More

    ರುದ್ರಾಕ್ಷಿಮಠದ ಸೇವೆ ಅಪಾರ – ಶಶಿಕಲಾ ಜೊಲ್ಲೆ

    ಬೆಳಗಾವಿ: ನಾಗನೂರು ರುದ್ರಾಕ್ಷಿಮಠ ಅನ್ನ, ಅರ ದಾಸೋಹ ಮಾಡುವ ಮೂಲಕ ಅನೇಕ ಮಕ್ಕಳಿಗೆ ಬದುಕು ಕಟ್ಟಿಕೊಡುವ ಮೂಲಕ ಸಮಾಜದಲ್ಲಿ ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಮಾಡಿದೆ ಎಂದು ಮುಜರಾಯಿ ಇಲಾಖೆ ಸಚಿವ ಶಶಿಕಲಾ ಜೊಲ್ಲೆ ಹೇಳಿದರು.


    ನಗರದ ನಾಗನೂರು ರುದ್ರಾಕ್ಷಿಮಠದ ಆರ್​.ಎನ್​.ಶೆಟ್ಟಿ ಪಾಲಿಟೆಕ್ನಿಕ್​ ಕಾಲೇಜಿನ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಶಿವಬಸವ ಸ್ವಾಮೀಜಿ 133ನೇ ಜಯಂತಿ ಮಹೋತ್ಸವ ಹಾಗೂ ಅಕ್ಕನ ಬಳಗದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ರಾಜಕೀಯವಾಗಿ ಮುಂದೆ ಬರಲು ಬಸವಾದಿ ಶರಣರ ವಚನಗಳೇ ಕಾರಣ ಎಂದರು.

    ಈಗ ನಾವು ವಿಧಾನಸೌಧ, ಸಂಸತ್ತು ನೋಡುತ್ತಿದ್ದೇವೆ. ಆದರೆ 12ನೇ ಶತಮಾನದಲ್ಲಿಯೇ ಅನುಭವ ಮಂಟಪ ಎಂಬ ವಿಶ್ವದ ಮೊದಲ ಸಂಸತ್ತು ಸ್ಥಾಪಿಸಿದ ಹೆಗ್ಗಳಿಕೆ ಬಸವಣ್ಣನವರಿಗೆ ಸಲ್ಲುತ್ತದೆ. ಅಲ್ಲಮಪ್ರಭುಗಳು, ಅಕ್ಕಮಹಾದೇವಿ ಸೇರಿ ಅನೇಕ ಶರಣರು ಇದರಲ್ಲಿ ಭಾಗಿಯಾಗಿದ್ದು ನಮ್ಮೆಲ್ಲರ ಹೆಮ್ಮೆ. ಭೂಮಿ, ಗೋವು, ನದಿ, ಪ್ರಕೃತಿಗೆ ನಮ್ಮ ದೇಶದಲ್ಲಿ ಪವಿತ್ರ ತಾಯಿಯ ಸ್ಥಾನ ನೀಡಲಾಗಿದೆ. ತಾಯಂದಿರಿಗೆ ಸಂಸ್ಕಾರ ಕೊಟ್ಟಾಗ ತಾಯಂದಿರು ಮಕ್ಕಳಿಗೆ ಸಂಸ್ಕಾರ ಕೊಡಲು ಸಾಧ್ಯವಾಗುತ್ತದೆ. ಸಮಾಜ ಸದೃಢ, ಸಂಸ್ಕಾರಯುತವಾಗಲು ಸ್ವಾಮೀಜಿಗಳ ಅವಶ್ಯಕತೆಯಿದೆ ಎಂದು ಹೇಳಿದರು.

    ಅಮೃತ ಅಭಿನಂದನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಾಚಾರ್ಯ ಬಿ.ಎಸ್​.ಗವಿಮಠ, ನಾವು ಎಷ್ಟು ವರ್ಷ ಬದುಕಿದರೂ ಅರ್ಥಪೂರ್ಣ ಬದುಕು ನಮ್ಮ ಬದುಕಾಗಬೇಕು. ಬದುಕು ಣಿಕ. ಪ್ರತಿಣ ಬದುಕಬೇಕು. ಣಿಕ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು. ಸಮಾಜದಿಂದ ರೂಪುಗೊಂಡು ಸಮಾಜಮುಖಿ ಆಗಬೇಕು. ರಾಜಕಾರಣಕ್ಕಿಂತ ಸಮಾಜಕಾರಣದ ಅವಶ್ಯಕತೆಯಿದೆ ಎಂದರು.

    ಎಷ್ಟು ಕಾಲ ಬದುಕಿದ್ದೀವಿ ಎನ್ನುವುದು ಮುಖ್ಯವಲ್ಲ ಅರ್ಥಪೂರ್ಣ ಬದುಕಿಗೆ ಸಾ ಆಗಬೇಕು. ಅತ್ಯುತ್ತಮವಾಗಿ ಬದುಕಿ ಜೀವನ ಸ್ವಾರ್ಥಕಪಡಿಸಿಕೊಳ್ಳಬೇಕು. ಧರ್ಮದಿಂದ ಬದುಕಿ ಸಮಾಜಕ್ಕೆ ಮಾದರಿಯಾಗಬೇಕು. ಅದ್ವೀತಿಯ ಸಾಮಾಜಿಕ ಕಾರ್ಯ ಮಾಡಿದ ಗಣ್ಯತಿ ಗಣ್ಯರನ್ನು ಕರೆದು ಗೌರವಿಸುವ ಹಳೆಯ ಪರಂಪರೆಯನ್ನು ಇಂದಿಗೂ ಶ್ರೀಮಠ ಮುಂದುವರಿಸಿರುವುದು ಸ್ವಾಗತಾರ್ಹ.ಅಕ್ಕನ ಬಳಗ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಮಹಿಳೆಯರಿಗೆ ಬಹಳ ಹಿಂದೆಯೇ ಸ್ವಾತಂತ್ರ್ಯ ಮತ್ತು ಸಾಮಾಜಿಕ ಕಾರ್ಯಕ್ಕೆ ಅನುವು ಮಾಡಿಕೊಟ್ಟ ಮಠದ ಕಾರ್ಯವನ್ನು ಬಿಂಬಿಸುತ್ತದೆ ಎಂದರು.

    ಡಾ.ಎಫ್​.ವಿ.ಮಾನ್ವಿ, ವಿವೇಕಾನಂದ ದೇವರು, ಅಕ್ಕನ ಬಳಗದ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.ಡಂಬಳ&ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ, ಡಾ.ಶಿವಯೋಗಿ ದೇವರ, ಮುದುಕಲ್ಲಿನ ಮಹಾಂತಲಿಂಗ ಸ್ವಾಮೀಜಿ, ಕಡೂಲಿಯ ಗುರುಬಸವಲಿಂಗ ಸ್ವಾಮೀಜಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಅನಿಲ ಬೆನಕೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts