More

    ರಾಷ್ಟ್ರದ ಹಿತಕ್ಕಾಗಿ ಜನ್ಮತಾಳಿದ ಪಕ್ಷ

    ಹಾವೇರಿ: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ 40ನೇ ಬಿಜೆಪಿ ಸಂಸ್ಥಾಪನಾ ದಿನವನ್ನು ಸೋಮವಾರ ಆಚರಿಸಲಾಯಿತು.

    ಶ್ಯಾಮ ಪ್ರಸಾದ ಮುಖರ್ಜಿ, ಪಂ. ದೀನದಯಾಳ ಉಪಾಧ್ಯಾಯ, ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಡ ರೋಗಿಗಳಿಗೆ ಉಚಿತವಾಗಿ ಔಷಧ ವಿತರಿಸಲಾಯಿತು.

    ಶಾಸಕ ನೆಹರು ಓಲೇಕಾರ ಮಾತನಾಡಿ, ಅತ್ಯಂತ ಕಷ್ಟಕಾಲದಲ್ಲಿ ರಾಷ್ಟ್ರದ ಹಿತಕ್ಕಾಗಿ ಜನ್ಮತಾಳಿದ ಪಕ್ಷ ಇದಾಗಿದ್ದು, ಅಂದಿನ ಕಾಲದಲ್ಲಿ ಕಾರ್ಯಕರ್ತರು ಪಕ್ಷಕ್ಕೆ ಸೇರಲು ಭಯಪಡುವಂತಹ ವಾತಾವರಣವಿತ್ತು. ಸಾಮಾಜಿಕ ಸಮಸ್ಯೆಗಳನ್ನು ಮೂಲವಾಗಿ ಇಟ್ಟುಕೊಂಡು ಅದಕ್ಕೆ ಪರಿಹಾರ ಹುಡುಕುತ್ತ ರಾಷ್ಟ್ರ ಭಕ್ತಿಯ ಬೀಜವನ್ನು ಜನರಲ್ಲಿ ಬಿತ್ತುತ್ತ ಕಾಲ ಕ್ರಮೇಣ ಬೃಹದಾಕಾರವಾಗಿ ಬೆಳೆದು ನಿಂತ ಪಕ್ಷದಲ್ಲಿ ನಾನು ಶಾಸಕನಾಗಿರುವುದು ಹೆಮ್ಮೆಯ ಸಂಗತಿ ಎಂದರು.

    ಅನೇಕ ಹಿರಿಯರ ಶ್ರಮದಿಂದ ಪಕ್ಷ ಜನಸಾಮಾನ್ಯರ ಮನಸ್ಸಿನಲ್ಲಿ ಮನೆ ಮಾಡಿದೆ. ಹೀಗಾಗಿಯೇ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಅಧಿಕಾರ ಮಾಡಲು ಜನ ಅವಕಾಶ ಮಾಡಿಕೊಟ್ಟಿದ್ದಾರೆ. ದಿ. ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಅಂತಹ ಅನೇಕ ನಾಯಕರ ಶ್ರಮದ ಫಲವಾಗಿ ವಿಶ್ವದಲ್ಲಿಯೇ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದರು.

    ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿದರು. ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ ಮುಳ್ಳೂರ, ಶಶಿಧರ ಹೊಸಳ್ಳಿ, ಮಂಡಲ ಅಧ್ಯಕ್ಷರಾದ ಗಿರೀಶ ತುಪ್ಪದ, ಬಸವರಾಜ ಕಳಸೂರ, ಪ್ರಮುಖರಾದ ರಮೇಶ ಪಾಲನಕರ, ಪ್ರಭು ಹಿಟ್ನಳ್ಳಿ, ಬಸವರಾಜ ಮಾಸೂರ, ಡಾ. ಸಂತೋಷ ಆಲದಕಟ್ಟಿ, ಪ್ರವೀಣ ಸವಣೂರ, ಲಲಿತಾ ಗುಂಡೆನಹಳ್ಳಿ, ಮಂಜು ಮಡಿವಾಳರ, ನಂಜುಂಡೇಶ ಕಳ್ಳೇರ, ಜಗದೀಶ ಮಲಗೋಡ, ಶಿವರಾಜ ಮತ್ತಿಹಳ್ಳಿ, ಶಿವಯೋಗಿ ಹುಲಿಕಂತಿಮಠ, ನಾಗರಾಜ ಹಿರೇಮಠ, ಬಾಬುಸಾಬ ಮೊಮಿನಗಾರ, ಅಡವಯ್ಯ ಯಲುಗಿಮಠ, ವಿನಾಯಕ ಬಿಷ್ಟಕ್ಕನವರ ಇತರರಿದ್ದರು.

    ಪಡಿತರ ಸಾಮಗ್ರಿ ವಿತರಣೆ

    ಹಾನಗಲ್ಲ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸಂಸ್ಥಾಪನಾ ದಿನ ಆಚರಿಸಲಾಯಿತು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ರಾಜು ಗೌಳಿ ಅಧ್ಯಕ್ಷತೆಯಲ್ಲಿ ಗೌರವ ಸಮರ್ಪಣೆ ಮಾಡಲಾಯಿತು. ನಂತರ ಸಂಸ್ಥಾಪನಾ ದಿನದ ಅಂಗವಾಗಿ ಪಟ್ಟಣದ 11 ಬಡ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಪಡಿತರ ಸಾಮಗ್ರಿ ವಿತರಿಸಲಾಯಿತು. ಮುಖಂಡರಾದ ಕಲ್ಯಾಣಕುಮಾರ ಶೆಟ್ಟರ, ರವಿರಾಜ ಕಲಾಲ, ಸಂತೋಷ ಟೀಕೋಜಿ, ರಮೇಶ ಚಿನ್ನಮುಳುಗುಂದ, ಮಂಜುನಾಥ ಬಸವಂತಕರ, ಪ್ರಶಾಂತ ಗೊಂದಿ, ಸಂತೋಷ ಓಡಿಕೊಪ್ಪ, ಮಲ್ಲಿಕಾರ್ಜುನ ಬಾಗಲಕೋಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts