More

    ವಯನಾಡಿನಲ್ಲಿ ಕಾಂಗ್ರೆಸ್​ ಬ್ಯಾನರ್​, ಫ್ಲೆಕ್ಸ್​ ಇಲ್ಲದೇ ರಾಹುಲ್​ ನಾಮಪತ್ರ ಸಲ್ಲಿಕೆ: ಸಿ.ಸಿ. ಪಾಟೀಲ ವ್ಯಂಗ್ಯ

    ವಿಜಯವಾಣಿ ಸುದ್ದಿಜಾಲ ಗದಗ
    ರಾಹುಲ್​ ಗಾಂಧಿ ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್​ ಪಕ್ಷದ ಬ್ಯಾನರ್​, ್ಲೆಕ್ಸ್​ ಗಳನ್ನು ಪ್ರದಶಿರ್ಸಬಾರದು ಎಂದು ಅಲ್ಲಿನ ಮುಸ್ಲಿಂ ಲೀಗ್​ ನಿರ್ಧಾರ ಕೈಗೊಂಡಿತು. ಕಾಂಗ್ರೆಸ್​ ಪಕ್ಷದ ಫ್ಲೆಕ್ಸ್​, ಬ್ಯಾನರ್​ ಇಲ್ಲದೇ ರಾಹುಲ್​ ಗಾಂಧಿ ನಾಮ ಪತ್ರ ಸಲ್ಲಿಸಿದರು. ಇದೇನಾ ಅವರ ಕಾಂಗ್ರೆಸ್​ ಪಕ್ಷದ ನಿಷ್ಠೆ? ಎಂದು ಸಿ.ಸಿ. ಪಾಟೀಲ ಪ್ರಶ್ನಿಸಿದರು.
    ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಯನಾಡಿನ ಮುಸ್ಲಿ ಲೀಗ್​ ನಿರ್ಧಾರಕ್ಕೆ ತಲೆ ಬಾಗಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತಮ್ಮ ಪಕ್ಷದ ಸಿದ್ಧಾಂತಕ್ಕೆ ಅಪಮಾನ ಮಾಡಿದ್ದಾರೆ ಮತಬ್ಯಾಂಕ್​ ಗಾಗಿ ಈ ರೀತಿ ವತಿರ್ಸಿರುವುದು ಇತಿಹಾಸದಲ್ಲೇ ನಡೆದಿಲ್ಲ. ಇಂತವರಿಂದ ಬಿಜೆಪಿ ಪಾಠ ಕಲಿಯುವ ಅಗತ್ಯವಿಲ್ಲ. ಸಂವಿಧಾನ ರಕ್ಷಣೆ ಬಿಜೆಪಿ ಅವರಿಂದಲೇ ಸಾಧ್ಯ ಎಂದರು.
    ಕಾಂಗ್ರೆಸ್​ ಜನರಿಗೆ ಬೋಗಸ್​ ಪ್ರಣಾಳಿಕೆ ನೀಡಿದೆ. ಕಾಂಗ್ರೆಸ್​ ಇಂಡಿಯಾ ಮೈತ್ರಿಕೂಟ ರಚಿಸಿಕೊಂಡಿದೆ. ಆದರೆ ಸದ್ಯ ಬಿಡುಗಡೆಯಾಗಿರುವು ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆ ಅಲ್ಲ. ಅದು ಕಾಂಗ್ರೆಸ್​ ಪ್ರಣಾಳಿಕೆ. ಕೇಂದ್ರದಲ್ಲಿ ಅಧಿಕಾರ ನಡೆಸುವಷ್ಟು ಸಂಖ್ಯೆಯ ಅಭ್ಯಥಿರ್ಗಳನ್ನು ಕಾಂಗ್ರೆಸ್​ ಕಣಕ್ಕಿಳಿಸಿಲ್ಲ. ಇನ್ನು ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಲೇವಡಿ ಮಾಡಿದರು.
    ಕಾರ್ಯಕರ್ತರಿಗೆ ಧನ್ಯವಾದ:
    ಹಾವೇರಿ- ಗದಗ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯ ಯಶಸ್ವಿಯಾಗಿ ಜರುಗಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಯೊಂದು ಹಳ್ಳಿ, ವಾರ್ಡಗಳಿಗೂ ಭೇಟಿ ನೀಡಿ ಪ್ರಚಾರ ನಡೆಸಿದ್ದಾರೆ. ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಜನ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬಸವರಾಜ ಬೊಮ್ಮಾಯಿ ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದರು.
    ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳಿಗೆ ನಾವು ವಿರೋಧ ಮಾಡುತ್ತಿಲ್ಲ. ಆದರೆ ಜನರಿಗೆ ಸುಳ್ಳು ಹೇಳಿ ಮತ ಪಡೆಯುವುದು ತಪ್ಪು. ಅಧಿಕಾರಕ್ಕಾಗಿ ಸುಳ್ಳು ಹೇಳುವುದು, ಸಚಿವರು, ಶಾಸಕರು, ಅವರ ಮಕ್ಕಳು, ಮೊಮ್ಮಕ್ಕಳನ್ನು ಕಣಕ್ಕಿಳಿಸಿರುವುದು ನೋಡಿದರೆ, ಅಧಿಕಾರದ ಆಸೆ ಎಷ್ಟರಮಟ್ಟಿಗೆ ಇದೆ ಎನ್ನುವುದು ಅರ್ಥವಾಗುತ್ತದೆ. ಇಂಥವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

    ಕಾಂಗ್ರೆಸ್​ ಕಿತ್ತುಕೊಂಡಿದ್ದೇ ಹೆಚ್ಚು:
    ಕಾಂಗ್ರೆಸ್​ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೆ ಹೆಚ್ಚು. ಕಿಸಾನ್​ ಸಮ್ಮಾನ್​ ಯೋಜನೆಯ 4 ಸಾವಿರ ಕೊಡುವುದನ್ನು ನಿಲ್ಲಿಸಿದರು. ಬಾಂಡ್​ ದರ ಹೆಚ್ಚಳ ಮಾಡಿದರು, ಹಾಲಿನ ದರ ಏರಿಕೆ, 13 ಸಾವಿರ ಕೋಟಿ ರೂಪಾಯಿ ಎಸ್​ ಇಪಿ, ಟಿಎಸ್​ ಪಿ ಹಣವನ್ನು ಹಿಂದಕ್ಕೆ ಪಡೆದರು. ಇಷ್ಟೆಲ್ಲಾ ಮಾಡಿದರೂ ಕಾಂಗ್ರೆಸ್​ ಸರ್ಕಾರ ಆಥಿರ್ಕವಾಗಿ ದಿವಾಳಿಯಾಗಿದೆ. ಸರ್ಕಅರ ನಿಜವಾಗಿಯೂ ಆಥಿರ್ಕವಾಗಿ ಸುಭದ್ರವಾಗಿದ್ದರೆ ತಕ್ಷಣ ಆಥಿರ್ಕ ಸ್ಥಿತಿಗತಿಯ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
    ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಇತರರು ಉಪಸ್ಥಿತರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts