More

    ವನ್ಯಜೀವಿ ಬೇಟೆಗಾರರ ಜಾಲ ಸಕ್ರಿಯ ಸಾಧ್ಯತೆ

    ಕಲಘಟಗಿ: ತಾಲೂಕಿನ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಬೇಟೆಗಾರರ ಜಾಲ ಸಕ್ರಿಯವಾಗಿರುವ ಅನುಮಾನ ಮೂಡಿದೆ. ಈ ಹಿಂದೆಯೂ ಬೇಟೆಗಾರರ ಕಾಟ ಹೆಚ್ಚಾದ ಕುರಿತು ದೂರುಗಳು ಕೇಳಿ ಬಂದಿದ್ದವು. ಆಗ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆಯವರು ಕಠಿಣ ಕ್ರಮ ಕೈಗೊಂಡಿದ್ದರು. ಹೀಗಾಗಿ, ಬೇಟೆ ಚಟುವಟಿಕೆ ತಟಸ್ಥಗೊಂಡಿದ್ದವು. ಆದರೆ, ಲಾಕ್​ಡೌನ್ ಘೊಷಣೆಯಾದಾಗಿನಿಂದ ಬೇಟೆಗಾರರ ಜಾಲಗಳು ಕಾರ್ಯಪ್ರವೃತ್ತವಾಗಿವೆ ಎನ್ನಲಾಗುತ್ತಿದೆ.

    ಕಳೆದ ಫೆಬ್ರವರಿಯಲ್ಲಿ ತಾಲೂಕಿನ ಹಸರಂಬಿ ಬಳಿಯ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿ ಬೇಟೆಗಾರರನ್ನು ಬಂಧಿಸಿ ಅವರಿಂದ ಶಸ್ತ್ರಾಸ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ತಾಲೂಕು ಅರಣ್ಯ ವ್ಯಾಪ್ತಿಯಲ್ಲಿ ಬೇಟೆಯಾಡಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಜಿಂಕೆಯ ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಅರಣ್ಯಾಧಿಕಾರಿಗಳು ಇತ್ತೀಚೆಗೆ ಭೇದಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಇದಕ್ಕೆ ನಿದರ್ಶನವಾಗಿದೆ.

    ತಾಲೂಕಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಂದ್ಲಿ, ಸಂಗಮೇಶ್ವರ, ದೇವಿಕೊಪ್ಪ, ತಂಬೂರ, ಹಸರಂಬಿ, ಬಿರವಳ್ಳಿ, ಬೆಂಡಲಗಟ್ಟಿ ಮುಂತಾದ ಗ್ರಾಮಗಳ ಸುತ್ತಮುತ್ತ ತಿಂಗಳಲ್ಲಿ ಎರಡ್ಮೂರು ದಿನ ವನ್ಯಜೀವಿ ಬೇಟೆಗಾರರು ಬಿಡಾರ ಹೂಡುತ್ತಾರೆ. ಕಾಡು ಹಂದಿ, ನವಿಲು, ಜಿಂಕೆಗಳನ್ನು ಬೇಟೆಯಾಡುತ್ತಾರೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

    ಬೇಟೆಗಾರರಿಂದ ತಪ್ಪಿಸಿಕೊಳ್ಳುವ ಕೆಲ ಕಾಡುಪ್ರಾಣಿಗಳು ಗ್ರಾಮದೊಳಗೆ ನುಗ್ಗುತ್ತಿವೆ ಎಂಬ ದೂರುಗಳೂ ಕೇಳಿ ಬರುತ್ತಿವೆ. ಬೇಟೆಗಾರರಿಂದ ತಪ್ಪಿಸಿಕೊಳ್ಳುವ ಜಿಂಕೆಗಳು, ಕಾಡುಹಂದಿಗಳು ಜಮೀನು ಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.

    ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಕೆಲವರನ್ನು ಈಗಾಗಲೆ ಬಂಧಿಸಲಾಗಿದೆ. ಕಾಡುಗಳ್ಳರ ಹಾಗೂ ವನ್ಯಜೀವಿ ಬೇಟೆಗಾರರ ಕುರಿತು ಸುಳಿವು ಸಿಕ್ಕಲ್ಲಿ ಸಾರ್ವಜನಿಕರು ಕೂಡಲೆ ಅರಣ್ಯ ಇಲಾಖೆಗಾಗಲಿ ಅಥವಾ ಮೊ.ಸಂ-81053 44308ಗೆ ಕರೆ ಮಾಡಿ ಮಾಹಿತಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಹಕರಿಸಬೇಕು ಎಂದರು.

    | ಶ್ರೀಕಾಂತ ಪಾಟೀಲ ವಲಯ ಅರಣ್ಯಾಧಿಕಾರಿ ಕಲಘಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts