More

    ರೈತರಿಗೆ 7 ತಾಸು ವಿದ್ಯುತ್ ಪೂರೈಸಿ


    ಯಾದಗಿರಿ: ಸರಕಾರ ನಿಗದಿಪಡಿಸಿದಂತೆ ಜಿಲ್ಲೆಯ ಸಾರ್ವಜನಿಕರ ಹಾಗೂ ರೈತರ ಅನುಕೂಲಕ್ಕಾಗಿ ನಿರಂತರ ಏಳು ತಾಸು ವಿದ್ಯುತ್ ಸರಬರಾಜು ಮಾಡಲು ವಿಶೇಷ ಗಮನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಕೆಪಿಟಿಸಿಎಲ್ ಹಾಗೂ ಜೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಿರಂತರ ವಿದ್ಯುತ್ ವ್ಯತ್ಯಯದಿಂದಾಗಿ ಸಾರ್ವಜನಿಕರು ವಿಶೇಷವಾಗಿ ಗ್ರಾಮಾಂತರ ಜನರು ಹಾಗೂ ರೈತರು ತಿವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿದ್ಯುತ್ ಸರಬರಾಜಿನಲ್ಲಿ ಆಗುವತ್ತಿರುವ ತೊಂದರೆ ನಿವಾರಿಸಿ 7 ತಾಸು ವಿದ್ಯುತ್ ಕೊಡುವಂತೆ ನಿದರ್ೇಶನ ನೀಡಿದರು.

    ನಗರ ಹಾಗೂ ಕೈಗಾರಿಕೆಗಳಿಗೆ ಸರಬರಾಜು ಮಾಡುವ ವಿದ್ಯುತ್ನಲ್ಲಿ ಯಾವುದೇ ಸಮಸ್ಯೆಯಾಗುತ್ತಿಲ್ಲ. ಆದರೆ, ಅದೇ ಗ್ರಾಮೀಣ ಭಾಗದಲ್ಲಿ ರೈತರ ಪಂಪ್ಸೆಟ್ಗಳಿಗೆ ಕೊಡಬೇಕಾದರೆ ಏನೆಲ್ಲ ತಾಪತ್ರಯಗಳು ಎದುರಾಗುತ್ತವೆ. ಇದು ಯಾಕೆ ಎಂಬುದು ತಿಳಿಯುತ್ತಿಲ್ಲ. ಅಧಿಕಾರಿಗಳು ರೈತರ ವಿಷಯದಲ್ಲಿ ಯಾವುದೇ ರೀತಿಯ ಸಬೂಬು ನೀಡಬಾರದು ಎಂದು ಖಡಕ್ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ದುರಸ್ಥಿಯಿರುವ ವಿದ್ಯುತ್ ಪರಿವರ್ತಕಗಳು ತಕ್ಷಣ ಬದಲಿಸಿ, ಈ ವಿಷಯದಲ್ಲಿ ವಿಳಂಬ ಧೋರಣೆ ಸಲ್ಲದು. ಅಲ್ಪಾವಧಿ ಹಾಗೂ ಧೀಘರ್ಾವಧಿ ವಿದ್ಯುತ್ಸಮಸ್ಯೆಗಳ ಬಗ್ಗೆ ಆಯಾ ಸಹಾಯಕ ಅಭಿಯಂತರರು, ಕಾರ್ಯನಿವರ್ಾಹಕ ಅಭಿಯಂತರರ ಮೂಲಕ ತಮಗೆ ವರದಿ ಸಲ್ಲಿಸಬೇಕು. ಅದರಂತೆ ಆಯಾ ಶಾಸಕರ ಗಮನಕ್ಕೂ ಕಡ್ಡಾಯವಾಗಿ ತರಬೇಕು. ನಿಮಗೆ ಅವಶ್ಯಕ ಅನುದಾನ ಬೇಕಾದಲ್ಲಿ ದೊರಕಿಸಲು ಪ್ರಯತ್ನಿಸಲಾಗುವುದು. ಅಧಿಕಾರಿಗಳು ನಿರ್ಲಕ್ಷೃ ತೋರುವಂತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts