More

    ರೋಗ ಉತ್ಪತ್ತಿ ತಾಣವಾದ ಖಾಲಿ ನಿವೇಶನ

    ಗುತ್ತಲ: ಪಟ್ಟಣದಲ್ಲಿ ಖಾಲಿ ಬಿದ್ದಿರುವ ನಿವೇಶನಗಳಲ್ಲಿ ಸಾರ್ವಜನಿಕರು ಕಸ ಚೆಲ್ಲುತ್ತಿದ್ದು, ಅದರಿಂದ ಅವುಗಳು ರೋಗ ಉತ್ಪಾದಿಸುವ ತಾಣವಾಗುತ್ತಿವೆ.

    ಪಟ್ಟಣದ 1, 2, 7, 8, 9, 10, 15, 16ನೇ ವಾರ್ಡ್ ವ್ಯಾಪ್ತಿಯ ಚಿದಂಬರ ನಗರ, ಶಾಂತಿ ನಗರ, ಮಾಲತೇಶ ನಗರ, ವಿನಾಯಕ ನಗರ ಸೇರಿ ಅನೇಕ ನೂತನ ಬಡಾವಣೆಗಳಲ್ಲಿರುವ ಖಾಸಗಿ ಹಾಗೂ ಸರ್ಕಾರಿ ಖಾಲಿ ನಿವೇಶನಗಲ್ಲಿ ಅಕ್ಕಪಕ್ಕದ ಜನರು ಕಸ ತಂದು ಹಾಕುತ್ತಿದ್ದಾರೆ. ಇನ್ನೂ ಕೆಲವರು ನಿವೇಶನಗಳನ್ನು ಬಯಲು ಬಹಿರ್ದೆಸೆಗೆ ಬಳಸುಸುತ್ತಿದ್ದಾರೆ. ಇದರಿಂದ ಅಲ್ಲಿನ ವಾತಾವರಣ ಕಲುಷಿತಗೊಂಡು ಹಂದಿಗಳ ಕಾಟ ಹೆಚ್ಚಿದ್ದು, ಕಿರಿಕಿರಿ ಉಂಟಾಗುತ್ತಿದೆ. ಮಳೆಗಾಲದ ಈ ದಿನಗಳಲ್ಲಿ ಖಾಲಿ ನಿವೇಶನದಲ್ಲಿ ಕಸ ಹಾಕುತ್ತಿರುವುದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದರಿಂದ ಜನರಿಗೆ ವಿವಿಧ ಕಾಯಿಲೆ ಬರುವ ಸಾಧ್ಯತೆ ಅಧಿಕವಾಗಿದೆ.

    ನೆಗಳೂರ ರಸ್ತೆಯ ನಾಡಕಚೇರಿಯ ಪಕ್ಕದ ಖಾಲಿ ನಿವೇಶನದಲ್ಲಿ ಕಸ ಹಾಗೂ ಚರಂಡಿ ನೀರು ಸುಗಮವಾಗಿ ಸಾಗದ ಕಾರಣ ದುರ್ವಾಸನೆಯಿಂದ ಕೂಡಿದೆ. ಇದರಿಂದ ನಾಡಕಚೇರಿಗೆ ಆಗಮಿಸುವ ಜನರಿಗೆ ತೀವ್ರ ತೊಂದರೆಯಾಗಿದೆ. ಇಂತಹ ಕಲುಷಿತ ವಾತಾವರಣ ಸಹಿಸಿಕೊಂಡು ಕಚೇರಿ ಸಿಬ್ಬಂದಿ ಕೆಲಸ ಮಾಡುತ್ತಿರುವುದು ಆಶ್ಚರ್ಯವನ್ನುಂಟು ಮಾಡಿದೆ ಎನ್ನುತ್ತಾರೆ ಅನೇಕರು.

    ಬಡವಾಣೆಗಳಲ್ಲಿ ಉದ್ಯಾನ ಹಾಗೂ ಸಾರ್ವಜನಿಕರ ಉದ್ದೇಶಕ್ಕೆ ಮೀಸಲಿಟ್ಟ ಜಾಗ ಕಸ ಎಸೆಯುವ ತಾಣವಾಗಿವೆ. ಉದ್ಯಾನಕ್ಕಾಗಿ ಮೀಸಲಿಟ್ಟು ಒಂದೇ ಒಂದೇ ನಿವೇಶನದಲ್ಲೂ ಪ.ಪಂ. ಉದ್ಯಾನ ನಿರ್ವಿುಸಿಲ್ಲ. ನಿವೇಶನ ಖಾಲಿ ಬಿಟ್ಟ ಮಾಲೀಕರಿಗೆ ನಿವೇಶನ ಸ್ವಚ್ಛಗೊಳಿಸುವಂತೆ ಪ.ಪಂ. ಅಧಿಕಾರಿಗಳು ಸೂಚಿಸಿಬೇಕು. ಅಲ್ಲದೆ, ಸರ್ಕಾರಿ ಖಾಲಿ ನಿವೇಶನಗಳನ್ನು ಪಟ್ಟಣ ಪಂಚಾಯಿತಿಯಿಂದಲೇ ಸ್ವಚ್ಛಗೊಳಿಸುವ ಕಾರ್ಯ ಆಗಬೇಕಾಗಿದೆ.

    ಖಾಲಿ ನಿವೇಶನಗಳ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಅದನ್ನು ಅವರ ಸ್ವಚ್ಛಗೊಳಿಸದಿದ್ದಲ್ಲಿ ಪ.ಪಂ,ನಿಂದ ಸ್ವಚ್ಛಗೊಳಿಸಿ ಅದರ ವೆಚ್ಚವನ್ನು ಅವರಿಂದ ಭರಿಸಿಕೊಳ್ಳಲಾಗುವುದು. ಪಟ್ಟಣದಲ್ಲಿ ವಾಸವಿಲ್ಲದ ಕಾರಣ ಕೆಲವರಿಗೆ ನೋಟಿಸ್ ನೀಡಲು ತೊಂದರೆಯಾಗಿದೆ.
    | ಏಸು ಬೆಂಗಳೂರ, ಮುಖ್ಯಾಧಿಕಾರಿ


    ನಾಡಕಚೇರಿ ಪಕ್ಕದ ಖಾಲಿ ಜಾಗ ಕಲುಷಿತವಾಗಿದೆ. ಇದರಿಂದಾಗಿ ನಾಡಕಚೇರಿಗೆ ಆಗಮಿಸುವ ನಮಗೆ ಬಹಳ ಕಿರಿಕಿರಿಯಾಗಿದೆ. ದುರ್ವಾವಸನೆ ಸಹಿಸಿಕೊಂಡು ಅಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಿರುವುದು ಬಹಳ ನೋವಿನ ಸಂಗತಿ. ಆದಷ್ಟು ಬೇಗ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
    | ಸಂಜಯಗಾಂಧಿ ಸಂಜೀವಣ್ಣನವರ, ನೆಗಳೂರ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts