More

    ರೈತರಿಗೆ ಯಾವುದೇ ತೊಂದರೆಯಾಗದಿರಲಿ

    ನರಗುಂದ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕಲಕೇರಿಯ ಎಂ.ಎಸ್. ಪಾಟೀಲ, ಉಪಾಧ್ಯಕ್ಷರಾಗಿ ದಂಡಾಪೂರ ಕ್ಷೇತ್ರದ ಉಮೇಶ ಯಳ್ಳೂರ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಚಿವ ಸಿ.ಸಿ. ಪಾಟೀಲ ಹೂಮಾಲೆ ಹಾಕಿ ಸತ್ಕರಿಸಿದರು.

    ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಸರ್ಕಾರ ರೈತರ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ದಿ ಸಹಕಾರಿ ಬ್ಯಾಂಕ್​ಗಳನ್ನು ಸ್ಥಾಪಿಸಿದೆ. ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕ ಮಂಡಳಿಯ ಸರ್ವ ಸದಸ್ಯರು ಕಾರ್ಯ ನಿರ್ವಹಿಸಬೇಕು. ಈ ಸಹಕಾರಿ ಸಂಘಕ್ಕೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸಹಾಯ, ಸಹಕಾರವನ್ನು ನೀಡುವಂತೆ ಸಹಕಾರಿ ಸಚಿವ ಜಿ.ಮಾಧುಸ್ವಾಮಿ ಅವರೊಂದಿಗೆ ಈಗಾಗಲೇ ರ್ಚಚಿಸಿದ್ದೇನೆ ಎಂದರು.

    ಸುಸ್ತಿಸಾಲ ಹೊಂದಿರುವ ಕಟಬಾಕಿದಾರರು ಮಾ.31 ರೊಳಗಾಗಿ ತಮ್ಮ ಸಾಲ ಮರು ಪಾವತಿಸಿದರೆ ಸರ್ಕಾರದಿಂದ ಬಡ್ಡಿ ಮನ್ನಾ ಮಾಡಲಾಗುವುದು. ಈ ಕುರಿತು ಕಳೆದ ಸಂಪುಟ ಸಭೆಯಲ್ಲಿ ಈಗಾಗಲೇ ನಿರ್ಣಯಿಸಲಾಗಿದೆ. ಆದ್ದರಿಂದ ಸುಸ್ತಿ ಸಾಲವನ್ನು ಹೊಂದಿರುವ ತಾಲೂಕಿನ ಎಲ್ಲ ರೈತರು ನಿಗದಿತ ಸಮಯದೊಳಗೆ ತಮ್ಮ ಸಾಲವನ್ನು ಪಾವತಿಸುವ ಮೂಲಕ ಬ್ಯಾಂಕ್​ನ ಅಭಿವೃದ್ಧಿಗೆ ಸಹಕರಿಸಬೇಕು. ರಾಜ್ಯ ಬಿಜೆಪಿ ಸರ್ಕಾರ ರೈತರಿಗಾಗಿ ಸಹಕಾರಿ ಕ್ಷೇತ್ರದಿಂದ ಕೈಗೊಂಡಿರುವ ವಿವಿಧ ಮಹತ್ವದ ಯೋಜನೆಗಳ ಬಗ್ಗೆ ಕರ ಪತ್ರಗಳನ್ನು ಮುದ್ರಿಸಿ ಹಂಚಬೇಕು. ಮುಂದಿನ ಒಂದೂವರೆ ತಿಂಗಳ ಅವಧಿಯೊಳಗಾಗಿ ಬಾಕಿ ಉಳಿದಿರುವ ಎಲ್ಲ ಸಾಲಗಳ ಮರು ಪಾವತಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆಡಳಿತ ಮಂಡಳಿಯ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ನೂತನ ಅಧ್ಯಕ್ಷ, ಉಪಾಧ್ಯಕ್ಷರು ತಮ್ಮ ಅಧಿಕಾರವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಬೇಕೆಂದು ತಿಳಿಸಿದರು.

    ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಂ. ಹುಡೇದ, ಮಲ್ಲಪ್ಪ ಮೇಟಿ, ನಿಂಗಣ್ಣ ಗಾಡಿ, ನಾಗನಗೌಡ ಪಾಟೀಲ, ಶಿವನಗೌಡ ಹೆಬ್ಬಳ್ಳಿ, ಚಂದ್ರು ದಂಡಿನ, ಮಂಜು ಮೆಣಸಗಿ, ಉಮೇಶಗೌಡ ಪಾಟೀಲ, ರಾಚನಗೌಡ ಪಾಟೀಲ, ಜಿ.ಕೆ. ಹುಡೇದಮನಿ, ಈಶ್ವರಗೌಡ ಪಾಟೀಲ, ಸಂಗಮ್ಮ ಸುಂಕದ, ಮಂಜುಳಾ ಜೋಗಣ್ಣವರ, ರೇಣುಕಾ ಶಿವನಗೌಡ್ರ, ನೇತಾಜಿಗೌಡ ಕೆಂಪನಗೌಡ್ರ, ಚನ್ನಪ್ಪ ಕೇರಿ, ಎಸ್.ಆರ್. ಹಾಲಗೌಡ್ರ, ವಿಠ್ಠಲ ಹವಾಲ್ದಾರ ಹಾಗೂ ಬಿಜೆಪಿಯ ಅನೇಕ ಮುಖಂಡರು ಉಪಸ್ಥಿತರಿದ್ದರು.

    ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುತ್ತೇನೆ: ನೂತನ ಅಧ್ಯಕ್ಷ ಎಂ.ಎಸ್. ಪಾಟೀಲ ಮಾತನಾಡಿ, ತಾಲೂಕಿನ ಎಲ್ಲ ರೈತರ ಕೃಷಿ ಅಭಿವೃದ್ಧಿಗಾಗಿ ದಿ. ಎಸ್.ಎಫ್. ಪಾಟೀಲರು ಈ ಬ್ಯಾಂಕ್ ಅನ್ನು ಸ್ಥಾಪನೆ ಮಾಡಿದ್ದಾರೆ. ಹಿಂದಿನ ಅವಧಿಯಲ್ಲಿ ಅಧಿಕಾರ ನಡೆಸಿರುವ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಈ ಸಹಕಾರಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬ್ಯಾಂಕ್​ನ ಮಾಜಿ ಅಧ್ಯಕ್ಷ ಬಿ.ಬಿ. ಐನಾಪೂರ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts