More

    ರಾಷ್ಟçಮಟ್ಟದ ಪ್ರಶಸ್ತಿ ರೇಸ್‌ನಲ್ಲಿರಾಜನಕೋಳೂರ ಆಸ್ಪತ್ರೆ

    ಪವನ ದೇಶಪಾಂಡೆ ಕೊಡೇಕಲ್ಸ: ರ್ಕಾರಿ ಆಸ್ಪತ್ರೆ ಎಂದರೆ ಸಾಕು, ಸರಿಯಾಗಿ ಚಿಕಿತ್ಸೆ ಸಿಗಲ್ಲ ಎಂಬ ಮಾತು ಸಾಮಾನ್ಯ. ಆದರೆ ಅದಕ್ಕೆ ತದ್ವಿರುದ್ಧವಾಗಿ ಹುಣಸಗಿ ತಾಲೂಕಿನ ರಾಜನಕೋಳೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಲಸ ಮಾಡುತ್ತಿದೆ ಎಂದರೆ ಅಚ್ಚರಿಯಾಗದೆ ಇರದು.
    ರಾಜನಕೋಳೂರ ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ನಿರ್ವಹಣೆಯೊಂದಿಗೆ ಹೆರಿಗೆ ಜತೆಗೆ ಚಿಕಿತ್ಸಾ ವಿಭಾಗದಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡಿದ್ದರಿಂದಾಗಿ ರಾಷ್ಟç ಮಟ್ಟದ ಲಕ್ಷö್ಯ ಯೋಜನೆಯಡಿ ಪ್ರಶಸ್ತಿ ರೇಸ್‌ನಲ್ಲಿ ಸ್ಥಾನ ಪಡೆದ ರಾಜ್ಯದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಗಿರಿ ಜಿಲ್ಲೆಯ ಕೊಡೇಕಲ್ ವಲಯದ ಈ ಪಿಎಚ್‌ಸಿ ಸರ್ಕಾರದ ಉತ್ತಮ ಯೋಜನೆಗಳಲ್ಲಿ ಒಂದಾಗಿರುವ ಲಕ್ಷö್ಯ ಕರ‍್ಯಕ್ರಮವನ್ನು ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಕಾಳಜಿ ತೋರಿದೆ. ಈಗಾಗಲೇ ಸುರಕ್ಷಿತ ಹೆರಿಗೆ ಹಾಗೂ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆಗೊಳಿಸಿ ಗಮನ ಸೆಳೆದಿದ್ದ ಈ ಆಸ್ಪತ್ರೆಗೆ ರಾಜ್ಯ ಹಾಗೂ ಕೇಂದ್ರದ ನುರಿತ ವೈದ್ಯರ ತಂಡ ಭೇಟಿ ನೀಡಿ ಕೂಲಂಕಷ ಪರಿಶೀಲನೆ ನಡೆಸಿ ಸಲ್ಲಿಸಿದ ವರದಿ ಆಧರಿಸಿ ಲಕ್ಷö್ಯ ಯೋಜನೆಯಡಿ ರಾಷ್ಟç ಮಟ್ಟದ ಪ್ರಶಸ್ತಿಯತ್ತ ದಾಪುಗಾಲು ಇರಿಸಿದೆ.

    ತನ್ನ ವ್ಯಾಪ್ತಿಯಲ್ಲದೆ ಬೇರೆ ಬೇರೆ ಹಳ್ಳಿಗಳಿಂದ ಬರುವ ರೋಗಿಗಳಿಗೂ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿ ಭರವಸೆಯ ಆಸ್ಪತ್ರೆ ಎನಿಸಿದೆ. ಹೆರಿಗೆ ಕೇಸ್‌ಗಳಲ್ಲಿ ಸರ್ಕಾರದ ಉತ್ತಮ ಸೌಲಭ್ಯ ಬಳಸಿಕೊಳ್ಳುವ ಮೂಲಕ ಹೆಚ್ಚಿನ ಸಾವು-ನೋವುಗಳಾಗದಂತೆ ಮಾಡಿದ್ದರಿಂದ ಗ್ರಾಮೀಣ ಬಡ ಜನರ ಅಚ್ಚುಮೆಚ್ಚಿನ ಹಾಸ್ಪಿಟಲ್ ಆಗಿ ಹೊರಹೊಮ್ಮಿದೆ.

    ಅದೇನೇ ಇರಲಿ, ಖಾಸಗಿ ಆಸ್ಪತ್ರೆಗೆ ಹೋಗಿ ಲಕ್ಷಾಂತರ ರೂ. ಖರ್ಚು ಮಾಡಿ ಚಿಕಿತ್ಸೆ ಪಡೆಯಲು ಆಗದ ಬಡ ರೋಗಿಗಳಿಗೆ ಈ ಕೇಂದ್ರ ಆಶಾಕಿರಣವಾಗಿದೆ. ಇದೀಗ ಲಕ್ಷö್ಯ ಯೋಜನೆಯಲ್ಲಿ ಪ್ರಶಸ್ತಿ ಸಮೀಪ ಬಂದಿರುವುದು ರಾಜನಕೊಳೂರ ಗ್ರಾಮಸ್ಥರು ಸೇರಿ ಇಡೀ ಜಿಲ್ಲೆ ಜನರಿಗೆ ಖುಷಿ ವಿಷಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts