More

    ಲಕ್ಕುಂಡಿಯಲ್ಲಿ ಭಯದ ವಾತಾವರಣ

    ಗದಗ: ಬುಧವಾರ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ 44 ವರ್ಷದ ವ್ಯಕ್ತಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದರಿಂದ ಲಕ್ಕುಂಡಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ವಣವಾಗಿದೆ. ಗ್ರಾಮಸ್ಥರು ಮನೆ ಬಿಟ್ಟು ಹೊರ ಬರಲು ಭಯ ಪಡುತ್ತಿದ್ದಾರೆ. ಲಕ್ಕುಂಡಿ ಗ್ರಾಮವನ್ನು ಜಿಲ್ಲಾಡಳಿತ ಪ್ರತಿಬಂಧಿತ ಪ್ರದೇಶ (ಕಂಟೇನ್ಮೆಂಟ್ ಜೋನ್) ಎಂದು ಘೊಷಿಸಿದೆ.

    ಕಳೆದ ಒಂದು ವಾರದಿಂದ ಪಾಸಿಟಿವ್ ಪ್ರಕರಣಗಳು ಇಲ್ಲದೆ ನೆಮ್ಮದಿಯಿಂದ ಇದ್ದ ಜಿಲ್ಲೆಯ ಜನರಿಗೆ ಕರೊನಾ ವೈರಸ್ ಆಘಾತ ನೀಡಿದೆ. ಗ್ರಾಮೀಣ ಭಾಗಕ್ಕೂ ವೈರಸ್ ಕಾಲಿಟ್ಟಿದ್ದರಿಂದ ಜನ ಭಯಪಡುವಂತಾಗಿದೆ. ಮೃತ ವ್ಯಕ್ತಿ ಅರ್ಚಕನಾಗಿದ್ದು, ಗ್ರಾಮದಲ್ಲಿ ಮದುವೆ, ಮುಂಜಿ ಮುಂತಾದ ಶುಭಕಾರ್ಯಗಳಲ್ಲಿ ಭಾಗಿಯಾಗಿರುವುದರಿಂದ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ವಣವಾಗಿದೆ. ಮೃತ ವ್ಯಕ್ತಿಯ ತಾಯಿ, ಪತ್ನಿ ಸೇರಿ ಕುಟುಂಬದ ಏಳು ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

    ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ ಡಾಕ್ಟರ್ ಹಾಗೂ ನರ್ಸ್​ಗಳು ಸೇರಿ ದ್ವಿತೀಯ ಸಂಪರ್ಕದಲ್ಲಿದ್ದ 12 ಜನರನ್ನು ಗುರುತಿಸಲಾಗಿದೆ. ಮೃತ ವ್ಯಕ್ತಿಯ ಮನೆ ಸುತ್ತಮುತ್ತಲಿನ 100 ಪ್ರದೇಶವನ್ನು ಜಿಲ್ಲಾಡಳಿತ ವಿಪತ್ತು ನಿರ್ವಹಣೆ ಮಾರ್ಗಸೂಚಿ ಅನ್ವಯ ಸೀಲ್​ಡೌನ್ ಮಾಡಲಾಗಿದೆ. ಗ್ರಾಮದ ಕಿರಾಣಿ ಶಾಪ್, ಹೋಟೆಲ್, ಬಟ್ಟೆ ಅಂಗಡಿಗಳನ್ನು ಬಂದ್ ಮಾಡಲಾಗಿದೆ.

    ಗ್ರಾಮಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿ ಶುಚಿತ್ವ ಕಾರ್ಯವನ್ನು ಪರಿಶೀಲಿಸಿದರು. ಕೋವಿಡ್ 19 ಸೋಂಕು ಇತರರಿಗೆ ಹರಡದಂತೆ ಸರ್ಕಾರದ ನಿರ್ದೇಶದನ್ವಯ ಲಕ್ಕುಂಡಿ ಗ್ರಾಮದ ಪ್ರತಿಬಂಧಿತ ಪ್ರದೇಶದಿಂದ ಜನರು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೊರಬರಬಾರದು. ಈ ಪ್ರದೇಶದ ಜನರ ಅವಶ್ಯಕ ಸಾಮಗ್ರಿಗಳ ಪೂರೈಕೆಗೆ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಆರೋಗ್ಯಾಧಿಕಾರಿ ಡಾ. ಬಸವರಾಜ ನೀಲಗುಂದ ಮತ್ತಿತರ ಅಧಿಕಾರಿಗಳು ಇದ್ದರು.

    ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ವಣವಾಗಿದೆ. ಗ್ರಾಮಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಮುಂಬೈಯಿಂದ 65 ಜನರ ಆಗಮನ

    ಗದಗ: ಮಹಾರಾಷ್ಟ್ರದಿಂದ ಮುಂಬೈ-ಗದಗ ಎಕ್ಸ್​ಪ್ರೆಸ್ ರೈಲಿನ ಮೂಲಕ ಬುಧವಾರ ನಗರಕ್ಕೆ 65 ಜನರು ಆಗಮಿಸಿದ್ದಾರೆ. ನಿಲ್ದಾಣದಲ್ಲಿಯೇ ಇವರೆಲ್ಲರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು. ಎಲ್ಲರ ಆಧಾರ್ ಕಾರ್ಡ್ ಪರಿಶೀಲನೆ ನಡೆಸಿ ಮಿನಿ ಬಸ್​ಗಳ ಮೂಲಕ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿ ಕೊಡಲಾಯಿತು. ಬಂದವರಲ್ಲಿ 19 ಜನ ಗದಗ ಜಿಲ್ಲೆಯವರಾಗಿದ್ದಾರೆ. ಇನ್ನುಳಿದ 46 ಜನರು ಹುಬ್ಬಳ್ಳಿ-ಧಾರವಾಡ, ಕೊಪ್ಪಳ, ಬಳ್ಳಾರಿ ಜಿಲ್ಲೆಯವರಾಗಿದ್ದು ಅವರನ್ನು ಆಯಾ ಜಿಲ್ಲೆಗಳಿಗೆ ಕಳುಹಿಸಿಕೊಡಲಾಯಿತು ಎಂದು ಜಿಲ್ಲಾಡಳಿತ ತಿಳಿಸಿದೆ.

    ಮತ್ತೊಬ್ಬರಿಗೆ ಸೋಂಕು

    ಗದಗ: ನಗರದ ಮತ್ತೊಬ್ಬ ವ್ಯಕ್ತಿಗೆ ಕರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಗದಗ ಹುಡ್ಕೋ ಕಾಲನಿಯ ನಿವಾಸಿ (ಪಿ- 4079) 54 ವರ್ಷದ ಪುರುಷ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದು ಬೆಂಗಳೂರಿನ ಎಚ್​ಸಿಎಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 27 ರಂದು ಖಾಸಗಿ ವಾಹನ ಮೂಲಕ ಬೆಂಗಳೂರಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆ ಕಂಡು ಬಂದಿದ್ದರಿಂದ ಅವರ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಕರೊನಾ ಸೋಂಕು ಇರುವುದು ಪತ್ತೆಯಾಗಿದೆ. ರೋಗಿಯ ಜೊತೆಗೆ ಅವರ ಪತ್ನಿ ಹೋಗಿದ್ದು, ಇಬ್ಬರೂ ಬೆಂಗಳೂರಿನಲ್ಲಿಯೇ ಇದ್ದಾರೆ. ಸೋಂಕು ಗದಗನಲ್ಲಿ ಹರಡಿದೆಯಾ ಅಥವಾ ಪ್ರಯಾಣದ ವೇಳೆ ಸೋಂಕು ಬಂದಿದೆಯಾ ಎನ್ನುವ ಕುರಿತು ಜಿಲ್ಲಾಡಳಿತ ಪರಿಶೀಲಿಸುತ್ತಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

    =============

    73,600 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ

    ಲಕ್ಷೆ್ಮೕಶ್ವರ: ಮುಂಗಾರು ಬಿತ್ತನೆ, ಹದವರ್ತಿ ಮಳೆ, ಕೃಷಿ ಚಟುವಟಿಕೆ

    ಲಕ್ಷೆ್ಮೕಶ್ವರ: ಒಂದು ವಾರದಿಂದ ಮುಂಗಾರು ಮಳೆ ಚುರುಕು ಪಡೆದುಕೊಂಡಿದೆ. ಇದರಿಂದಾಗಿ ತಾಲೂಕಿನಾದ್ಯಂತ ಹದವಾಗಿ ಸಿದ್ಧವಾಗಿಟ್ಟುಕೊಂಡಿದ್ದ ಭೂಮಿಯಲ್ಲಿ ಶೇಂಗಾ, ಹೆಸರು ಮತ್ತು ಹತ್ತಿಕಾಳು ಬಿತ್ತನೆ ಕಾರ್ಯದಲ್ಲಿ ರೈತ ಸಮುದಾಯ ನಿರತವಾಗಿದೆ.

    ಕೃಷಿ ಇಲಾಖೆ ಮಾಹಿತಿ ಪ್ರಕಾರ ಮೇ ಕೊನೆಯ ವಾರದಿಂದ ಜೂನ್ 15ರೊಳಗಾಗಿ ಹೆಸರು, ಜೋಳ, ಶೇಂಗಾ, ಬಿಟಿ ಹತ್ತಿ, ಉಳ್ಳಾಗಡ್ಡಿ ಬೀಜ ಬಿತ್ತನೆ ಮಾಡಲು ಸಕಾಲವಾಗಿದೆ. ಇದಕ್ಕೆ ಪೂರಕವೆಂಬಂತೆ ಮೇ ಕೊನೆಯ ವಾರದಿಂದಲೇ ಭರವಸೆ ಮೂಡಿಸಿದ ಮಳೆಯಿಂದಾಗಿ ಈಗಾಗಲೇ ಬಿತ್ತನೆ ಮಾಡಿರುವ ಹೆಸರು, ಶೇಂಗಾ, ಹತ್ತಿ ಸೇರಿ ಇತರೇ ಬೆಳೆಗಳು ಭೂಮಿಯನ್ನು ಹಸಿರಾಗಿಸಿವೆ.

    ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ಹಂಗಾಮಿಗೆ ಒಟ್ಟು 73,600 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಪ್ರಮುಖ ಬೆಳೆಯಾದ ಗೋವಿನಜೋಳ 31,000 ಹೆಕ್ಟೇರ್, ಹತ್ತಿ 17,000 ಹೆಕ್ಟೇರ್, ಶೇಂಗಾ 12,000 ಹೆಕ್ಟೇರ್, ಹೆಸರು 10,000 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಮಾಡುವ ಅಂದಾಜಿದೆ. ಈ ವರ್ಷ ಹತ್ತಿ ಕ್ಷೇತ್ರ ಗುರಿ ಮೀರಿ ಬಿತ್ತನೆಯಾಗುವ ಸಾಧ್ಯತೆಯಿದೆ.

    ಗೆಜ್ಜೆಶೇಂಗಾ, ಹೆಸರು ಬೀಜವನ್ನು ಆದಷ್ಟು ಬೇಗ ಬಿತ್ತನೆ ಮಾಡಿದರೆ ಬೆಳೆ ಬೇಗ ಬರುತ್ತದೆ. ಮುಂದೆ ಹಿಂಗಾರಿನಲ್ಲಿ ಕಡಲೆ, ಬಿಳಿಜೋಳ, ಗೋದಿ ಬೆಳೆ ಪಡೆಯಬಹುದು. ಹೀಗಾಗಿ ಮೇ ಕೊನೆಯ ವಾರದಲ್ಲಿಯೇ ಶೇಂಗಾ ಮತ್ತು ಹೆಸರು ಬಿತ್ತನೆ ಮಾಡಿದ್ದೇವೆ. ಜಿಟಿಜಿಟಿ ಸುರಿಯುತ್ತಿದ್ದು, ಈಗಾಗಲೇ ಬಿತ್ತಿರುವ ಬೀಜಗಳೆಲ್ಲ ಮೊಳಕೆಯೊಡೆದು ಭೂಮಿಯಲ್ಲಿ ಹಸಿರು ಕಂಗೊಳಿಸುತ್ತಿದೆ ಎಂದು ಬಸವರಾಜ ಕೊಡ್ಲಿ, ಶಿವಾನಂದ ಲಿಂಗಶೆಟ್ಟಿ, ಬಾಪೂಗೌಡ ಪಾಟೀಲ ಮತ್ತಿತರ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

    ಟ್ರ್ಯಾಕ್ಟರ್ ಬಿತ್ತನೆಗೆ ಹೆಚ್ಚಿದ ಬೇಡಿಕೆ

    ಪ್ರತಿ ವರ್ಷ ರೈತ ಸಮುದಾಯ ಹಿಂಗಾರಿನ ಕೃಷಿ ಚಟುವಟಿಕೆ ಮುಗಿದ ಬಳಿಕ ಎತ್ತುಗಳನ್ನು ಮಾರಾಟ ಮಾಡಿ ಮತ್ತೇ ಮುಂಗಾರು ಪೂರ್ವದಲ್ಲಿ ಖರೀದಿಸುತ್ತಾರೆ. ಆದರೆ, ಈ ವರ್ಷ ಕರೊನಾ ಲಾಕ್​ಡೌನ್ ಎಫೆಕ್ಟ್​ನಿಂದ ರಾಜ್ಯದ ಬಹುತೇಕ ಕಡೆ ಎತ್ತುಗಳ ಸಂತೆ ಸ್ಥಗಿತಗೊಂಡಿದ್ದರಿಂದ ಎತ್ತುಗಳನ್ನು ಮತ್ತೆ ಖರೀದಿಸಲಾಗುತ್ತಿಲ್ಲ. ಹೀಗಾಗಿ ಪ್ರಸಕ್ತ ವರ್ಷ ಟ್ರ್ಯಾಕ್ಟರ್​ಗಳ ಮೂಲಕವೇ ಜಮೀನು ಹದಗೊಳಿಸಿ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಟ್ರ್ಯಾಕ್ಟರ್​ಗಳಿಗೆ ಕಳೆದ ವರ್ಷಕ್ಕಿಂತ ಈ ಬಾರಿ ಡಿಮ್ಯಾಡ್ ಹೆಚ್ಚಿದೆ. ಕಳೆದ ವರ್ಷ ಟ್ರ್ಯಾಕ್ಟರ್​ನಿಂದ ಬಿತ್ತನೆ ಕಾರ್ಯ ಕೂಗೊಳ್ಳಲು ಪ್ರತಿ ಎಕರೆಗೆ 600ರಿಂದ 700 ರೂ. ಬಾಡಿಗೆ ಪಡೆಯಲಾಗುತ್ತಿತ್ತು. ಆದರೆ ಈ ವರ್ಷ 800ರಿಂದ 850 ರೂ.ಗಳವರೆಗೂ ಏರಿಕೆಯಾಗಿದೆ.

    ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ 44 ಕ್ವಿಂಟಾಲ್ ಹೆಸರು, 25 ಕ್ವಿಂಟಾಲ್ ತೊಗರಿ, 10 ಕ್ವಿಂಟಾಲ್ ಜೋಳ, 30 ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ಮಾರಾಟವಾಗಿದೆ. ಬೇಡಿಕೆ ಹಿನ್ನೆಲೆಯಲ್ಲಿ ಮತ್ತೆ 20 ಕ್ವಿಂಟಾಲ್ ಹೆಸರು, 100 ಕ್ವಿಂಟಾಲ್ ಶೇಂಗಾ, 150 ಕ್ವಿಂಟಾಲ್ ಗೋವಿನಜೋಳದ ಸುಧಾರಿತ ತಳಿಯ ಬೀಜಗಳು ದಾಸ್ತಾನು ಮಾಡಲಾಗಿದೆ. ಮಾರಾಟ ಕೇಂದ್ರದಲ್ಲಿ ಗೊಬ್ಬರ, ಬಿಟಿ ಹತ್ತಿ ಬೀಜದ ದಾಸ್ತಾನಿದೆ. ರೈತರ ಬೇಡಿಕೆಯಂತೆ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು.

    | ಚಂದ್ರಶೇಖರ ನರಸಮ್ಮನವರ, ಸಹಾಯಕ ಕೃಷಿ ನಿರ್ದೇಶಕ

    ==========

    ಪೋಟೊ: 4-ಎಲ್​ಎಕ್ಷ್​ಆರ್-2



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts