More

    ರ್ಪಾಂಗ್ ಶುಲ್ಕ ರದ್ದು ಮಾಡಿ

    ಚಿಕ್ಕಮಗಳೂರು: ನಗರದ ತಾಲೂಕು ಕಚೇರಿ ಆವರಣದಲ್ಲಿ ಕೆಲಸ ನಿಮಿತ್ತ ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ರ್ಪಾಂಗ್ ಶುಲ್ಕ ವಿಧಿಸಬಾರದು ಎಂದು ಒತ್ತಾಯಿಸಿ ಜಯಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ವಿನಾಯಕ್ ಸಾಗರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

    ತಾಲೂಕು ಕಚೇರಿಗೆ ಬರುವ ರೈತರು, ಕೂಲಿ ಕಾರ್ವಿುಕರು ಹಾಗೂ ಮಧ್ಯಮ ವರ್ಗದವರಿಗೆ ವಾಹನ ರ್ಪಾಂಗ್ ಶುಲ್ಕ ವಿಧಿಸಿರುವುದು ತೊಂದರೆಯಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.

    ತಾಲೂಕು ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಒಂದೆರಡು ದಿನಗಳಲ್ಲಿ ಕೆಲಸವಾಗುವುದಿಲ್ಲ. ಇದರಿಂದ ಪ್ರತಿದಿನ ಹಳ್ಳಿಗಳಿಂದ ಬಂದು ರ್ಪಾಂಗ್ ಶುಲ್ಕ ಕಟ್ಟುವ ಸ್ಥಿತಿ ಇದೆ. ತಹಸೀಲ್ದಾರ್ ಪರಿಶೀಲಿಸಿ ವಾಹನಗಳಿಗೆ ರ್ಪಾಂಗ್ ಶುಲ್ಕ ವಿಧಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts