More

    ರಾಷ್ಟ್ರ ಪ್ರೇಮ ಮೂಡಿಸಲು ಯಾತ್ರೆ

    ಆಳಂದ (ಕಲಬುರಗಿ): ಅಂದು ಬ್ರಿಟಿಷರನ್ನು ದೇಶ ಬಿಟ್ಟು ಓಡಿಸಲು ಚಲೇಜಾವ್ ಚಳವಳಿ ಆಯೋಜಿಸಲಾಗಿತ್ತು, ಇಂದು ಸಮಾಜದಲ್ಲಿ ಕೋಮುವಾದ ಬಿತ್ತುತ್ತಿರುವ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಲು ಕಾಂಗ್ರೆಸ್​ನಿಂದ ಪಾದಯಾತ್ರೆ ನಡಸಲಾಗುತ್ತಿದೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.

    ಜಿಡಗಾದಲ್ಲಿ ಆಳಂದ-ಮಾದನಹಿಪ್ಪರಗಾ ಬ್ಲಾಕ್ ಕಾಂಗ್ರೆಸ್​ನಿಂದ ಮಂಗಳವಾರ ಆಯೋಜಿಸಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ದೇಶದ ಸಂವಿಧಾನ ಶ್ರೇಷ್ಠವಾದದ್ದಾಗಿದೆ. ಪಾದಯಾತ್ರೆಯಿಂದ ಕಾರ್ಯಕರ್ತರು, ಯುವಕರಲ್ಲಿ ಇಚ್ಛಾಶಕ್ತಿ, ರಾಷ್ಟ್ರ ಪ್ರೇಮ ಮೂಡಲಿದೆ ಎಂದರು.

    ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ತಾಲೂಕಿನಲ್ಲಿ ವಿವಿಧ ಭಾಗಗಳಿಂದ 75 ಕಿಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಖಜೂರಿ-10, ತಡಕಲ್-11, ಸಾವಳೇಶ್ವರ-12, ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ-13 ಹಾಗೂ 14ರಂದು ಲಾಡಚಿಂಚೋಳಿ ಕ್ರಾಸ್​ನಿಂದ ಆಳಂದವರೆಗೆ ಯಾತ್ರೆ ಸಾಗಲಿದೆ. 15ರಂದು ಬೆಳಗ್ಗೆ 12ಕ್ಕೆ ಪಟ್ಟಣದಲ್ಲಿ 75 ಮೀಟರ್ ಉದ್ದದ ಧ್ವಜದೊಂದಿಗೆ ತಿರಂಗಾ ಯಾತ್ರೆ ಜರುಗಲಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.

    ವಿಧಾನ ಪರಿಷತ್ತನ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಹಿಂದುಳಿದ ವರ್ಗಗಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿದರು.

    ಗ್ರಾಪಂ ಅಧ್ಯಕ್ಷ ಸಿದ್ಧರಾಮ ಯಾದವಾಡ, ಕಲಬುರಗಿ, ಯಾದಗಿರಿ, ಬೀದರ್ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್, ಜಿಪಂ ಮಾಜಿ ಸದಸ್ಯರಾದ ಶಿವಾನಂದ ಪಾಟೀಲ್, ಸಿದ್ದರಾಮ ಪ್ಯಾಟಿ, ಮಾದನಹಿಪ್ಪರಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಪಾಟೀಲ್, ಪ್ರಮುಖರಾದ ಮಲ್ಲಿನಾಥ ಪಾಟೀಲ್ ಮದಗುಣಕಿ, ಶರಣಬಸಪ್ಪ ಭೂಸನೂರ, ಜಯಚಿತ್ರಾ ವೇದಶೆಟ್ಟಿ, ಮತ್ತು ಕಣ್ಣಿರಾವ ರಾಠೋಡ್, ಸೂರ್ಯಕಾಂತ ಧಾಬಾ, ಕಲ್ಯಾಣರಾವ ಪಾಟೀಲ್, ಶ್ರೀಮಂತರಾವ ಪಾಟೀಲ್, ಶಶಿಕಾಂತ ಕಾಣಕಿಂಗೆ, ಭೀಮಾಶಂಕರ ಲಾವಣಿ, ಭೀಮರಾವ ಕೊಳ್ಳುರೆ, ದತ್ತು ರೋಡಗೆ ಇತರರಿದ್ದರು.

    ಮಳೆ ಮಧ್ಯೆಯೇ ಹೆಜ್ಜೆ ಹಾಕಿದ ಮುಖಂಡರು
    ಜಿಡಗಾದ ಬಸವೇಶ್ವರ ವೃತ್ತದಿಂದ ಮಧ್ಯಾಹ್ನ 1ಗಂಟೆಗೆ ಪ್ರಾರಂಭವಾದ ಪಾದಯಾತ್ರೆ ಜಮಗಾ ಕ್ರಾಸ್ ಮುಖಾಂತರ ಹಳೇ ಆರ್​ಟಿಒ ಕ್ರಾಸ್, ಪ್ರವಾಸಿ ಮಂದಿರ, ದರ್ಗಾ ವೃತ್ತದೊಂದಿಗೆ ಸಂಜೆ 5.30ಕ್ಕೆ ಆಳಂದನ ಕೇಂದ್ರ ಬಸ್ ನಿಲ್ದಾಣ ತಲುಪಿ ಸಮಾವೇಶಗೊಂಡಿತು. ಜಿಟಿ-ಜಿಟಿ ಮಳೆಯನ್ನೂ ಲೆಕ್ಕಿಸಿದೆ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಜಿಡಗಾ, ಮೋಘಾ (ಕೆ), ಮೋಘಾ (ಬಿ), ಅಲ್ಲಾಪುರ, ಕವಲಗಾ, ಇಕ್ಕಳಕಿ, ನಿಂಗದಳ್ಳಿ, ಕಾಮನಹಳ್ಳಿ ಸೇರಿ ವಿವಿಧ ಹಳ್ಳಿಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts