More

    ಲಿಂಗಾಯತ ಜಾತಿ ಪ್ರಮಾಣಪತ್ರ ನೀಡಿ

    ಧಾರವಾಡ: ತಹಸೀಲ್ದಾರ್ ಕಚೇರಿಗಳಲ್ಲಿ ಲಿಂಗಾಯತರಿಗೆ ವೀರಶೈವ ಲಿಂಗಾಯತ ಎಂದು ಜಾತಿ ಪ್ರಮಾಣಪತ್ರ ನೀಡಲಾಗುತ್ತಿದೆ. ಅದರ ಬದಲು ಕೇವಲ ಲಿಂಗಾಯತ ಎಂದು ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿ ನಗರದ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ನೇತೃತ್ವದಲ್ಲಿ ವಿವಿಧ ಮಠಾಧೀಶರು ಹಾಗೂ ಸಾರ್ವಜನಿಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

    ಈ ಕುರಿತು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರಿಗೆ ಮನವಿ ಸಲ್ಲಿಸಿದ ಸ್ವಾಮೀಜಿಗಳು, ಲಿಂಗಾಯತ ಸಮುದಾಯಕ್ಕೆ ವೀರಶೈವ ಲಿಂಗಾಯತ ಎಂದು ಜಾತಿ ಪ್ರಮಾಣಪತ್ರ ನೀಡಲಾಗುತ್ತಿದೆ. ಮಕ್ಕಳ ಶಾಲಾ ದಾಖಲಾತಿಗಳಲ್ಲಿ ಲಿಂಗಾಯತ ಎಂದು ಬರೆಸಿದರೂ ತಂತ್ರಾಂಶದಲ್ಲಿ ವೀರಶೈವ ಲಿಂಗಾಯತ ಎಂದು ಬರುತ್ತಿದೆ. ಶಾಲೆ- ಕಾಲೇಜುಗಳ ಪ್ರವೇಶ ಹಾಗೂ ಉದ್ಯೋಗ ಪಡೆಯಲು ಕೇಂದ್ರದ ಕೆಲ ಇಲಾಖೆಗಳಲ್ಲಿ ವೀರಶೈವ ಲಿಂಗಾಯತ ಉಪ ಜಾತಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಲ್ಲ. ಇದರಿಂದ ಮಕ್ಕಳು ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇನ್ನು ಮುಂದೆ ಕೇವಲ ಲಿಂಗಾಯತ ಎಂದು ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ರವಾನಿಸಿದ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

    ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಜ್ಞಾನೇಶ್ವರಿ, ರಾಷ್ಟ್ರೀಯ ಬಸವ ದಳ ಬೆಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಧಾರವಾಡ ಬಸವ ಧರ್ಮ ಪೀಠಾಧ್ಯಕ್ಷ ಶ್ರೀ ಬಸವಪ್ರಕಾಶ ಸ್ವಾಮೀಜಿ, ಎಂ.ವಿ. ಕುಸುಗಲ್, ಶಿವಾನಂದ ಅಬಲೂರ, ಪ್ರಕಾಶ ಗರಗ, ಎಫ್.ಎಸ್. ಬೇವಿನಮರದ, ಮಲ್ಲಿಕಾರ್ಜುನ ಅನಗುಂಡಿ, ಸಿ.ಎಸ್. ಕೂಸಪ್ಪನವರ, ದೇವೇಂದ್ರ ಇಂಗಳಳ್ಳಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts