More

    ಲಕ್ಷ್ಮೀನಗರ ನಿವಾಸಿಗಳ ಉಪವಾಸ ಸತ್ಯಾಗ್ರಹ ಅಂತ್ಯ

    ಧಾರವಾಡ: ನಗರದ ಹೊಸಯಲ್ಲಾಪುರ ಬಳಿಯ ಸ್ಮಶಾನ ಹಿಂಭಾಗದಲ್ಲಿನ ಮಹಾನಗರ ಪಾಲಿಕೆಯ ಘನತ್ಯಾಜ್ಯ ಸಂಗ್ರಹ ಘಟಕದಿಂದ ಆಗುತ್ತಿರುವ ವಾಯುಮಾಲಿನ್ಯ ತಡೆ ಹಾಗೂ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಲಕ್ಷ್ಮೀನಗರ ನಾಗರಿಕ ಹಿತರಕ್ಷಣಾ ಸಂಘ ಹಾಗೂ ಎ.ಪಿ. ಕಮ್ಯುನಿಕೇಶನ್ ಆಫ್ ಕರ್ನಾಟಕ, ದಾನೇಶ್ವರಿನಗರದ ಹಿತರಕ್ಷಣಾ ಸಮಿತಿ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಧರಣಿಯನ್ನು ಗುರುವಾರ ಅಂತ್ಯಗೊಳಿಸಲಾಯಿತು.

    ಆಮರಣಾಂತ ಉಪವಾಸ ಹಾಗೂ ನಿವಾಸಿಗಳ ಧರಣಿ ಸ್ಥಳಕ್ಕೆ 4ನೇ ದಿನವಾದ ಗುರುವಾರ ಶಾಸಕ ಅರವಿಂದ ಬೆಲ್ಲದ ಹಾಗೂ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಭೇಟಿ ನೀಡಿ ಮಾತುಕತೆ ನಡೆಸಿದರು. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು, ಲಕ್ಷ್ಮೀನಗರ, ದಾನೇಶ್ವರನಗರ ಪಕ್ಕದ ಪಾಲಿಕೆ ಒಡೆತನದ ಜಾಗದಲ್ಲಿ ಕಾಂಪೋಸ್ಟ್ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ಯಂತ್ರೋಪಕರಣ, ವಿದ್ಯುತ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ಅಂತ್ಯದೊಳಗೆ ಘಟಕ ಕಾರ್ಯಾರಂಭಿಸಲಿದೆ. ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದಿಲ್ಲ ಎಂದು ಲಿಖಿತ ಪತ್ರ ಬರೆದುಕೊಟ್ಟರು. ಶಾಸಕ ಅರವಿಂದ ಬೆಲ್ಲದ ಹಾಗೂ ಇಟ್ನಾಳ ಅವರು ಸಂತೋಷ ಅವರಿಗೆ ಎಳನೀರು ಕುಡಿಸಿ ಉಪವಾಸ ಸತ್ಯಾಗ್ರಹ ಮೊಟಕುಗೊಳಿಸಿದರು. ಲಕ್ಷ್ಮೀನಗರ ನಾಗರಿಕ ಹಿತರಕ್ಷಕ ಸಂಘದ ಅಧ್ಯಕ್ಷ ಬಸವರಾಜ ತಾಳಿಕೋಟಿ, ಬಿ.ವೈ. ಪೂಜಾರ, ಬಸವರಾಜ ಲಿಂಗದಾಳ, ನಿಂಗರಡ್ಡಿ ಗೂಳರಡ್ಡಿ, ಉದಯ ಗಿರಿಯಮ್ಮನವರ, ಮುತ್ತು ಹಿರೇಮಠ, ಬಿ.ಎನ್. ಮುರಗೋಡ, ಕೆ.ವೈ. ಕೋರಿ, ಆರ್.ಬಿ. ಗಡ್ಡದ, ಡಿ.ಎಂ. ರವಿ, ಅನ್ನಪೂರ್ಣಾ ತಾಳಿಕೋಟಿ, ಅನಸೂಯಾ ಪೂಜಾರ, ಅನುರಾಧಾ ಹಂದಿಗೋಳ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts