳಿಗೆ ಕಂಪ್ಯೂಟರ್ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ವ್ಯವಸ್ಥಾಪಕ ಆನಂದ್, ಮುಖಂಡರಾದ ಕೆ.ಎಂ.ವೆಂಕಟೇಶ್. ರಾಮಚಂದ್ರರೆಡ್ಡಿ, ಮುನಿರಾಜು, ಮುನಿಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts