More

    ವಚನ ಸಾಹಿತ್ಯ ಮುಂದಿನ ತಲೆಮಾರಿಗೂ ತಲುಪಲಿ – ಸಾಹಿತಿ ಫೈಜ್ನಟ್ರಾಜ್ ಆಶಯ  -ಉಪನ್ಯಾಸ ಕಾರ್ಯಕ್ರಮ

    ದಾವಣಗೆರೆ: ಸಮಾಜದ ಬದಲಾವಣೆಗೆ ಮುನ್ನುಡಿ ಬರೆದ ವಚನ ಸಾಹಿತ್ಯವನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯಬೇಕು ಎಂದು ಸಾಹಿತಿ ಫೈಜ್ನಟ್ರಾಜ್ ಹೇಳಿದರು.
    ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಬಸವಾಪಟ್ಟಣದ ಜನತಾ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಬಸವಾದಿ ಶರಣರು ಸಮಾಜದ ಬದಲಾವಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯದ ಮೂಲಕ ಜಗತ್ತಿಗೆ ಸಂದೇಶ ಸಾರುವ ಮೂಲಕ ಸಮಾಜದ ಪರಿವರ್ತನೆ ಹಾಗೂ ಮೌಢ್ಯ ತೊಡೆದು ಹಾಕಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.
    ವಚನಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಉನ್ನತರನ್ನು ಒಳಗೊಂಡು ಪ್ರತಿಯೊಬ್ಬರ ಜೀವನಾನುಭದಿಂದ ರೂಪಿತವಾದ ಅನುಭವಜನ್ಯ ಪ್ರಮಾಣಗಳು. ಆದುದರಿಂದ ಅವು ಜೀವನದ ಸಾರ್ಥಕತೆಗೆ ತೀರಾ ಹತ್ತಿರವಾಗಿವೆ ಎಂದರು.
    ಬಸವಾದಿ ಶರಣರು ದಿವ್ಯ ಜ್ಞಾನದ ಪರಿಚಯವನ್ನು, ಪ್ರೇರಕ ಶಕ್ತಿಯ ರೂಪದಲ್ಲಿ ವಚನಸಾಹಿತ್ಯದ ಮೂಲಕ ಮನುಕುಲಕ್ಕೆ ನೀಡಿದ್ದಾರೆ. ಅತಿ ಸರಳ ಹಾಗೂ ಆಡು ಭಾಷೆಯಲ್ಲಿನ ವಚನ ಸಾಹಿತ್ಯ ನಮ್ಮ ತಲೆಮಾರಿಗೆ ಕೊನೆಯಾಗದೆ ಮುಂದಿನ ಪೀಳಿಗೆಗೂ ತಲುಪಿಸಬೇಕು ಎಂದು ಆಶಿಸಿದರು.
    ಜನತಾ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಜಿ. ಮಂಜುನಾಥಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಸಂವರ್ಧನೆಗಾಗಿ 1915ರಂದು ಜನ್ಮ ತಾಳಿದ ಕನ್ನಡಿಗರ ನಾಡಗುಡಿಯಾದ ಸಾಹಿತ್ಯ ಪರಿಷತ್ತು ಜನಮಾನಸದಲ್ಲಿ ನೆಲೆಸಿದೆ. ಶತಮಾನದಿಂದಲೂ ಕನ್ನಡ ನೆಲ, ಜಲ, ಭಾಷೆಯ ವಿಚಾರಗಳಿಗೆ ಧ್ವನಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
    ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಪ್ರಾಸ್ತಾವಿಕ ಮಾತನಾಡಿ, ಪರಿಷತ್ತು ನಡೆದು ಬಂದ ದಾರಿ ಹಾಗೂ ದತ್ತಿಯ ಮಹತ್ವ ತಿಳಿಸಿದರು.
    ಶಿಕ್ಷಕ ಆರ್.ಎಂ. ಮಹಾದೇವಪ್ಪ, ಎಂ.ಬಿ. ಜಯಣ್ಣ, ತ್ಯಾಗರಾಜ್, ಕೆ.ಪಿ. ಜಯಪ್ಪ, ಎಂ.ಜಿ. ಶಿವಕುಮಾರ್, ಕೆ.ಎಸ್. ಪುಷ್ಪಾವತಿ, ಎಂ.ಎಸ್. ನಾಗರಾಜ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts