More

    ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 335 ಪ್ರಕರಣ ಇತ್ಯರ್ಥ

    ಗೌರಿಬಿದನೂರು: ಇಲ್ಲಿನ ಮೂರು ನ್ಯಾಯಾಲಯಗಳಲ್ಲಿ 1500 ಪ್ರಕರಣ ದಾಖಲಾಗಿತ್ತು. ಇದರಲ್ಲಿ ರಾಜಿ ಸಂಧಾನದ ಮೂಲಕ 335 ಪ್ರಕರಣ ಇತ್ಯರ್ಥ ಮಾಡಲಾಗಿದ್ದು ಎಲ್ಲ ಪ್ರಕರಣಗಳ ವಿಚಾರಣೆಯಿಂದ 49 ಲಕ್ಷ ರೂ. ಸಂಗ್ರಹ ಮಾಡಲಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ರೇಣುಕಾ ದೇವಿದಾಸ್ ರಾಯ್ಕರ್ ತಿಳಿಸಿದರು.

    ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲ ಸಂ ನ್ಯಾಯಲಯದ ಸಂಕೀರ್ಣದಲ್ಲಿ ಭಾನುವಾರ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ಮಾತನಾಡಿ, ಕಕ್ಷಿದಾರರ ಅನುಕೂಲಕ್ಕಾಗಿ ಅದಾಲತ್ ಆಯೋಜಿಸಲಾಗಿದೆ. ಕಾನೂನು ಸೇವಾ ಸಮಿತಿಯಿಂದ ಮಾರ್ಗದರ್ಶನ, ನುರಿತ ವಕೀಲರ ಸಹಾಯ ಉಚಿತವಾಗಿ ದೊರೆಯಲಿದೆ. ರಾಜಿ ಸಂಧಾನದಿಂದ ಮಾನವ ಸಂಬಂಧಗಳು ಬೆಸೆಯುತ್ತದೆ. ಸಮಯ ಮತ್ತು ಹಣ ವ್ಯಯ, ಅಲೆದಾಟದಿಂದ ಕಕ್ಷಿದಾರರಿಗೆ ಮುಕ್ತಿ ದೊರೆಯುತ್ತದೆ ಎಂದರು.

    ಅದಾಲತ್‌ನಲ್ಲಿ ಬ್ಯಾಂಕ್, ವ್ಯಾಜ್ಯ ಪೂರ್ವ , ಜನನ ನೋಂದಣಿ , ಚೆಕ್ ಬೌನ್ಸ್ ಪ್ರಕರಣ ಸೇರಿ ಇನ್ನಿತರ ಪ್ರಕರಣಗಳಿಂದ ಸುಮಾರು 49 ಲಕ್ಷ ರೂ. ಸಂಗ್ರಹ ಮಾಡಲಾಯಿತು.ಆರು ವಿವಾಹ ವಿಚ್ಛೇಧನ ಪ್ರಕರಣಗಳನ್ನು ರಾಜಿ ಸಂಧಾನದಿಂದ ಪರಿಹರಿಸಲಾಯಿತು.

    ಪ್ರಧಾನ ಸಿವಿಲ್ ನ್ಯಾಯಾಧೀಶೆ ಅರ್.ಪವಿತ್ರಾ, ಕಾರ್ಯದರ್ಶಿ ಬಿ.ಲಿಂಗಪ್ಪ. ಉಪಾಧ್ಯಕ್ಷ ಧನಂಜಯ್, ರಾಜಿ ಸಂಧಾನಕಾರರಾದ ನರೇಶ್, ರಮೇಶ್ ನಾಯಕ್. ವಕೀಲರಾದ ಅದಿನಾರಾಯಣಗೌಡ, ಟಿ.ಕೆ.ನಾಗರಾಜು, ವಿಜಯರಾವ, ವಿ.ಗೋಪಾಲ್, ಎಚ್.ಎಲ್.ವೆಂಕಟೇಶ್, ವಕೀಲೆ ಕೋಮಲ ಮತ್ತಿರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts