More

    ರೋಪ್ ವೇ ಬದಲು ಜಿಪ್​ಲೈನ್

    ಆನಂದ ಅಂಗಡಿ ಹುಬ್ಬಳ್ಳಿ

    ನೃಪತುಂಗ ಬೆಟ್ಟದಲ್ಲಿ ರೋಪ್ ವೇ ನಿರ್ವಿುಸುವ ಯೋಜನೆಯನ್ನು ಮಹಾನಗರ ಪಾಲಿಕೆ ಕೈಬಿಟ್ಟಿದೆ. ಅದರ ಬದಲಾಗಿ, ಅರಣ್ಯ ಇಲಾಖೆ ನಿರ್ವಿುಸಬೇಕೆಂದಿದ್ದ ಜಿಪ್ ಲೈನ್​ಅನ್ನು ಅಳವಡಿಸುವ ಜವಾಬ್ದಾರಿ ವಹಿಸಿಕೊಂಡಿದೆ.

    ರೋಪ್ ವೇ ನಿರ್ವಣಕ್ಕೆ ಹಲವಾರು ತಾಂತ್ರಿಕ ಸಮಸ್ಯೆಗಳು ಎದುರಾಗುವ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈ ಬಿಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಈ ಹಿಂದೆ ದರ್ಪಣ ಜೈನ್ ಅವರು ಜಿಲ್ಲಾಧಿಕಾರಿ ಆಗಿದ್ದ ಸಮಯದಲ್ಲಿಯೂ ನೃಪತುಂಗ ಬೆಟ್ಟದಿಂದ ಉಣಕಲ್ ಕೆರೆಯ ಉದ್ಯಾನದವರೆಗೆ ರೋಪ್ ವೇ ನಿರ್ವಣದ ಆಶಯ ಗರಿಗೆದರಿತ್ತು. ಆಗಲೂ, ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಯೋಜನೆ ಕೈಬಿಡಲಾಗಿತ್ತು.

    ಇದೀಗ, ನೃಪತುಂಗ ಬೆಟ್ಟದಲ್ಲಿ ಜಿಪ್ ಲೈನ್ ನಿರ್ವಿುಸುವ ಅರಣ್ಯ ಇಲಾಖೆಯ ಯೋಜನೆಗೆ ಹೊಸ ರೂಪ ಬಂದಿದ್ದು, ಅನುಷ್ಠಾನಕ್ಕೆ ವೇಗ ದೊರೆತಿದೆ. ಸುಮಾರು 50 ಲಕ್ಷ ರೂ.ಗಳ ಯೋಜನಾ ವೆಚ್ಚದಲ್ಲಿ ಅರ್ಧದಷ್ಟು ಹಣವನ್ನು ಮಹಾನಗರ ಪಾಲಿಕೆ ನೀಡಲು ಸಮ್ಮತಿ ಸೂಚಿಸಿದೆ. ಇನ್ನುಳಿದ 25 ಲಕ್ಷ ರೂ.ಗಳನ್ನು ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ಶಾಸಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೀಡಲು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

    ನೃಪತುಂಗ ಬೆಟ್ಟದಲ್ಲಿ ಜಿಪ್​ಲೈನ್ ಅಳವಡಿಕೆಯ ಯೋಜನೆಯ ಅನುಮೋದನೆಗಾಗಿ ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ತಿಂಗಳ ಕೊನೆಯೊಳಗೆ ಟೆಂಡರ್ ಕರೆಯಲು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

    ನಿಗದಿಯಂತೆ ಎಲ್ಲ ಕಾರ್ಯಗಳೂ ನಡೆದಲ್ಲಿ ಮೂರ್ನಾಲ್ಕು ತಿಂಗಳಲ್ಲಿ ನೃಪತುಂಗ ಬೆಟ್ಟದಲ್ಲಿ ಜಿಪ್​ಲೈನ್ ನಿರ್ವಣಗೊಳ್ಳಲಿದೆ.

    • ನೃಪತುಂಗ ಬೆಟ್ಟದಿಂದ ಶಿರಡಿ ನಗರದವರೆಗೆ ಸುಮಾರು 400 ಮೀಟರ್ ಉದ್ದ ಜಿಪ್​ಲೈನ್ ನಿರ್ವಣಗೊಳ್ಳಲಿದೆ.
    • ನೆಲದಿಂದ ಸುಮಾರು 25 ಅಡಿ ಎತ್ತರದಲ್ಲಿ ಜಿಪ್​ಲೈನ್ ಇರಲಿದೆ.
    • ಜಿಪ್​ಲೈನ್​ನ 2 ಮಾರ್ಗಗಳು ನಿರ್ವಣಗೊಳ್ಳಲಿವೆ.
    • ಈಗಾಗಲೇ ಗದಗ ಬಳಿಯ ಬಿಂಕದಕಟ್ಟಿಯಲ್ಲಿ ಜಿಪ್​ಲೈನ್ ಇದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
    • ಜಿಪ್​ಲೈನ್ ನಿರ್ವಣದಿಂದ ಹುಬ್ಬಳ್ಳಿಯ ನೃಪತುಂಗ ಬೆಟ್ಟಕ್ಕೆ ಮತ್ತೊಂದು ಗರಿ ಬರಲಿದೆ.

    ಮಹಾನಗರ ಪಾಲಿಕೆ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಡಿ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಜಿಪ್​ಲೈನ್ ನಿರ್ವಿುಸಲು ತೀರ್ವನಿಸಲಾಗಿದೆ. ಯೋಜನೆ ಪೂರ್ಣಗೊಂಡಾಗ ಇದು ಪ್ರವಾಸಿಗರ ಆಕರ್ಷಣೆಯಾಗಲಿದೆ.

    – ಡಾ. ಸುರೇಶ ಇಟ್ನಾಳ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts