More

    ರಾಷ್ಟ್ರಭಕ್ತಿ ಹೆಚ್ಚಿಸಿದ ಸ್ವಾತಂತ್ರೃ ಅಮೃತೋತ್ಸವ

    ಕಮಲನಗರ: ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ದೇಶದ 135 ಕೋಟಿ ಜನರು ಅತಿ ಉತ್ಸಾಹದಿಂದ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದಾರೆ. ಈ ರಾಷ್ಟ್ರಹಬ್ಬ ಪ್ರತಿಯೊಬ್ಬರಲ್ಲಿ ದೇಶಭಕ್ತಿ ಮೂಡಿಸುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

    ಸಂಗಮ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ ರ್ಯಾಲಿಗೆ ಚಾಲನೆ ನೀಡಿದ ಅವರು, ಯಾವ ದೇಶದ ನಾಗರಿಕರಲ್ಲಿ ರಾಷ್ಟ್ರಭಕ್ತಿ ಇರುತ್ತದೆಯೋ ಆ ದೇಶ ಬಲಿಷ್ಠ ಮತ್ತು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಅಧ್ಯಕ್ಷತೆ ವಹಿಸಿದ್ದರು. ಬಸವಕಲ್ಯಾಣ ಶಾಸಕ ಶರಣು ಸಲಗರ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಶಿವರಾಜ ಗಂದಗೆ, ಡಿ.ಕೆ. ಸಿದ್ರಾಮ, ಗುರುನಾಥ ಕೊಳ್ಳುರ್, ಪ್ರಕಾಶ ಟೊಣ್ಣೆ, ವಸಂತ ವಕೀಲ್, ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ್, ಸಿದ್ದು ಪಾಟೀಲ್, ಸೊಮನಾಥ ಪಾಟೀಲ್, ಲತಾ ಹಾರಕೂಡೆ, ಅನೀಲ ಭೂಸಾರೆ, ಬಸವರಾಜ ಪವಾರ್, ಕಿರಣ ಪಾಟೀಲ್, ಅಶೋಕ ಪಾಟೀಲ್, ಶರಣಪ್ಪ ಪಂಚಾಕ್ಷರಿ, ಮಲ್ಲಿಕಾಜರ್ುನ ಕುಂಬಾರ, ಅರಹಂತ ಸಾವಳೆ, ವಿಜಯಕುಮಾರ ಪಾಟೀಲ್ ಗಾದಗಿ ಇತರರಿದ್ದರು.

    ರ್ಯಾಲಿಯುದ್ದಕ್ಕೂ ಭಾರತ ಮಾತೆಗೆ ಜೈ, ವಂದೇ ಮಾತರಂ ಜಯಘೋಷಗಳು ಮೊಳಗಿದವು. ಸಂಗಮದಿಂದ ಹೊರಟ ಕಾರ್ ರ್ಯಾಲಿ ಭಾಲ್ಕಿ, ಹಲಬಗರ್ಾ, ನೌಬಾದ್, ಬೀದರ್, ಕಮಠಾಣ, ಮನ್ನಾಏಖೇಳ್ಳಿ, ಹುಮನಾಬಾದ್, ರಾಜೇಶ್ವರ ಮಾರ್ಗವಾಗಿ ಬಸವಕಲ್ಯಾಣ ಕೋಟೆವರೆಗೆ ನಡೆಯಿತು.

    ನಮ್ಮ ದೇಶದಲ್ಲಿ ಜಾತಿ, ಮತ, ಪಂಥ, ಧರ್ಮ, ಭಾಷೆಗಳನ್ನು ಮೀರಿ ಸ್ವಾತಂತ್ರೃ ಅಮೃತ ಮಹೋತ್ಸವದಲ್ಲಿ ದೇಶಭಕ್ತಿ, ದೇಶಭಿಮಾನವನ್ನು ಜನ ಮೆರೆಯುತ್ತಿರುವುದು ಸಂತಸ ತಂದಿದೆ. ಎಲ್ಲಕ್ಕಿಂತ ದೇಶವೇ ಮೊದಲು ಎಂಬುದನ್ನು ಪ್ರಜ್ಞಾವಂತ ಜನ ಅಭಿವ್ಯಕ್ತಗೊಳಿಸಿದ್ದಾರೆ.
    | ಭಗವಂತ ಖೂಬಾ, ಕೇಂದ್ರ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts