More

    ಲಾಕ್‌ಡೌನ್ ಸಂತ್ರಸ್ಥರಿಗೆ ಪರಿಹಾರ ನೀಡಿ

    ಗೌರಿಬಿದನೂರು:  ಕೋವಿಡ್-19 ನಿಯಂತ್ರಣ, ಲಾಕ್‌ಡೌನ್ ಸಂತ್ರಸ್ಥರಿಗೆ ಪರಿಹಾರಕ್ಕೆ ಒತ್ತಾಯಿಸಿ ನಗರದ ತಾಲೂಕು ಕಚೇರಿ ಮುಂದೆ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಎಂ) ಮಂಗಳವಾರ ಪ್ರತಿಭಟನೆ ನಡೆಸಿತು.

    ಜಿಲ್ಲಾ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ಕೇಂದ್ರ ಸರ್ಕಾರವು ಕರೊನಾ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಲಾಕ್‌ಡೌನ್‌ನಿಂದ ಉಂಟಾದ ದುಷ್ಟರಿಣಾಮಗಳನ್ನು ಎದುರಿಸಲು ಯಾವುದೇ ಮುಂಜಾಗ್ರತೆ ಕ್ರಮ ಜರುಗಿಸದ ಪರಿಣಾಮ ಜನಸಾಮಾನ್ಯರ ಬದುಕು ದುಸ್ಥರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮೋದಿಯವರ ಅಸಾಧಾರಣ ಅಡಳಿತ ವೈಖರಿಯಿಂದ ಜಗತ್ತು ಭಾರತದತ್ತ ನೋಡುವಂತಾಗಿದೆ ಎಂದು ಗುಣಗಾನ ಮಾಡಲಾಗುತ್ತಿದೆ, ಅದರೆ ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ ಜತೆಗೆ 9 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ಮೋದಿ ಸರ್ಕಾರದ ಸಾಧನೆಯ? ಎಂದು ಪ್ರಶ್ನಿಸಿದರು.

    ಯಾವುದೇ ಮುನ್ಸೂಚನೆ ಇಲ್ಲದೆ ಲಾಕ್‌ಡೌನ್ ಜಾರಿಗೆ ತಂದಿದ್ದರಿಂದ ಲಕ್ಷಾಂತರ ಜನ ಕೆಲಸವಿಲ್ಲದೆ ಬೀದಿಪಾಲಾಗಿದ್ದಾರೆ. ವಲಸಿಗರು ಸ್ವಂತ ಊರುಗಳಿಗೆ ಹೋಗಲಾಗದೆ ನಡೆದುಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದೆಲ್ಲವೂ ಮೋದಿ ಸಾಧನೆಯೇ ಎಂದು ಛೇಡಿಸಿದರು.

    ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎನ್.ಅರ್.ರವಿಚಂದ್ರರೆಡ್ಡಿ ಮಾತನಾಡಿ, ಸೋಂಕನ್ನು ತಡೆಗಟ್ಟುವುದನ್ನು ಕೇಂದ್ರ ಸರ್ಕಾರವು ಆಯಾ ರಾಜ್ಯಗಳಿಗೆ ವಹಿಸಿ ಕೈ ತೊಳೆದುಕೊಳ್ಳುತ್ತಿರುವುದು ಅವೈಜ್ಞಾನಿಕವಾಗಿದೆ. ಕೋವಿಡ್ ನಿಯಂತ್ರಣದಲ್ಲಿ ಕೇರಳ ರಾಜ್ಯ ವಿಶ್ವಕ್ಕೆ ಮಾದರಿಯಾಗಿದೆ, ಕೇಂದ್ರ ಸರ್ಕಾರ ಇದರಿಂದ ಪಾಠ ಕಲಿಯಲು ನಿರಾಕರಿಸುತ್ತಿದೆ, ರಾಜ್ಯ ಸರ್ಕಾರವು ವಿರೋಧ ಪಕ್ಷಗಳ ಒತ್ತಾಯದ ಮೇರೆಗೆ ಕೆಲವು ಅಸಂಘಟಿತರಿಗೆ ಪರಿಹಾರ ನೀಡಲು ಪ್ಯಾಕೇಜ್ ಪ್ರಕಟಿಸಿದೆ ಅದನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ ಎಂದು ಆರೋಪಿಸಿದರು. ತಹಸೀಲ್ದಾರ್ ಎಂ . ರಾಜಣ್ಣಗೆ ಮನವಿ ಸಲ್ಲಿಸಲಾಯಿತು. ಸಿಪಿಎಂ ಕಾರ್ಯಕರ್ತರಾದ ಎಸ್. ಮಂಜುನಾಥ್, ಕೀಶೊರ್, ಅಂಗನವಾಡಿ ಕಾರ್ಯಕರ್ತರಾದ ಎಸ್. ವೆಂಕಟಲಕ್ಷ್ಮಮ್ಮ , ಎ.ಬಿ. ಲಕ್ಷ್ಮೀದೇವಮ್ಮ , ರಾಜಮ್ಮ,ವೆಂಕಟಸ್ವಾಮಿ ಕೃಷ್ಣಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts