More

    ರ‌್ಯಾಮ್ಕೋಸ್‌ನಿಂದ ಶೇ.7 ಡಿವಿಡೆಂಡ್, ಕ್ವಿಂಟಾಲ್ ಅಡಕೆಗೆ 300 ರೂ.ಬೋನಸ್

    ಭದ್ರಾವತಿ: ರ‌್ಯಾಮ್ಕೋಸ್ (ರೈತರ ಅಡಿಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ) ಷೇರುದಾರರಿಗೆ ಶೇ.7 ಡಿವಿಡೆಂಡ್ ಹಾಗೂ ಅಡಿಕೆ ಮಾರಾಟ ಮಾಡಿದವರಿಗೆ ಕ್ವಿಂಟಾಲಿಗೆ 300 ರೂ.ಬೋನಸ್ ನೀಡುವುದಾಗಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಎಂ.ವಿರುಪಾಕ್ಷಪ್ಪ ತಿಳಿಸಿದರು.
    ಭಾನುವಾರ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲಿ ಮಾತನಾಡಿ, ಸಂಘ ಈ ಬಾರಿ 104.54 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ. ಇದು ಕಳೆದ 28 ವರ್ಷಗಳಲ್ಲಿಯೆ ಅತ್ಯಂತ ಗರಿಷ್ಠ ಲಾಭವಾಗಿದೆ. 189 ಲಕ್ಷ ರೂ. ಷೇರುಧನ, 3,663 ಸದಸ್ಯರನ್ನು ಹೊಂದಿದೆ. 43 ಕೋಟಿ ವಹಿವಾಟು ನಡೆಸಿದೆ ಎಂದು ವಿವರಿಸಿದರು.
    ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ರ‌್ಯಾಮ್ಕೋಸ್ ಉತ್ತಮವಾಗಿ ನಡೆಯುತ್ತಿದ್ದು ರೈತರು ತಮ್ಮ ಅಡಕೆಯನ್ನು ಬೇರೆಡೆ ಮಾರಾಟ ಮಾಡದೆ ಇಲ್ಲಿಯೇ ಮಾರಾಟ ಮಾಡಿ ಸಾಲಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.
    ಸಂಘದ ಅಧ್ಯಕ್ಷ ಸಿ.ಮಲ್ಲೇಶಪ್ಪ ಮಾತನಾಡಿ, ಎಲ್ಲ ಸದಸ್ಯರ ಸಹಕಾರದಿಂದ ಇಂದು ಸಂಘ ಲಾಭದಲ್ಲಿ ನಡೆಯುತ್ತಿದೆ. ಸಂಘದ ಸದಸ್ಯರು ತಮ್ಮ ಅಡಕೆಯನ್ನು ಮಾರಾಟ ಮಾಡುವುದರ ಜತೆಗೆ ಸಂಘದಲ್ಲಿ ಸಾಲ ಪಡೆದುಕೊಂಡು ಸಕಾಲದಲ್ಲಿ ಹಿಂದಿರುಗಿಸಬೇಕು. ರೈತರ ಹಿತದೃಷ್ಟಿಯಿಂದ ಅಡಕೆ ಬೆಳೆಗಾರರಿಗೆ ಸೂಪರ್ ಮಾರ್ಕೆಟ್ ಸ್ಥಾಪನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಹೊಳೆಹೊನ್ನೂರಿನಲ್ಲಿರುವ ನಿವೇಶನದಲ್ಲಿ ನೂತನ ಕಟ್ಟಡ ಕಟ್ಟಬೇಕೆಂದು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
    ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅತಿ ಹೆಚ್ಚು ಅಡಿಕೆ ಮಾರಾಟ ಮಾಡಿದ ಮೂರು ಜನ ರೈತರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts