More

    ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿ: ವಕೀಲರ ಮೇಲೆ ಪದೇ ಪದೆ ಹಲ್ಲೆ

    ಸಾಗರ: ಸರ್ಕಾರ ಮತ್ತು ಜನರಿಗೆ ಕಾನೂನು ರಕ್ಷಣೆ ನೀಡುವ ವಕೀಲರಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ವಕೀಲರ ಮೇಲೆ ಪದೇ ಪದೆ ಹಲ್ಲೆಯಂತಹ ಕೃತ್ಯಗಳು ನಡೆಯುತ್ತಿದೆ ಎಂದು ಹಿರಿಯ ನ್ಯಾಯವಾದಿ ಕೆ.ಎನ್.ಶ್ರೀಧರ್ ಹೇಳಿದರು.
    ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಚರ್ಚಿಸಿ ಅನುಮೋದಿಸಿ ಜಾರಿಗೆ ತರುವಂತೆ ಒತ್ತಾಯಿಸಿ ಸಾಗರ ವಕೀಲರ ಸಂಘದಿಂದ ಶುಕ್ರವಾರ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಶ್ರೀಧರ್, ವಕೀಲರು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗದೆ ಇರುವುದರಿಂದ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು. ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆ ಬಗ್ಗೆ ಚರ್ಚೆ ಮಾಡಲು ಒತ್ತಾಯಿಸಲು ರಾಜ್ಯದ ವಕೀಲರು ಬೆಳಗಾವಿ ವಿಧಾನ ಸೌಧದೆದುರು ಪ್ರತಿಭಟನೆ ನಡೆಸುವತ್ತ ಗಮನ ಹರಿಸಬೇಕು, ವಕೀಲರ ಶ್ರೇಯೋ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಬೇಕು ಎಂದರು.
    ಹಿರಿಯ ನ್ಯಾಯವಾದಿ ಎಂ.ಎಸ್.ಗೌಡರ್ ಮಾತನಾಡಿ, ಸರ್ಕಾರಿ ನೌಕರರಿಗೆ ನಿರ್ದಿಷ್ಟ ಸಂಬಳ, ಸಾರಿಗೆ ಸೇರಿದಂತೆ ಎಲ್ಲ ವ್ಯವಸ್ಥೆ ಇದೆ. ಆದರೆ ವಕೀಲರಿಗೆ ಸಂಬಳ ಇಲ್ಲ. ಕಾನೂನಿಗೆ ತಲೆಬಾಗಿ, ಜನರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಕೀಲರ ಪಾತ್ರ ಮಹತ್ವದ್ದು. ನ್ಯಾಯದಾನ ಮಾಡುವ ವಕೀಲರನ್ನು ಹಿಮ್ಮೆಟ್ಟಿಸುವ ಪ್ರಯತ್ನ ಪದೆಪದೆ ನಡೆಯುತ್ತಿದೆ. ನ್ಯಾಯಾಧೀಶರಿಗೆ ಸೂಕ್ತ ಕಾನೂನು ರಕ್ಷಣೆ ಇರುತ್ತದೆ. ಅಂತಹದ್ದೆ ರೀತಿಯ ಕಾನೂನು ವಕೀಲರಿಗೂ ಅಗತ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts