More

    ರೈಲು ಕಂಬಿ ತಡೆಗೋಡೆ ಅವೈಜ್ಞಾನಿಕ

    ಸೋಮವಾರಪೇಟೆ: ಮೀಸಲು ಅರಣ್ಯದ ಸರಹದ್ದಿನಲ್ಲಿ ಅರಣ್ಯ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ರೈಲು ಕಂಬಿ ತಡೆಗೋಡೆ ಅವೈಜ್ಞಾನಿಕವಾಗಿದ್ದು, ಕಾಡಾನೆಗಳು ಬ್ಯಾರಿಕೇಡ್‌ನಲ್ಲಿ ಸುಸುಳಿ ಬರುತ್ತಿವೆ ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಆರೋಪಿಸಿದರು.

    ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಎ.ಸಿ.ರೂಂ ನಲ್ಲಿ ಕುಳಿತು ಅಧಿಕಾರಿಗಳು ಯೋಜನೆ ರೂಪಿಸುತ್ತಾರೆ. ಅಂತಹವರ ಅಸಡ್ಡೆಯಿಂದ ಸರ್ಕಾರದ ಕೋಟ್ಯಂತರ ರೂ. ಹಣ ಪೋಲಾಗುತ್ತದೆ ಎಂದರು. ಎರಡು ಪಟ್ಟಿಯ ರೈಲು ಕಂಬಿಯ ಬ್ಯಾರಿಕೇಡ್ ನಿರ್ಮಿಸುತ್ತಿದ್ದಾರೆ. ಈಗ ಕಾಡಾನೆಗಳು ಪಟ್ಟಿಯೊಳಗೆ ನುಗ್ಗಿ ಕೃಷಿ ಭೂಮಿಗೆ ಲಗ್ಗೆಯಿಡುತ್ತಿವೆ. ಇನ್ನಾದರೂ ಮೂರು ಪಟ್ಟಿಗಳನ್ನು ಅಳವಡಿಸುವಂತೆ ಆಗ್ರಹಿಸಿದರು.

    ಎಸಿಎಫ್ ಗೋಪಾಲ್ ಮಾತನಾಡಿ, ಸರ್ಕಾರದಿಂದ ಅನುಮೋದನೆಗೊಂಡ ಯೋಜನೆಯಾಗಿದ್ದು, ಈಗ ಬದಲಾಯಿಸಲು ಸಾಧ್ಯವಿಲ್ಲ. ಕಾಮಗಾರಿ ನಂತರ ಮತ್ತೊಂದು ಪಟ್ಟಿ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

    ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಟಿ.ಪರಮೇಶ್ ಮಾತನಾಡಿ, ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕಾಯಂ ಪಿಡಿಒಗಳು, ಡೇಟಾ ಆಪರೇಟರ್, ಬಿಲ್ ಕಲೆಕ್ಟರ್‌ಗಳಿಲ್ಲದೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ಕಳೆದ ಎರಡು ವರ್ಷಗಳಿಂದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕಾಯಂ ಪಿಡಿಒಗಾಗಿ ಲಿಖಿತ ಮನವಿ ಮಾಡಿಕೊಂಡರೂ ಕ್ರಮ ಕೈಗೊಂಡಿಲ್ಲ ಎಂದರು.

    ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಮಾತನಾಡಿ, ದುಂಡಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಜಾಸ್ತಿಯಾಗಿದೆ. ಗ್ರಾಮದ ರಸ್ತೆಯಲ್ಲೇ ಓಡಾಡುತ್ತಿವೆ ಎಂದು ದೂರಿದರು.
    ಶನಿವಾರಸಂತೆ ಆರ್‌ಎಫ್‌ಒ ಪ್ರಫುಲ್ ಶೆಟ್ಟಿ ಮಾತನಾಡಿ, ಎರಡು ಹೆಣ್ಣಾನೆ ಮತ್ತು ಒಂದು ಮರಿಯಿದೆ. ಒಂದೆರಡು ದಿನದಲ್ಲಿ ಇನ್ನೊಂದು ಮರಿ ಹಾಕಲಿದೆ. ಈ ಸಂದರ್ಭದಲ್ಲಿ ಓಡಿಸಲು ಸಾಧ್ಯವಿಲ್ಲ. ಮರಿ ನಡೆಯಲು ಪ್ರಾರಂಭವಾದ ಮೇಲೆ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸೋಮವಾರಪೇಟೆ ತಹಸೀಲ್ದಾರ್ ನರಗುಂದ್, ಕುಶಾಲನಗರ ತಹಸೀಲ್ದಾರ್ ಪ್ರಕಾಶ್, ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ರಾಜ್‌ಗೋಪಾಲ್, ತಾಪಂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts