More

    ಲಿಂಗಾಯತ ಜಾತಿ ಬಲಿಷ್ಠ

    ಅಥಣಿ: ರಾಜ್ಯಕ್ಕೆ ಏಳು ಜನ ಮುಖ್ಯಮಂತ್ರಿಗಳನ್ನು ನೀಡಿರುವ ಬಣಜಿಗ ಸಮುದಾಯ ಬುದ್ಧಿವಂತ ಸಮುದಾಯವಾಗಿದೆ. ಅಖಂಡ ವೀರಶೈವ ಲಿಂಗಾಯತ ಸಮುದಾಯವನ್ನು ಒಂದಾಗಿ ಸರಿದೂಗಿಸಿಕೊಂಡು ಹೋಗುವ ಶಕ್ತಿ ಬಣಜಿಗ ಸಮುದಾಯಕ್ಕಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

    ಪಟ್ಟಣದ ಶಿವಣಗಿ ಭವನದಲ್ಲಿ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಲಿಂಗಾಯತ ಒಳಪಂಗಡಗಳು ಒಳಜಾತಿ ಜಗಳದಿಂದ ಕಚ್ಚಾಡದೆ ಒಗ್ಗಟ್ಟು ಪ್ರದರ್ಶಿಸಿದಲ್ಲಿ ಎಲ್ಲ ಜಾತಿಗಳಿಗಿಂತಲೂ ಬಲಿಷ್ಠವಾಗಲು ಸಾಧ್ಯವಿದೆ ಎಂದರು.

    ಜಾತಿ ಸಮೀಕರಣದಲ್ಲಿ ಸ್ಪಷ್ಟವಾದ ಮಾಹಿತಿ ಬಂದಿಲ್ಲ. ಕೇವಲ ಊಹಾಪೋಹಗಳಿಂದ ಕೆಲವು ಲೋಪದೋಷಗಳು ಕಂಡುಬಂದರೂ ಅವು ಅಧಿಕೃತವಾಗಿಲ್ಲ. ಅಂಗನವಾಡಿ ಕಾರ್ಯಕರ್ತರಿಂದ ಸಮೀಕ್ಷೆ ನಡೆಸಲಾಗಿದೆ. ಇಲ್ಲಿ ಕೆಲವು ನಿಜಸಂಗತಿಗಳು ಮರೆಮಾಚಿದ್ದು, ಕೆಲವು ಪುಟಗಳು ಸಹ ಸೋರಿಕೆಯಾಗಿರುವ ಕುರಿತು ಅಲ್ಲಲ್ಲಿ ಚರ್ಚೆಗಳಾಗುತ್ತಿವೆ. ಸರ್ಕಾರಕ್ಕೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಬಂದ ಬಳಿಕ ಚರ್ಚೆ ಮಾಡಲಾಗುವುದು ಎಂದರು.

    ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ರಾಜಕಾರಣದಲ್ಲಿ ಜಾತೀಯತೆ ಹೋಗಿ ಸಮಾನತೆ ಬರಬೇಕೆನ್ನುವುದು ಸರ್ಕಾರದ ಆಶಯ. 15ರಿಂದ 20ವರ್ಷಗಳಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗಿದ್ದು, ವ್ಯವಸ್ಥೆ ಬದಲಾಗಬೇಕು ಎಂದರು. ವೈದ್ಯ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಬಣಜಿಗ ಸಮುದಾಯದ ತಾಲೂಕು ಘಟಕ ಪ್ರತಿವರ್ಷ ಹತ್ತಾರು ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದರು.

    ಹಿರಿಯ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಜಾತಿಗಣತಿಯಲ್ಲಿ ಲಿಂಗಾಯತ ಸಮುದಾಯ 3ನೇ ಸ್ಥಾನಕ್ಕೆ ಇಳಿದಿರುವುದು ಕಳವಳಕಾರಿ ಸಂಗತಿಯಾಗಿದ್ದು, ಇದರ ಬಗ್ಗೆ ಚಿಂತನೆ ನಡೆಸಬೇಕು ಎಂದರು.

    ಸಾನ್ನಿಧ್ಯ ವಹಿಸಿದ್ದ ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಬಣಜಿಗ ಸಮುದಾಯದವರ ಸೇವೆ ನಿರಂತರವಾಗಿರಲೆಂದರು.
    ಶಂಕರ ಬುರ್ಲಿ, ಸಮುದಾಯದ ಅಧ್ಯಕ್ಷ ಸಂಗಪ್ಪ ಉಣ್ಣಿ, ಎ.ಎಸ್.ನಿಡೋಣಿ, ಶಿವಯೋಗಿ ಗೆಜ್ಜಿ, ಶಿವಶಂಕರ ಹಂಜಿ, ಮಲ್ಲಿಕಾರ್ಜುನ ಕನಶೆಟ್ಟಿ, ಸಂತೋಷ ಸಾವಡಕರ, ಉದಯಕುಮಾರ ಸೊಳಸಿ, ಮಹೇಶ ಚುನಮುರಿ, ಆನಂದ ಪಾಂಗಿ, ಅಕ್ಷಯ ಬುರ್ಲಿ, ಅನವೀರ ಅಣೆಪ್ಪನವರ, ಅಭಯ ಸಗರಿ, ಶಿವಲೀಲಾ ಪಟ್ಟಣಶೆಟ್ಟಿ, ಮಹಾಂತೇಶ ಉಕ್ಕಲಿ, ಕಿರಣ ಬುರ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts