More

    ರೆಟ್ರೋ ರಿಫ್ಲೆಕ್ಟಿವ್ ಟೇಪ್ ಅಳವಡಿಕೆ ಕೈಬಿಡಿ- ಜಿಲ್ಲಾ ಲಾರಿ ಮಾಲೀಕರ ಸಂಘದ ಒತ್ತಾಯ 

    ದಾವಣಗೆರೆ: ವಾಣಿಜ್ಯ ವಾಹನಗಳಿಗೆ ಕ್ಯೂ ಆರ್ ಕೋಡ್ ಹೊಂದಿರುವ ರೆಟ್ರೋ ರಿಫ್ಲೆಕ್ಟಿವ್ ರೇಡಿಯಂ ಅಳವಡಿಕೆಯಿಂದ ರಾಜ್ಯದಲ್ಲಿ ವರ್ಷಕ್ಕೆ 500 ಕೋಟಿ ರೂ. ಹಗರಣ ನಡೆಯುತ್ತಿದೆ ಎಂದು ದಾವಣಗೆರೆ ಜಿಲ್ಲಾ ಲಾರಿ ಮಾಲೀಕರು ಹಾಗೂ ಟಾನ್ಸ್‌ಪೋರ್ಟ್ ಏಜೆಂಟರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ದೂರಿದರು.
    ವಾಣಿಜ್ಯ ವಾಹನಗಳಿಗೆ ಕ್ಯೂ ಆರ್ ಕೋಡ್ ಹೊಂದಿರುವ ರೆಟ್ರೋ ರಿಫ್ಲೆಕ್ಟಿವ್ ಟೇಪ್ (ರೇಡಿಯಂ) ಅಳವಡಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇದು 3 ಮೀ.ಗೆ ಮಾರುಕಟ್ಟೆಯಲ್ಲಿ 60 ರೂ. ಇದೆ. 3 ಮೀಗೆ 400 ರೂ. ವೆಚ್ಚವಾಗಬೇಕು. ಆದರೆ 1500 ರೂ. ವರೆಗೂ ಮಾರಾಟ ಮಾಡಲಾಗುತ್ತಿದ್ದು 1100 ರೂ ಹೆಚ್ಚುವರಿ ಸಂಗ್ರಹಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕೆಲವೇ ಕಂಪನಿಗಳಿಂದ ಈ ಟೇಪ್ ಖರೀದಿಗೆ ಅವಕಾಶವಿದ್ದು, ಈ ಕಂಪನಿಗಳು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಟೇಪ್ ಮಾರಾಟ ಮಾಡುತ್ತಿದ್ದು ಯಾವುದೇ ಜಿಎಸ್‌ಟಿ ರಸೀದಿ ನೀಡುತ್ತಿಲ್ಲ. ಇದರಿಂದ ಮಾಲೀಕರಿಗೆ ಹೊರೆಯಾಗುತ್ತಿದೆ. ಈ ಬಗ್ಗೆ ತೆರಿಗೆ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
    ಕ್ಯೂ ಆರ್‌ಕೋಡ್ ಇರುವ ಟೇಪ್ ಅಳವಡಿಸಿದರೆ ಮಾತ್ರ ಅರ್ಹತೆ ಪತ್ರ ನವೀಕರಿಸಲಾಗುತ್ತಿದೆ. ಆದರೆ ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷತೆ ಸಮಿತಿ ಆದೇಶದಲ್ಲಿ ಕ್ಯೂ ಆರ್‌ಕೋಡ್ ಬಗ್ಗೆ ಪ್ರಸ್ತಾಪ ಇಲ್ಲ. ಬೇರಾವ ರಾಜ್ಯದಲ್ಲೂ ಕಡ್ಡಾಯವಲ್ಲದ ಆರ್‌ಕೋಡ್ ಟೇಪ್ ಕರ್ನಾಟಕದಲ್ಲೇಕೆ ಅನಿವಾರ್ಯ ಎಂದು ಪ್ರಶ್ನಿಸಿದರು.
    ವಾರದೊಳಗೆ ಕ್ಯೂ ಆರ್ ಕೋಡ್ ಟೇಪ್ ಕಡ್ಡಾಯ ಎಂಬ ನಿರ್ಧಾರ ಕೈಬಿಡಬೇಕು. ಇಲ್ಲದಿದ್ದರೆ ಆರ್‌ಟಿಒ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ, ಮಹಾಂತೇಶ್ ಒಣರೊಟ್ಟಿ, ಘನಿಸಾಬ್, ಸಾಧಿಕ್ ಅಹ್ಮದ್, ಎಂ.ದಾದಾಪೀರ್, ಮಸೂದ್ ಕಲೀಮ್‌ಉಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts