More

    ಲೋಕಸಭಾ ಚುನಾವಣೆಗೆ 26ಕ್ಕೆ ಮತದಾನ

    ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏ.26ರಂದು ನಡೆಯಲಿರುವ ಮತದಾನಕ್ಕಾಗಿ ಸಕಲ ಸಿದ್ಧತೆಗಳಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಬ್ಬರು ಮಹಿಳೆಯರು ಹಾಗೂ 18 ಪುರುಷರು ಸೇರಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಂದು ಬೆಳಗ್ಗೆ 7ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ. ವೋಟರ್ ಐಡಿ ಅಥವಾ ಗೊತ್ತುಪಡಿಸಿರುವ ವಿವಿಧ ದಾಖಲೆಗಳನ್ನು ಪರ್ಯಾಯವಾಗಿ ಹಾಜರುಪಡಿಸಿ ಮತದಾನ ಮಾಡಬಹುದು ಎಂದರು.
    4336 ಬ್ಯಾಲೆಟ್, ಹೆಚ್ಚುವರಿ 946 ಯೂನಿಟ್, 2168 ಕಂಟ್ರೋಲ್ ಯೂನಿಟ್ ಹಾಗೂ ಹೆಚ್ಚುವರಿ 642 ಹಾಗೂ 2168 ವಿವಿ ಪ್ಯಾಟ್ ಹಾಗೂ 745 ವಿವಿ ಪ್ಯಾಟ್‌ಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ಒಟ್ಟು ಬೂತ್‌ಗಳ ಪೈಕಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಲಾ ಐದರಂತೆ 30 ಸಖಿ, ತಲಾ ಒಂದರಂತೆ ಅಂಗವಿಕಲ, ಯುವ, ಥೀಮ್ ಹಾಗೂ ಎಥ್ನಿಕ್ ಬೂತ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
    ತುಮಕೂರು ಜಿಲ್ಲೆ ಶಿರಾ ಮತ್ತು ಪಾವಗಡ ಸೇರಿ ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 9,25,543 ಪುರುಷರು, 9,31,222 ಮಹಿಳೆಯರು ಹಾಗೂ 104 ಇತರ ಸೇರಿ 18,56,876 ಮತದಾರರಿದ್ದಾರೆ. ಶಿರಾದಲ್ಲಿ ಒಂದು ಹೆಚ್ಚುವರಿ ಸೇರಿ 2168 ಬೂತ್‌ಗಳಿವೆ. ಎಂದರು.
    ಚುನಾವಣೆ ಕರ್ತವ್ಯಕ್ಕೆ 9,904 ಮತಗಟ್ಟೆ ಅಧಿಕಾರಿ,ಸಿ ಬ್ಬಂದಿ ನೇಮಕವಾಗಿದ್ದಾರೆ. 17.48 ಲಕ್ಷ ವೋಟರ್ ಸ್ಲಿಪ್ ವಿತರಿಸಲಾಗಿದೆ. 11 67ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಇರುತ್ತದೆ. 386 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಿಸಲಾಗಿದೆ. ಏ.25, 26ರಂದು ಡಿ ಮಸ್ಟರಿಂಗ್ ನಡೆಯಲಿದೆ. 25ರಂದು ರ‌್ಯಾಂಡಮೈಸೇಷನ್ ಮೂಲಕ ಇವಿಎಂಗಳ ಹಂಚಿಕೆ ಆಗಲಿದೆ ಎಂದು ಮಾಹಿತಿ ನೀಡಿದರು.
    ಎಡಿಸಿ ಬಿ.ಟಿ.ಕುಮಾರಸ್ವಾಮಿ, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸ್‌ಪಿ ಧರ್ಮೆಂದರ್‌ಕುಮಾರ್ ಮೀನಾ ಇದ್ದರು.

    *ಕ್ಷೇತ್ರ ಬಿಟ್ಟು ತೆರಳಬೇಕು
    ಮತದಾನ ಮುಕ್ತಾಯವಾಗುವ 48 ಗಂಟೆ ಅವಧಿ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ಆದರೆ, ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಯಾಚಿಸಬಹುದು ಎಂದು ಡಿಸಿ ತಿಳಿಸಿದರು.. ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಟ್ಟು ತೆರಳಬೇಕು. ಮತದಾನ ದಿನದಂದು ರಜೆ ಘೋಷಿಸಲಾಗಿದೆ. ಏ.24ರ ಸಂಜೆ 6ರಿಂದ 26ರ ಮಧ್ಯರಾತ್ರಿ 12ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ 7.52 ಕೋ ಟಿ ರೂ. ಮೌಲ್ಯದ ನಗ, ನಗದು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

    ಬಂದೋಬಸ್ತ್
    ಶಾಂತಿಯುತ ಮತದಾನಕ್ಕಾಗಿ 3300 ಪೊಲೀಸರು ಹಾಗೂ 900 ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ 1808 ಜನರ ವಿರುದ್ಧ ಬಾಂಡ್‌ಓವರ್ ಜರುಗಿಸಲಾಗಿದೆ. 8 ಜನರನ್ನು ಗಡಿಪಾರು ಮಾಡಲಾಗಿದೆ. ಜಿಲ್ಲೆಗೆ 2 ಸಿಆರ್‌ಪಿಎಫ್ ಕಂಪನಿಗಳು ಬಂದಿವೆ. ಸ್ಟ್ರಾಂಗ್‌ರೂಮ್, ಮತ ಎಣಿಕೆ ಕೇಂದ್ರಕ್ಕೂ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ವೆಂಕಟೇಶ್ ತಿಳಿಸಿದರು.

    *ಕಂಟ್ರೋಲ್ ರೂಂ ಸ್ಥಾಪನೆ
    ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್ ರೂಂ.ಗಳನ್ನು ತರೆಯಲಾಗಿದೆ. ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಕಂಟ್ರೋಲ್ ರೂಂ. ಸಂಖ್ಯೆ 1950 ಹಾಗೂ ಮೊಳಕಾಲ್ಮೂರು (08198-229234), ಚಳ್ಳಕೆರೆ (08195-295095), ಚಿತ್ರದುರ್ಗ (08194-222416), ಹಿರಿಯೂರು (08193-263226), ಹೊಸದುರ್ಗ (08199-295058), ಹೊಳಲ್ಕೆರೆ (08191-200013) ಸಾರ್ವಜನಿಕರು ಕರೆ ಮಾಡಬಹದು.

    ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ
    ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ಹಲವು ಜಾಗೃತಿ ಕಾರ‌್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ. ಅತಿ ಹೆಚ್ಚು ಮತದಾನವಾದ ಮತಗಟ್ಟೆಯ ಅಧಿಕಾರಿಗಳನ್ನು ಗೌರವಿಸಲಾಗುವುದು ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts