More

    ರೋಡ್ ಡಿವೈಡರ್ ತೆರವು ಸಂಬಂಧ ಶೀಘ್ರದಲ್ಲೇ ಸಭೆ

    ಚಿತ್ರದುರ್ಗ: ಬಿಡಿ ರಸ್ತೆ ಸೇರಿ ನಗರದ ಹಲವೆಡೆ ನಿರ್ಮಿಸಿರುವ ರೋಡ್ ಡಿವೈಡರ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸ ಬೇಕೆಂಬುದು ತಮ್ಮ ವೈಯಕ್ತಿಕ ಅನಿಸಿಕೆಯಾಗಿದೆ. ಶೀಘ್ರದಲ್ಲೇ ಈ ಸಂಬಂಧ ಅಧಿಕಾರಿಗಳ ಸಭೆ ಕರೆದು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

    ರಸ್ತೆ ವಿಭಜಕಗಳು ಅವೈಜ್ಞಾನಿಕ ನಿರ್ಮಾಣವಾಗಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕನಕ ವೃತ್ತದಿಂದ ಬಿಡಿರಸ್ತೆ,ಕೆಎಸ್‌ಆರ್‌ಟಿ ಬಸ್ ನಿಲ್ದಾಣ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಸುರಿವ ಮಳೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ,ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

    ನಗರದಲ್ಲಿ 4.5.ಕಿ.ಮಿ.ರೋಡ್ ನಿರ್ಮಾಣಕ್ಕೆ 32 ಕೋಟಿ ರೂ.ವೆಚ್ಚವಾಗಿರುವುದು ಡಿವೈಡರ್ ಸಂಪೂರ್ಣ ತೆರವಿಗೆ ತೊಡಕಾಗಿದೆ. ಇದರಿಂದ ವರ್ತಕರಿಗೂ ಸಾಕಷ್ಟು ತೊಂದರೆ ಆಗಿದೆ. ಯಾರದ್ದೇ ಒತ್ತಡಕ್ಕೆ ಮಣಿಸು ನಿರ್ಮಾಣವಾಗಿರಲಿ,ಇದಕ್ಕೆ ಒಪ್ಪಿಗೆ ಕೊಟ್ಟಂಥ ಅಧಿ ಕಾರಿಗಳ ಹೊಣೆಗಾರರಾಗುತ್ತಾರೆ. ಸದ್ಯ ನಡೆಯಲಿರುವ ಸಭೆಯಲ್ಲಿ ಡಿವೈಡರ್‌ಗಳನ್ನು ಅಲ್ಲಲ್ಲಿ ಒಪನ್ ಮಾಡಬೇಕೆ ಅಥವಾ ಸಂಪೂರ್ಣ ತೆರವುಗೊಳಿಸಬೇಕೆ ಎಂಬುದರ ಕುರಿತು ತೀರ್ಮಾನಿಸಲಾಗುವುದು.

    ಡಿವೈಡರ್‌ಗಳ ಕುರಿತಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ನೀಡಿರುವ ಮಾಹಿತಿ ತಮಗೆ ಗೊತ್ತಿಲ್ಲ ವೆಂದರು. ನಗರದಲ್ಲಿ ರಸ್ತೆ ಅಗಲೀಕರಣ ಕುರಿತಂತೆ ಯಾವುದೇ ಯೋಜನೆ ತಮ್ಮ ಮುಂದಿಲ್ಲ. ಡಿವೈಡರ್ ತೆರವು ಕುರಿತ ಅಧಿಕಾರಿಗಳ ಸಭೆ ಯಲ್ಲಿ ರಸ್ತೆ ಅಗಲೀಕರಣ ಕುರಿತಂತೆ ಚರ್ಚಿಸುವುದಾಗಿ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ನಿರ್ಮಾಣದ ಮೊದಲ ಹಂತದ ಕಾಮಗಾರಿ ಮುಂದಿನ ಏಪ್ರಿಲ್‌ವೊಳಗೆ ಪೂರ್ಣವಾಗಲಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ನಗರದೊಳಗೆ ಇರಬೇಕು, ಅಲ್ಲಿಯೇ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಗಲಿದೆ. ಅಕಾಡೆಮಿಕ್‌ಬ್ಲಾಕ್‌ನ್ನು ಹೊರ ವಲಯದಲ್ಲಿ ನಿರ್ಮಿಸಬಹುದಾಗಿದೆ. ನಗರದ ಗಾಂಧಿ ವೃತ್ತದ ಮಾರುಕಟ್ಟೆ ನಿರ್ಮಾಣಕ್ಕೆಂದಿರುವ ನಿವೇಶವನ್ನು ತಕ್ಷಣ ಕ್ಲೀನ್‌ಗೆ ಮಾಡಿ ಸಲು ಸೂಚಿಸಿದ್ದೇನೆ.

    ಸಂತೆಹೊಂಡದ ಮಾರುಕಟ್ಟೆ ನಿರ್ಮಾಣ ಪೂರ್ಣಗೊಳಿಸಲು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವು ದು. ರಾಜಕಾಲುವೆ ಒತ್ತುವರಿ ಯಾರಿಂದಲೇ ಆಗಿರಲಿ ಅದನ್ನು ತಕ್ಷಣ ತೆರವುಗೊಳಿಸುವುದಾಗಿ ಹೇಳಿದರು.
    ಎಸ್ಪಿ ಕೆ.ಪರಶುರಾಮ,ಆರ್‌ಟಿಒ ಪ್ರಮಥೇಶ್,ಎಸಿ ಎಂ.ಕಾರ್ತಿಕ್,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕು ಮಾರ್,ನಗರಸಭೆ ಆಯಕ್ತ ಶ್ರೀನಿವಾಸ್,ಆರ್‌ಒ ಜಯಣ್ಣ,ಪರಿಸರ ಇಂಜಿನಿಯರ್ ಜಾಫರ್,ಇಂಜಿನಿಯರ್ ಕಿರಣ್,ಸದಸ್ಯ ಮಲ್ಲಿಕಾ ರ್ಜುನ್, ಸಂಚಾರಿ ಠಾಣೆ ಇನ್ಸ್‌ಫೆಕ್ಟರ್ ರಾಜು,ಲೋಕೋಪಯೋಗಿ,ಕರ್ನಾಟಕ ಕುಡಿವ ನೀರು ಮತ್ತು ಒಳ ಚ ರಂಡಿ ಮಂಡಳಿ ಸೇರಿ ದಂತೆ ಸಂಬಂಧಿಸಿದ ಅಧಿಕಾರಿಗಳು,ಕೂಡಾ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಮತ್ತಿತರರು ಪರಿಶೀಲನೆ ವೇಳೆ ಇದ್ದರು.

    ಪರಿಶೀಲನೆ ಸಂದರ್ಭದಲ್ಲಿ ಮಳೆ ಸುರಿಯ ತೊಡಗಿದ್ದರಿಂದಾಗಿ ಎಸ್‌ಪಿ ಪರಶುರಾಮ ಅವರು,ಶಾಸಕರಿಗೆ ಕೊಡೆ ಹಿಡಿದು ಮಳೆ ಯಿಂದ ರಕ್ಷಣೆ ನೀಡಿದರು.


    ಬಾಕ್ಸ್.
    ಸಚಿವರು ಸ್ಪಂದಿಸುತ್ತಿದ್ದಾರೆ
    ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕೆಲವು ಶಾಸಕರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ವಿಚಾರ ತಮ್ಮ ಗಮ ನಕ್ಕೆ ಬಂದಿಲ್ಲ. ಆದರೆ ಎಲ್ಲ ಸಚಿವರೂ ತಮಗೆ ಸ್ಪಂದಿಸುತ್ತಿದ್ದಾರೆಂದು ಶಾಸಕ ಕೆ.ಸಿ.ವೀರೇಂದ್ರ ಹೇಳಿದರು.


    (ಸಿಟಿಡಿ 25 ಎಂಎಲ್‌ಎ ರೋಡ್ ಡಿವೈಡರ್)
    ಚಿತ್ರದುರ್ಗದಲ್ಲಿ ಮಂಗಳವಾರ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರು ರೋಡ್ ಡಿವೈಡರ್ ನಿರ್ಮಾಣ ಮತ್ತಿತರ ಕಾಮಗಾರಿಗಳ ವೀ ಕ್ಷಣೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಎಸ್ಪಿ ಕೆ.ಪರಶುರಾಮ,ಆರ್‌ಟಿಒ ಸಿ.ಎಸ್.ಪ್ರಮುಥೇಶ್,ಎಸಿ ಎಂ.ಕಾರ್ತಿಕ್, ಮಹೇಂದ್ರಕುಮಾರ್,ಶ್ರೀನಿವಾಸ್,ಜಯಣ್ಣ,ಇಂಜಿನಿಯರ್ ಜಾಫರ್,ಕಿರಣ್,ಮಲ್ಲಿಕಾರ್ಜುನ್ ಮತ್ತಿರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts