More

    ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟನೆ

    ಬೆಳಗಾವಿ: ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಪಕೃತಿ ವಿಕೋಪಗಳ ನಿರ್ವಹಣಾ ಅಧ್ಯಯನ ಸಂಸ್ಥೆ ಹಾಗೂ ಕೌಶಲ ಅಭಿವೃದ್ಧಿ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ‘ನೈಸರ್ಗಿಕ ವಿಪತ್ತು ನಿರ್ವಹಣೆ, ಸಮಸ್ಯೆಗಳು ಮತ್ತು ಸವಾಲುಗಳು’ ವಿಷಯದ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಲಾಯಿತು.

    ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇಂಜಿನಿಯರ್ ಪ್ರಕಾಶ ಕೋಳಿವಾಡ ಅವರು ಮೋಡ ಬಿತ್ತನೆ ಮತ್ತು ಅದರ ಪ್ರಾಮುಖ್ಯತೆ ಕುರಿತು ವಿವರಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಆರ್. ಪಟಗುಂದಿ ಮಾತನಾಡಿ, ಕಾರ್ಯಾಗಾರವು ಎಲ್ಲ್ಲ ಇಂಜಿನಿಯರ್, ಅಧ್ಯಾಪಕರಿಗೆ, ವೃತ್ತಿಪರ ಇಂಜಿನಿಯರ್‌ಗಳಿಗೆ ಮತ್ತು ವಿಧ್ಯಾರ್ಥಿಗಳಿಗೆ ತುಂಬ ಪ್ರಯೋಜನಕಾರಿಯಾಗಿದೆ ಎಂದರು. ಗೌರವಾನ್ವಿತ ಅತಿಥಿ ಡಾ.ಪುರಂದರ ಬೆಳಕಲ್ ಅವರು, ಪ್ರಸ್ತುತ ಸನ್ನಿವೇಶದಲ್ಲಿ ವಿಪತ್ತುಗಳ ನಿರ್ವಹಣೆಯ ಮಹತ್ವ ವಿವರಿಸಿದರು. ಮಹಾವಿದ್ಯಾಲಯದ ಚೇರ್ಮನ್ ಡಾ. ಎಫ್.ವಿ. ಮಾನ್ವಿ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಮುಖ್ಯಸ್ಥರಾದ ಡಾ. ವಿ.ಎಂ.ದೇವಪ್ಪ ಸ್ವಾಗತಿಸಿದರು. ಶ್ರದ್ಧಾ ಹಿರೇಮಠ, ತೇಜಶ್ವಿನಿ ಪಾಟೀಲ ನಿರೂಪಿಸಿದರು. ಕಾರ್ಯಾಗಾರವು ಸೆ.25ರ ವರೆಗೆ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts