More

    ರ‌್ಯಾಂಡ್ಮೈಸೇಷನ್‌ ಪೂರ್ಣ,ಡಿಸಿ

    ಚಿತ್ರದುರ್ಗ: ಚುನಾವಣಾ ಆಯೋಗದ ನಿರ್ದೇಶನದಂತೆ ಮೊದಲ ಹಂತದ ವಿದ್ಯುನ್ಮಾನ ಮತ ಯಂತ್ರ,ನಿಯಂತ್ರಣ ಘಟಕ ಹಾಗೂ ಮತಖಾತ್ರಿ ಯಂ ತ್ರಗಳ ತಂತ್ರಾಂಶ ಆಧಾರಿತ ರ‌್ಯಾಡ್ಮೈಸೇಷನ್ ಮಾಡಲಾಗಿದ್ದು,ವಿಧಾನಸಭಾ ಕ್ಷೇತ್ರವಾರು ಈ ಯಂತ್ರಗಳನ್ನು ಭೌತಿಕವಾಗಿ ಹಂಚಿಕೆ ಮಾಡ ಲಾಗುವುದೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
    ನಗರದ ಡಿಸಿ ಕಚೇರಿಯಲ್ಲಿ ಬೆಳಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ತಂತ್ರಾ ಂಶ ಆಧರಿಸಿದ Randomization ಕಾರ್ಯ ನಡೆಸಿ ಅವರು ಮಾತನಾಡಿದರು. ಹೆಚ್ಚುವರಿಯಾಗಿ ಶೇ.25 ವಿದ್ಯುನ್ಮಾನ ಮತಯಂ ತ್ರ(ಬ್ಯಾಲೆಟ್ ಯನಿಟ್)ಹಾಗೂ ನಿಯಂತ್ರಣ ಘಟಕಗಳು (ಕಂಟ್ರೋಲ್ ಯುನಿಟ್),ಶೇ.30 ಹೆಚ್ಚುವರಿ ಮತ ಖಾತ್ರಿ ಯಂತ್ರಗಳ(ವಿವಿ ಪ್ಯಾಟ್)ಒಳಗೊಂಡಂತೆ ರ‌್ಯಾಂಡ್ಮೈಸೇಷನ್‌ನಡೆಸಲಾಗಿದೆ.
    ಚಿತ್ರದುರ್ಗ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಲ್ಲಿ 1661 ಮತಗಟ್ಟೆಗಳಿವೆ. ಈ ಸಂಖ್ಯೆಗೆ ಅನುಪಾತವಾಗಿ 2074 ವಿದ್ಯುನ್ಮಾನ ಮತಯ ಂತ್ರ ಹಾಗೂ ನಿಯಂತ್ರಣ ಘಟಕಗಳು, 2157 ಮತಖಾತ್ರಿ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. 944 ವಿದ್ಯುನ್ಮಾನ ಮತಯಂತ್ರ, 6 ನಿಯಂತ್ರಣ ಘಟಕ ಹಾಗೂ 28 ಮತಖಾತ್ರಿ ಯಂತ್ರಗಳನ್ನು ಹೆಚ್ಚುವರಿಯಾಗಿ ಮೀಸಲು ಇರಿಸಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲೇ ಮತಯ ಂತ್ರಗಳ ಮೊದಲ ಹಂತದ ಪರಿಶೀಲನೆ ಕಾರ್ಯ ನಡೆಸಲಾಗಿದೆ. ಎಲ್ಲ ಯಂತ್ರಗಳೂ ಸುಸ್ಥಿತಿಯಲ್ಲಿವೆ. ಚುನಾವಣೆ ವೀಕ್ಷಕರ ಸಮ್ಮುಖದಲ್ಲಿ 2ನೇ ಹಂತದ ರ‌್ಯಾಂಡ್ಮೈಸೇಷನ್ ಕಾರ‌್ಯ ನಡೆಯಲಿದೆ ಎಂದು ಡಿಸಿ ಹೇಳಿದರು.
    ಮೊಳಕಾಲ್ಮೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ 285 ಮತಗಟ್ಟೆಗಳಿವೆ. 356 ವಿದ್ಯುನ್ಮಾನ ಮತಯಂತ್ರ ಹಾಗೂ ನಿಯಂತ್ರಣ ಘಟಕ ಹಾಗೂ 370 ಮತ ಖಾತ್ರಿಯಂತ್ರ ಹಂಚಿಕೆ ಮಾಡಲಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿರಾ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರಗಳ ರ‌್ಯಾಂಡ್ಮೈಸೇಷನ್ ಕಾರ‌್ಯ ತುಮಕೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜರುಗಲಿದೆ ಎಂದರು.
    ರ‌್ಯಾಂಡ್ಮೈಸೇಷನ್ ಬಳಿಕ ಕುಂಚಿಗನಾಳ್ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣದಲ್ಲಿ ಮತಯಂತ್ರಗಳಿದ್ದ ಕೊಠಡಿಗಳ ಬೀಗವನ್ನು ರಾಜ ಕೀ ಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಯಿತು.
    ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಸಹಾಯಕ ಚುನಾವಣೆ ಅಧಿಕಾರಿಗಳಾದ ಉಪವಿಭಾಗಧಿಕಾರಿ ಎಂ.ಕಾರ್ತಿಕ್,ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಸನಗೌಡಕೋಟೂರ,ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಬಿ.ಆನಂದ,ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀ ನಾಧಿಕಾರಿ ಎಚ್.ಎನ್.ಶಿವೇಗೌಡ,ಯೋಜನಾ ನಿರ್ದೇಶಕ ಎಂ.ಮಹೇಂದ್ರಕುಮಾರ್, ಭದ್ರಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾ ಧೀನಾಧಿಕಾರಿ ವಿವೇಕಾನಂದ,ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಡಿ.ಎನ್.ಮೈಲಾರಪ್ಪ,ಯಶವಂತಕುಮಾರ್, ಗೌಸ್‌ಪೀರ್,ಲಕ್ಷ್ಮಮಮ್ಮ ಇದ್ದರು.
    ಚಿತ್ರದುರ್ಗ ಜಿಲ್ಲೆಯಲ್ಲಿ ಹಂಚಿಕೆ ಆದ ಮತಯಂತ್ರಗಳ ವಿವರ
    ವಿಧಾನಸಭಾ ಕ್ಷೇತ್ರದ ಹೆಸರು-ಮತಗಟ್ಟೆಗಳು/ಇವಿಎಂ-ಬ್ಯಾಲೆಟ್‌ಯೂನಿಟ್/ವಿವಿಪ್ಯಾಟ್‌ಗಳ ಸಂಖ್ಯೆ
    ಮೊಳಕಾಲ್ಮೂರು -285-356-370
    ಚಳ್ಳಕೆರೆ-260-325-338
    ಚಿತ್ರದುರ್ಗ-288-360-374
    ಹಿರಿಯೂರು-287-358-373
    ಹೊಸದುರ್ಗ-242-302-314
    ಹೊಳಲ್ಕೆರೆ-299-373-388

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts