More

    ರೋಟರಿಯಿಂದ ಸಾಮಾಜಿಕ ಕಾರ್ಯ

    ಶಿರಸಿ: ನಿರಂತರವಾಗಿ ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡು ರೋಟರಿ ಸಂಸ್ಥೆಯು ಸಮಾಜಸೇವೆಗೆ ಪರ್ಯಾಯವಾಗಿ ಬೆಳೆಯುತ್ತಿದೆ ಎಂದು ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3170ರ ಮಾಜಿ ಪ್ರಾಂತಪಾಲ ಡಾ. ರಾಜನ್ ದೇಶಪಾಂಡೆ ಹೇಳಿದರು.

    ನಗರದ ರೋಟರಿ ಸೆಂಟರ್​ನಲ್ಲಿ ಶುಕ್ರವಾರ ಶಿರಸಿ ರೋಟರಿ ಕ್ಲಬ್​ನ 60ನೇ ಸಂಸ್ಥಾಪನೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಚಾರಿಟಬಲ್ ಕಣ್ಣಿನ ಆಸ್ಪತ್ರೆ, ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತ ಶಿಶು ಘಟಕ, ಶುದ್ಧ ಕುಡಿಯವ ನೀರಿನ ಘಟಕಗಳ ಸ್ಥಾಪನೆ, ಪ್ರೌಢಶಾಲೆಗಳಿಗೆ ಕಲಿಕೆ ಸಾಧನಗಳ ಕೊಡುಗೆ ಮುಂತಾದ ಜನೋಪಯೋಗಿ ಯೋಜನೆಗಳಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾದರಿಯ ಸೇವಾ ಸಂಸ್ಥೆ ಎಂಬ ಪ್ರಶಂಸೆಗೆ ಶಿರಸಿ ರೋಟರಿ ಪಾತ್ರವಾಗಿದೆ ಎಂದರು.

    ಭಾರತದಲ್ಲಿ ರೋಟರಿ ಸಂಸ್ಥೆಯ ಶತಮಾನೋತ್ಸವ ಆಚರಣೆ ಮತ್ತು ಶಿರಸಿ ರೋಟರಿ ಕ್ಲಬ್​ನ ಷಷ್ಠ್ಯ್ದ ಆಚರಣೆಯ ಫಲಕವನ್ನು ಅನಾವರಣಗೊಳಿಸಿದ ಜಿಲ್ಲಾ ಪ್ರಾಂತಪಾಲರ ಪ್ರತಿನಿಧಿ ಸಾಂಗ್ಲಿಯ ಕಿಶೋರ ಲುಲ್ಲಾ ಅವರು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಶಸ್ಸುಗಳಿಸಲಿ ಎಂದು ಶುಭಕೋರಿದರು.

    ಶಿರಸಿ ರೋಟರಿಯ ಹಿರಿಯ ಸಂಸ್ಥಾಪಕ ಸದಸ್ಯ ರೊ. ಡಾ. ವಿ. ಎಸ್. ಸೋಂದೆ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ಹತ್ತು ಪ್ರೌಢಶಾಲೆಗಳಿಗೆ ಈ-ಕಲಿಕೆ ಸಾಧನಗಳನ್ನು ಹುಬ್ಬಳ್ಳಿಯ ನರೇಂದ್ರ ಬಾರವಾಲ ವಿತರಿಸಿದರು. ಮಾರಿಕಾಂಬಾ ಕ್ರೀಡಾಂಗಣದ ಈಜುಗೊಳದ ಆವರಣದಲ್ಲಿ ನಿರ್ವಿುಸಿದ 60 ಲಕ್ಷ ರೂ. ವೆಚ್ಚದ ಡಾ. ವಿ. ಎಸ್. ಸೋಂದೆ ಹಿರಿಯ ನಾಗರಿಕರ ವ್ಯಾಯಾಮ ಕೇಂದ್ರವನ್ನು ಡಾ. ವಿ.ಎಸ್.ಸೋಂದೆ ಮತ್ತು ಡಾ. ರಾಜನ್ ದೇಶಪಾಂಡೆ ಲೋಕಾರ್ಪಣೆಗೊಳಿಸಿದರು. ನಗರಸಭೆ ಪೌರಾಯುಕ್ತ ರಮೇಶ ನಾಯಕ ಉಪಸ್ಥಿತರಿದ್ದರು. ರೋಟರಿ ಕ್ಲಬ್ ತಾಲೂಕಾಧ್ಯಕ್ಷ ಡಾ. ಶಿವರಾಮ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಂತಪಾಲ ಡಾ. ದಿನೇಶ ಹೆಗಡೆ ಮತ್ತು ಆರ್.ಎ.ಖಾಜಿ ಪರಿಚಯಿಸಿದರು. ಅನಂತ ಪದ್ಮನಾಭ ವರದಿ ವಾಚಿಸಿದರು. ಪಾಂಡುರಂಗ ಪೈ ಸನ್ಮಾನ ಪತ್ರ ವಾಚಿಸಿದರು. ಗಣಪತಿ ಭಟ್ಟ ವಂದಿಸಿದರು. ಡಾ. ರಮೇಶ ಹೆಗಡೆ ಮತ್ತು ಮಂಜುನಾಥ ಶೆಟ್ಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts