More

    ಲಾಭದತ್ತ ಮುಖಮಾಡಿದ ಮುಳಬಾಗಿಲು ಟಿಎಪಿಸಿಎಂಎಸ್​; ದುಂದುವೆಚ್ಚಕ್ಕೆ ಕಡಿವಾಣ, ಅಧ್ಯಕ್ಷರ ದಕ್ಷ, ಪರಿಣಾಮಕಾರಿ ಆಡಳಿತಕ್ಕೆ ಮೆಚ್ಚುಗೆ

    ಮುಳಬಾಗಿಲು: ಸದಾ ನಷ್ಟದಲ್ಲಿ ಸಾಗುತ್ತಿದ್ದ ಮುಳಬಾಗಿಲು ಟಿಎಪಿಸಿಎಂಎಸ್​ಗೆ ಈ ವರ್ಷ ಉತ್ತಮ ವ್ಯವಹಾರದೊಂದಿಗೆ ಲಾಭದತ್ತ ಮುಖಮಾಡಿದೆ. ರೈತರಿಗೆ ಬೇಕಾಗುವ ರಸಗೊಬ್ಬರ, ಬೇವಿನ ಹಿಂಡಿ, ಹೊಂಗೇ ಹಿಂಡಿ, ನ್ಯಾನೋ ಯೂರಿಯಾ, ಅಗ್ರಿ ಸಿಲ್ಲಿಕಾ, ಜೆಮ್​ ಗೋಲ್ಡ್​, ಎಂಒಪಿ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಿ ಸಹಕಾರಿ ಕ್ಷೇತ್ರದಲ್ಲಿ ಪ್ರಬಲಗೊಳ್ಳುತ್ತಿದೆ.

    ಮಾಜಿ ಶಾಸಕ ಕೊತ್ತೂರು ಜಿ. ಮಂಜುನಾಥ್​ ಅವರು ಕಳೆದ ಒಂದೂವರೆ ವರ್ಷದ ಹಿಂದೆ ಟಿಎಪಿಸಿಎಂಎಸ್​ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಆಡಳಿತ ಮಂಡಳಿಯ ಸಹಕಾರದೊಂದಿಗೆ ಪರಿಣಾಮಕಾರಿ ಯೋಜನೆಗಳ ಅನುಷ್ಠಾನ ಹಾಗೂ ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗಿತ್ತು. ಇಫ್ಕೋ ಸಂಸ್ಥೆಯಲ್ಲಿ ಉತ್ಪಾದನೆಯಾಗುವ ಎಲ್ಲ ವಿಧದ ರಸಗೊಬ್ಬರಗಳು, ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಅಚ್ಚುಕಟ್ಟುಗೊಳಿಸಿದ್ದಾರೆ. ಇದರಿಂದಾಗಿ ಒಂದೂವರೆ ವರ್ಷದಿಂದ ಸಂ ಲಾಭ ಗಳಿಸುತ್ತಿದೆ.

    ಸಂವು 2021-&22 ನೇ ಸಾಲಿನಲ್ಲಿ 83 ಲಕ್ಷ ರೂ. ವಹಿವಾಟು ಹಾಗೂ 2020&-21ನೇ ಸಾಲಿನಲ್ಲಿ 70 ಲಕ್ಷ ರೂ. ವಹಿವಾಟು ಮಾಡಿದೆ. ಕಳೆದ ಒಂದೂವರೆ ವರ್ಷದಲ್ಲಿ ಅನ್ಯ ಆದಾಯ ಮೂಲಗಳು ಸೇರಿ ಒಟ್ಟು 60 ಲಕ್ಷ ರೂ. ಲಾಭ ಗಳಿಸಿದೆ.

    ಈ ವರ್ಷದ ಮುಂಗಾರು ಆರಂಭಕ್ಕೆ ಕೃಷಿಕರಿಗೆ ರಸಗೊಬ್ಬರ ಅಭಾವ ಕಾಡಬಾರದೆಂದು ಈಗಾಗಲೇ ಇಫ್ಕೋ ಸಂಸ್ಥೆಗೆ 11 ಲಕ್ಷ ರೂ. ಅನ್ನು ಮುಂಗಡವಾಗಿ ಪಾವತಿಸಿ ರಸಗೊಬ್ಬರವನ್ನು ಖರೀದಿಸಲಾಗಿದೆ. ಇದರಿಂದಾಗಿ ಖಾಸಗಿ ಮಳಿಗೆಗಳ ರಸಗೊಬ್ಬರ ಹಾವಳಿ ಕಡಿಮೆಯಾಗಿ, ರೈತರಿಗೆ ಅನುಕೂಲವಾಗಲಿದೆ. ಇತ್ತೀಚೆಗೆ ನಕಲಿ ರಸಗೊಬ್ಬರ ಹಾವಳಿ ಹೆಚ್ಚಾಗಿರುವುದರಿಂದ ರೈತರು ಟಿಎಪಿಸಿಎಂಎಸ್​ನತ್ತ ಧಾವಿಸುತ್ತಿದ್ದಾರೆ.

    ಈ ಹಿಂದೆ ಟಿಎಪಿಸಿಎಂಎಸ್​ನಲ್ಲಿ ಮಾರಾಟ ಪ್ರಮಾಣ ಕಡಿಮೆ ಇದ್ದ ಕಾರಣ ಖರೀದಿಗೆ ಸಕಾಲದಲ್ಲಿ ಹಣವಿಲ್ಲದೆ ದಾಸ್ತಾನು ಮಾಡಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಹೀಗಾಗಿ 2017-&18ರಲ್ಲಿ 19 ಲಕ್ಷ ರೂ. 2018-&19 ರಲ್ಲಿ 28 ಲಕ್ಷ, 2019-&20 ರಲ್ಲಿ 42 ಲಕ್ಷ ರೂ. ವಹಿವಾಟು ಮಾಡಲಾಗಿತ್ತು. ಇದೀಗ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟುಗೊಳಿಸಿರುವುದರಿಂದ, ರಸಗೊಬ್ಬರ ದಾಸ್ತಾನಿನಿಂದಾಗಿ ವಹಿವಾಟು ಚುರುಕಾಗಿದೆ.

    ವಿವಿಧ ಸೌಲಭ್ಯಗಳು: ಹೊಸದಾಗಿ ಇ-ಸ್ಟಾಂಪ್​ ಮಾರಾಟ, ಜೆರಾಕ್ಸ್​, ಆನ್​ಲೈನ್​ ಸೇವೆಗಳು, ಸಹಕಾರಿ ಸಂಸ್ಥೆಗೆ ಬೇಕಾಗುವ ಲೆಕ್ಕಪುಸ್ತಕಗಳು, ವಿದ್ಯಾರ್ಥಿಗಳಿಗೆ ಬೇಕಾಗುವ ಎಂಎಸ್​ಐಎಲ್​ನ ಲೇಖನಿ ಸಾಮಗ್ರಿಗಳು, ರೈತರಿಗೆ ಬೇಕಾಗುವ ಹನಿ ನೀರಾವರಿಯ ಘಟಕಗಳು ಮಾರಾಟ ವ್ಯವಸ್ಥೆ ಮಾಡಲಾಗಿದೆ. ಇವು ಕೂಡ ಲಾಭಕ್ಕೆ ಕೊಡುಗೆ ನೀಡುತ್ತಿವೆ.

    ಟಿಎಪಿಸಿಎಂಎಸ್​ ಅಧ್ಯಕ್ಷನಾದ ನಂತರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಯಿತು. ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಯಿತು.ಇಫ್ಕೋ ಸಂಸ್ಥೆಯ ಜತೆಗೆ ಜೈಕಿಸಾನ್​ ಸೇರಿ ಖಾಸಗಿ ಕಂಪನಿಗಳ ರಸಗೊಬ್ಬರ ಖರೀದಿಗೆ ಮುಂದಾಗಿದ್ದೇವೆ. ರೈತರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗುವುದು.
    |ಕೊತ್ತೂರು ಜಿ.ಮಂಜುನಾಥ್​, ಮುಳಗಬಾಗಿಲು ಟಿಎಪಿಸಿಎಂಎಸ್​ ಅಧ್ಯಕ್ಷ

    ಇಫ್ಕೋ ಸಂಸ್ಥೆಯ ಗೊಬ್ಬರ ಖರೀದಿಗೆ 11 ಲಕ್ಷ ರೂ. ಹಣವನ್ನು ಮುಂಗಡವಾಗಿ ಪಾವತಿಸಿದ್ದೇವೆ. ಸಂಘದ ಗೋದಾಮಿನಲ್ಲಿ ರಸಗೊಬ್ಬರ, ಬೇವಿನಹಿಂಡಿ, ಹೊಂಗೆ ಹಿಂಡಿ, ಜಾನುವಾರುಗಳಿಗೆ ಬೇಕಾಗುವ ಚೆಕ್ಕೆ, ಬೂಸ ದಾಸ್ತಾನು ಇದ್ದು ನಿಖರವಾದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
    | ಬಿ.ಆರ್​.ಶಿವಶಂಕರ್​, ಮುಖ್ಯ ಕಾರ್ಯನಿರ್ವಹಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts