More

    ಹುಬ್ಬಳ್ಳಿ ನಗರದಲ್ಲಿ ಚಿರತೆ ಪ್ರತ್ಯಕ್ಷ?

    ಹುಬ್ಬಳ್ಳಿ: ಚಿರತೆಯೊಂದು ಹುಬ್ಬಳ್ಳಿ ನಗರಕ್ಕೆ ನುಗ್ಗಿರುವ ಅನುಮಾನ ವ್ಯಕ್ತವಾಗಿದ್ದು, ನೃಪತುಂಗ ಬೆಟ್ಟದಲ್ಲಿ ಬುಧವಾರ ರಾತ್ರಿ ಸುತ್ತಾಡುತ್ತಿರುವುದನ್ನು ಕಂಡಿರುವುದಾಗಿ ‘ವಿಜಯವಾಣಿ’ ಓದುಗರೊಬ್ಬರು ತಿಳಿಸಿದ್ದಾರೆ.
    ರಾತ್ರಿ 9ರ ಸುಮಾರಿಗೆ ನೃಪತುಂಗ ಬೆಟ್ಟದ ಬಳಿ ವಾಯು ವಿಹಾರಕ್ಕೆ ಹೋದ ಸಂದರ್ಭದಲ್ಲಿ ಅವರಿಗೆ ಚಿರತೆ ಕಂಡಿದೆ. ಅವರಿದ್ದ ಸ್ಥಳದಿಂದ ಸುಮಾರು 60- 70 ಮೀಟರ್ ದೂರದಲ್ಲಿ ಚಿರತೆ ಕಾಣಿಸಿದೆ. ತಕ್ಷಣ ಪತ್ರಿಕೆ ಕಚೇರಿಗೆ ಕರೆ ಮಾಡಿದ ಅವರು, ತಾವು ಚಿರತೆ ಕಂಡಿರುವ ಬಗ್ಗೆ ಮಾಹಿತಿ ನೀಡಿದರು.
    ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ವಲಯ ಅರಣ್ಯ ಅಧಿಕಾರಿ ಎಸ್.ಎಂ. ತೆಗ್ಗಿನಮನಿ, ಕಳೆದ ವಾರ ಅಂಚಟಗೇರಿ ಹೊರವಲಯದಲ್ಲಿ ಚಿರತೆ ಕಂಡಿತ್ತು. ಅದನ್ನು ಹಿಡಿಯಲು ಬೋನು ಇಡಲಾಗಿತ್ತು. ಬೋನಿನಲ್ಲಿ ಹೆಜ್ಜೆ ಇಟ್ಟಿದ್ದ ಚಿರತೆ, ನಂತರ ಹೆಜ್ಜೆಯನ್ನು ಮರಳಿ ಹೊರಗೆ ಇಟ್ಟು, ಅಲ್ಲಿಂದ ಚಲಿಸಿತ್ತು. ಆಮೇಲೆ ಅದು ಕಂಡಿರಲಿಲ್ಲ ಎಂದು ಹೇಳಿದರು.
    ಜನದಟ್ಟಣೆ ಪ್ರದೇಶ ದಾಟಿಕೊಂಡು ನೃಪತುಂಗ ಬೆಟ್ಟಕ್ಕೆ ಚಿರತೆ ಕಾಲಿಟ್ಟಿರುವುದು ಅಚ್ಚರಿಯ ವಿಷಯವಾಗಿದೆ. ಒಂದುವೇಳೆ ಬೆಟ್ಟಕ್ಕೆ ಅದು ಬಂದಿದ್ದಲ್ಲಿ ಗಿಡ-ಮರ, ಪೊದೆಗಳು ಇರುವುದರಿಂದ ಅಲ್ಲಿ ಆಹಾರಕ್ಕಾಗಿ ಹುಡುಕಾಡಿರುವ ಸಾಧ್ಯತೆ ಇದೆ. ಚಿರತೆ ಒಂದೇ ಕಡೆ ಸೀಮಿತ ಪ್ರದೇಶದಲ್ಲಿ ಹೆಚ್ಚು ಸಮಯ ಇರುವುದಿಲ್ಲ. ನಿತ್ಯ 60 ಕಿಮೀ ವ್ಯಾಪ್ತಿಯಲ್ಲಿ ಸಂಚರಿಸುತ್ತದೆ ಎಂದು ಮಾಹಿತಿ ನೀಡಿದರು. ಮುಂಜಾಗ್ರತೆಯಾಗಿ ನೃಪತುಂಗ ಬೆಟ್ಟದಲ್ಲಿ ಗುರುವಾರ ಬೆಳಗಿನಜಾವದಿಂದ ವಾಯು ವಿಹಾರ ನಿಷೇಧಿಸಲಾಗುವುದು. ಚಿರತೆ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts