More

    ಸ್ವಚ್ಛ ಭಾನುವಾರ ಅಭಿಯಾನ ಆರಂಭ

    ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ ಹು-ಧಾ ಮಹಾನಗರ ಜಿಲ್ಲಾ ಯುವ ಮೋರ್ಚಾ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಭಾರತ ನಿರ್ವಣದ ಸಂಕಲ್ಪದೊಂದಿಗೆ ಹಮ್ಮಿಕೊಂಡಿರುವ ಸ್ವಚ್ಛ ಭಾನುವಾರ ಅಭಿಯಾನವನ್ನು ಕರ್ನಾಟಕ ರಾಜ್ಯೋತ್ಸವದಂದು ಇಲ್ಲಿಯ ನೃಪತುಂಗ ಬೆಟ್ಟದಲ್ಲಿ ಆರಂಭಿಸಲಾಯಿತು.

    ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಚಾಲನೆ ನೀಡಿ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಯಂ ಸೇವೆ ಮೂಲಕ ಸ್ವಚ್ಛಗೊಳಿಸುವ ಈ ಅಭಿಯಾನ ಪ್ರತಿಯೊಂದು ಜಿಲ್ಲೆಯಲ್ಲೂ ನಡೆಯಬೇಕಿದೆ. ತಾವು ಹುಬ್ಬಳ್ಳಿಯಲ್ಲಿದ್ದಾಗ ಪ್ರತಿ ಭಾನುವಾರ ಸ್ವತಃ ಪಾಲ್ಗೊಂಡು ಯುವಕರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.

    ನೇತೃತ್ವ ವಹಿಸಿದ್ದ ಯುವಮೋರ್ಚಾ ಜಿಲ್ಲಾಧ್ಯಕ್ಷ ಕಿರಣ ಉಪ್ಪಾರ ಮಾತನಾಡಿ, ಪ್ರತಿ ಭಾನುವಾರ ಸ್ವಚ್ಛತಾ ಸೇವೆಯನ್ನು ಗಲ್ಲಿ ಗಲ್ಲಿಗಳಲ್ಲಿ ಯುವಜನರು ಸ್ವಯಂ ಸ್ಪೂರ್ತಿಯಿಂದ ಹಮ್ಮಿಕೊಂಡು ಪ್ರಧಾನಿಯವರ ಕನಸನ್ನು ನನಸು ಮಾಡಬೇಕು ಎಂದು ವಿನಂತಿಸಿದರು.

    ಕರೊನಾ ಸೇನಾನಿ ಡಾ. ಸಚಿನ್ ಹೊಸಕಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ಬಿಜೆಪಿ ಮುಖಂಡರಾದ ಪ್ರಧಾನ ಕಾರ್ಯದರ್ಶಿ ಸಂಗಮ ಹಂಜಿ, ಮುಖಂಡರಾದ ಚನ್ನು ಹೊಸಮನಿ, ಸಿದ್ದು ಮೊಗಲಿಶೆಟ್ಟರ್, ಶಿವಯ್ಯ ಹಿರೇಮಠ, ಇತರರು ಇದ್ದರು.

    ನಂತರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನೃಪತುಂಗ ಬೆಟ್ಟದ ವಿವಿಧೆಡೆ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಆಯ್ದು ತೆಗೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts