More

    ವಂಟಮೂರಿಯಲ್ಲಿ ಪುನೀತ್ ಪುತ್ಥಳಿ ಸ್ಥಾಪಿಸಿ

    ಬೆಳಗಾವಿ: ನಗರದ ಮಾಳಮಾರುತಿ ಬಡಾವಣೆಯ ವಂಟಮೂರಿ ವೃತ್ತದಲ್ಲಿ ಪುನೀತ್ ರಾಜಕುಮಾರ ಪುತ್ಥಳಿ ಸ್ಥಾಪನೆ ಹಾಗೂ ವಂಟಮೂರಿ ರಸ್ತೆಗೆ ಪುನೀತ್ ರಸ್ತೆ ಎಂದು ನಾಮಕಾರಣ ಮಾಡುವಂತೆ ಒತ್ತಾಯಿಸಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘ (ರಿ) ಹಾಗೂ ಕರವೇ ನಾರಾಯಣಗೌಡ ಬಣದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದರು.

    ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿದ ಪದಾಧಿಕಾರಿಗಳು, ಗಡಿಭಾಗದಲ್ಲಿ ಕನ್ನಡಿಗರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ, ಕನ್ನಡಕ್ಕಾಗಿ ಹಾಗೂ ಕನ್ನಡಿಗರಿ ಗಾಗಿ ಸಾಕಷ್ಟು ಸೇವೆ ಸಲ್ಲಿಸಿರುವ ಪುನೀತ್ ರಾಜಕುಮಾರ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವೂ ಆಗಿದೆ ಎಂದು ಒತ್ತಾಯ ಮಾಡಿದರು.

    ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಕೇವಲ ಚಿತ್ರರಂಗಕ್ಕಷ್ಟೇ ಸೀಮಿತರಾ ಗದೆ ಸಿನಿಮಾಗಳ ಆಚೆಗೂ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸೇವೆ ಸಲ್ಲಿಸಿದ ಪುನೀತ್ ಅವರ ಕಾರ್ಯ ಸರ್ವಕಾಲಕ್ಕೂ ಅನುಕರಣೀಯವಾಗಿದೆ. ಹಾಗಾಗಿ, ಅಂಥ ನಿಸ್ವಾರ್ಥ ಸೇವೆ ಮಾಡುವವರಿಗೆ ಸ್ಫೂರ್ತಿ ತುಂಬಲು ಇದಕ್ಕಿಂತ ಮಹತ್ವದ ಕಾರ್ಯ ಮತ್ತೊಂದಿಲ್ಲ.

    ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯು ಕ್ತರು ಕೂಡಲೇ ಅನುಮತಿ ನೀಡುವ ಮೂಲಕ ಸಹಕರಿಸಬೇಕು ಎಂದರು. ಇದಕ್ಕೂ ಮುನ್ನ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು, ಮೆರವಣಿಗೆ ಮೂಲ ಜಿಲ್ಲಾಧಿ ಕಾರಿ ಕಚೇರಿ ಆವರಣ ತಲುಪಿ, ಮನವಿ ಸಲ್ಲಿಸಿದರು. ಬಳಿಕ ಮಹಾನಗರ ಪಾಲಿಕೆ ಆಯುಕ್ತರಿಗೂ ಮನವಿ ಸಲ್ಲಿಸಿ, ಶೀಘ್ರ ಅನುಮತಿ ನೀಡ ಸಹಕರಿಸಿ ಎಂದು ಕೋರಿದರು. ಸಂಘದ ಅಧ್ಯಕ್ಷ ಪ್ರಕಾಶ ತಳವಾರ, ಶೇಖರ ಕಾಲೇರಿ, ಬೀರಾ ಅನಗೋಳಕರ, ಆಕಾಶ ಮುಚ್ಚಂಡಿ, ರವಿ ದೊಡ್ಡಮನಿ ಇತರರಿದ್ದರು.

    ಅಭಿಮಾನಿ ಬಳಗದ ಒತ್ತಾಯ: ಬೆಳಗಾವಿ ಮಾಳಮಾರುತಿ ಬಡಾವಣೆಯ ವಂಟಮೂರಿ ಕಾಲನಿ ವೃತ್ತದಲ್ಲಿ ಖ್ಯಾತ ನಟ ದಿ. ಪುನೀತ್ ರಾಜ್‌ಕುಮಾರ ಅವರ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿ ಡಾ.ಅಂಬೇಡ್ಕರ್ ಕ್ರಾಂತಿ ಯುವ ವೇದಿಕೆ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಲಾಯಿತು. ದಿ. ಪುನೀತ್ ರಾಜಕುಮಾರ ಅವರು ತಮ್ಮ ಅದ್ಭುತ ನಟನೆಯಿಂದ ವಿದೇಶದಲ್ಲೂ ಕನ್ನಡ ಪ್ರೀತಿ ಹಬ್ಬುವಂತೆ ಮಾಡಿದ್ದಾರೆ. ಅಗಾಧ ಪ್ರತಿಭೆ ಮೂಲಕ ಮೇರುನಟನಾಗಿದ್ದ ಅವರ ಸ್ಮರಣಾರ್ಥ ವಂಟಮೂರಿ ಕಾಲನಿ ವೃತ್ತದಲ್ಲಿ ಅವರ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿದರು. ಶಿವರಾಜ ರಂಗಾಪುರಿ, ಆಕಾಶ ಮುಚ್ಚಂಡಿ, ರವಿ ದೊಡ್ಡಮನಿ, ಗೋಪಿ ರಾಥೋಡ, ರಾಕೇಶ, ಸೋಮು ಇತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts