More

    ಲಾಕ್​ಡೌನ್ ಮುಂದುವರಿಯುವ ಸೂಚನೆ ನೀಡಿದ ಎಸ್​ಪಿ

    ಭಟ್ಕಳ: ಭಟ್ಕಳ ತಾಲೂಕು ಕೋವಿಡ್ -19 ವಿಷಯದಲ್ಲಿ ಗಂಭಿರ ಪರಿಣಾಮ ಎದುರಿಸುತ್ತಿದ್ದು, ಇಲ್ಲಿನ ನಾಗರಿಕರು ಏ. 14ರ ನಂತರವೂ ಲಾಕ್​ಡೌನ್ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರಬೇಕು ಎಂದು ಎಸ್​ಪಿ ಶಿವಪ್ರಕಾಶ ಹೇಳಿದರು.

    ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ಚಿಕ್ಕ ಪಟ್ಟಣದಲ್ಲಿ 7 ಸೋಂಕಿತರು ಪತ್ತೆಯಾಗಿದ್ದು, ಈ ಸೋಂಕು ಮತ್ತಷ್ಟು ಜನರಿಗೆ ಪಸರಿಸಿದೆ ಇರಲು ಪೊಲೀಸ್ ಇಲಾಖೆ ಜಿಲ್ಲಾಡಳಿತದ ಸಹಕಾರದಲ್ಲಿ ಮತ್ತಷ್ಟು ಗಂಭಿರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

    ಇನ್ನೂ ಹೆಚ್ಚಿನ ನಿಗಾ ವಹಿಸಲು ಭಟ್ಕಳ ನಗರದಲ್ಲಿ ಡ್ರೋಣ್ ಕ್ಯಾಮರಾ ಕಣ್ಗಾವಲು ನಡೆಸಲು ಯೋಚಿಸಲಾಗುತ್ತಿದೆ ನಾಗರಿಕರಿಗೆ ಕನಿಷ್ಠ ಅಗತ್ಯತೆಗಳನ್ನು ಪೂರೈಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಅದರಲ್ಲಿಯೂ ಭಟ್ಕಳ ನಗರದಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ದಿನಸಿ, ಔಷಧ, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಇಲ್ಲ, ಕೃಷಿಕರು ತಮ್ಮ ವಸ್ತುಗಳನ್ನು ಮಾರುಕಟ್ಟೆ ತಲುಪಿಸಲು ಕೂಡ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಮನೆ ಕೆಲಸಕ್ಕೆ ಹೋಗುವವರು ಮುಂದಿನ ಆದೇಶದ ತನಕ ಹೋಗುವುದನ್ನು ನಿಷೇಧಿಸಲಾಗಿದೆ ಎಂದರು.

    ಜಿಲ್ಲೆಯಲ್ಲಿ ಇಲ್ಲಿಯ ತನಕ ನಿಯಮ ಮೀರಿದ 46 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಾಂಡೇಲಿ ಹಾಗೂ ಶಿರಸಿಯಲ್ಲಿ ಎರಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಾಕಿದ ಕುರಿತು ಪ್ರಕರಣ ದಾಖಲಿಸಲಾಗಿದೆ. ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಯಲ್ಲಿರುವ ಕೂಲಿ ಕಾರ್ವಿುಕರು, ಮೀನುಗಾರರು ಅಲ್ಲಿಂದ ಬರಲು ಅವಕಾಶವಿಲ್ಲ, ಜಿಲ್ಲಾಡಳಿತ ಅವರಿದ್ದಲ್ಲಿಯೇ ಎಲ್ಲ ವ್ಯವಸ್ಥೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದು ಎಂದರು.

    ಡಿವೈಎಸ್​ಪಿ ಗೌತಮ ಕೆ.ಚಿ., ಪಿಎಸ್​ಐ ಹ ಕುಡುಗಂಟಿ, ಎಎಸ್​ಐ ನವೀನ ಭೋರ್ಕರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts