More

    ವರುಣನ ಅಬ್ಬರಕ್ಕೆ ಜನಜೀವನ ತತ್ತರ

    ಕಲಬುರಗಿ: ಜಿಲ್ಲೆಯಲ್ಲಿ ಆರು ದಿನಗಳಿಂದ ವರುಣನ ಅಬ್ಬರ ಮುಂದುವರಿದಿದ್ದು, ಕಾಗಿಣಾ, ಕಮಲಾವತಿ, ಬೆಣ್ಣೆತೊರಾ, ಮುಲ್ಲಾಮಾರಿ ನದಿಗಳಲ್ಲಿ ಪ್ರವಾಹ ಸ್ಥಿತಿ ಹೆಚ್ಚಾಗಿದೆ. ಹಲವು ಹಳ್ಳಗಳು ಉಕ್ಕಿ ಹರಿಯುತ್ತಿರುವುದರಿಂದ ಸುಮಾರು 12 ಹಳ್ಳಿಗಳಿಗೆ ನೀರು ನುಗ್ಗಿದೆ.
    ಪ್ರವಾಹಕ್ಕೆ ಜೆಸ್ಕಾಂ ಇಂಜಿನಿಯರ್ ಬಲಿಯಾಗಿದ್ದಾರೆ. ಸೇಡಂ ಸಿಮೆಂಟ್ ಫ್ಯಾಕ್ಟರಿ, ಪೊಲೀಸ್ ಠಾಣೆಗೂ ನೀರು ನುಗ್ಗಿದೆ. ಕೆಲವೆಡೆ ಸಂಪರ್ಕ ಕಡಿತಗೊಂಡಿದೆ. ಹೊಲಗಳಲ್ಲಿ ನೀರು ನಿಂತು ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, 60ಕ್ಕೂ ಹೆಚ್ಚಿನ ಮನೆಗಳು ಕುಸಿದಿವೆ. ಹೀಗಾಗಿ ಜಿಲ್ಲಾಡಳಿತ ಕೂಡಲೇ ನೆರವಿಗೆ ಧಾವಿಸುವ ಕೆಲಸ ಮಾಡಬೇಕಾಗಿದೆ.
    ಶುಕ್ರವಾರ ನಸುಕಿನ ಜಾವ ಸೇಡಂ, ಚಿಂಚೋಳಿ, ಚಿತ್ತಾಪುರ ತಾಲೂಕುಗಳಲ್ಲಿ ಮಳೆಯಬ್ಬರ ಜೋರಾಗಿತ್ತು. ಸೇಡಂನಲ್ಲಿ ಎರಡು ಗಂಟೆಯಲ್ಲಿ ದಾಖಲೆಯ 133 ಮಿಮೀ ಮಳೆ ಸುರಿದಿದ್ದು, ಪಟ್ಟಣ ಹೊರವಲಯದ ವಾಸವದತ್ತ ಸಿಮೆಂಟ್ ಫ್ಯಾಕ್ಟರಿಗೆ ನೀರು ಹೊಕ್ಕಿದ್ದರಿಂದ ಉತ್ಪಾದನಾ ಕಾರ್ಯ ಸ್ಥಗಿತಗೊಳಿಸಲಾಗಿದೆ.
    ಮಳಖೇಡ ಸೇತುವೆ ಮೇಲೆ ನೀರು ಹರಿಯುತ್ತಿದ್ದರಿಂದ ಕಲಬುರಗಿ-ಸೇಡಂ ಸಂಪರ್ಕ ಕಡಿತಗೊಂಡಿದೆ. ಜಯತೀರ್ಥರ ವೃಂದಾವನ ಜಲಾವೃತಗೊಂಡಿದೆ. ಬಟಗೇರಾ ಸೇತುವೆ ಮುಳುಗಿದ್ದರಿಂದ ಸೇಡಂ-ಹೈದರಾಬಾದ್ ಸಂಪರ್ಕ ಕಡಿತಗೊಂಡಿದೆ. ಸೇಡಂ ಪಟ್ಟಣಕ್ಕೆ ಸಂಪಕರ್ಿಸುವ ಸುತ್ತಲಿನ ಹಳ್ಳಿಗಳ ಬಹುತೇಕ ರಸ್ತೆಗಳು ಬಂದ್ ಆಗಿವೆ. ಚಿತ್ತಾಪುರ, ಚಿಂಚೋಳಿ, ಸೇಡಂನಿಂದ ಹೈದರಾಬಾದ್ಗೆ ಸಂಪರ್ಕ ಕಲ್ಪಿಸುವ ಕುರಕುಂಟಾ ಬಳಿಯ ಸೇತುವೆ ಮೇಲೆ ನೀರು ಹರಿಯುತ್ತಿದೆ.
    ಸೇಡಂ ಪೊಲೀಸ್ ಠಾಣೆ ಆವರಣಕ್ಕೂ ನೀರು ಹೊಕ್ಕಿದೆ. ಕಚೇರಿಯಲ್ಲಿನ ಕಂಪ್ಯೂಟರ್ ಇತರ ದಾಖಲೆಗಳು ಹಾಳಾಗಿವೆ. ಕೊತ್ತಲ ಬಸವೇಶ್ವರ ದೇವಾಲಯಕ್ಕೂ ನೀರು ನುಗ್ಗಿದ್ದು, ಬಹುತೇಕ ಬಡಾವಣೆಗಳು ಜಲಾವೃತಗೊಂಡಿವೆ.

    ಬಾಕ್ಸ್
    ದಾಖಲೆ ಮಳೆ
    ಕಲಬುರಗಿ ನಗರದಲ್ಲಿ ಮಳೆರಾಯ ಕೊಂಚ ಬಿಡುವು ಕೊಟ್ಟಂತಿದ್ದರೂ ಬೆಳಗ್ಗಿನ ಜಾವ ಸ್ವಲ್ಪ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸರಾಸರಿ ಸೆ.1ರಿಂದ 18ರವರೆಗೆ 101 ಮಿಮೀ ಮಳೆ ಆಗಬೇಕಾಗಿತ್ತು. 168 ಎಂಎಂ ಮಳೆಯಾಗಿದೆ. ಕಲಬುರಗಿ ತಾಲೂಕಿನಲ್ಲಿ ಸೆ.12ರಿಂದ 18ರವರೆಗೆ ಸಾಮಾನ್ಯವಾಗಿ 41 ಎಂಎಂ ಮಳೆ ಆಗಬೇಕಿತ್ತು. ಆದರೀಗ ಸರಾಸರಿ 123 ಎಂಎಂ ಮಳೆಯಾಗಿದ್ದು, ಶೇ.201 ಹೆಚ್ಚಾಗಿದೆ. ಸೇಡಂನಲ್ಲಿ ಕೇವಲ ಎರಡು ಗಂಟೆ ಅವಧಿಯಲ್ಲಿ ದಾಖಲೆಯ 133 ಮಿಮೀ ಮಳೆ ಸುರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts