More

    ರಾವಸಾಹೇಬ ಪಾಟೀಲ ಕಾರ್ಯ ಮಾದರಿ – ಶಾಸಕ ಅಭಯ ಪಾಟೀಲ

    ಬೋರಗಾಂವ: ಜೈನ ಸಮುದಾಯದ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ರಾವಸಾಹೇಬ ಪಾಟೀಲ ಮಾಡುತ್ತಿರುವ ಕಾರ್ಯ ಮಾದರಿ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ಪಟ್ಟಣದ ಅರಿಹಂತ ಸಭಾಗೃಹದಲ್ಲಿ ದಕ್ಷಿಣ ಭಾರತ ಜೈನ ಸಭೆಯ 100ನೇ ಅಧಿವೇಶನ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಮೇ ತಿಂಗಳಲ್ಲಿ ದ.ಭಾ.ಜೈನ ಸಭೆಯ 100 ನೇ ಅಧಿವೇಶನ ನಡೆಯಲಿದೆ. ಅದಕ್ಕೆ ಸಭೆ ವತಿಯಿಂದ ತಯಾರಿ ನಡೆಸಲಾಗುತ್ತಿದೆ.

    ಮಹಾವೀರ ವಿದ್ಯಾಸನ ಕೇಂದ್ರಕ್ಕೆ ರಾವಸಾಹೇಬ ಪಾಟೀಲ ಅವರು 25 ಲಕ್ಷ ರೂ. ದೇಣಿಗೆ ನೀಡಿ ಸಾಮಾಜಿಕ ಕಳಕಳಿ ತೋರಿಸಿದ್ದಾರೆ. ಅವರ ಆದರ್ಶ ನಮ್ಮೆಲ್ಲರಿಗೆ ಮಾದರಿ ಎಂದು ಹೇಳಿದರು. ದ.ಭಾ.ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ಮಾತನಾಡಿ, ಅಧಿವೇಶನ ಐತಿಹಾಸಿಕವಾಗಿಸಲು ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕೆ ಸಭೆಯ ಎಲ್ಲ ಪದಾಧಿಕಾರಿ, ಯುವಕರು, ಶ್ರಾವಕರು ಶ್ರಮಿಸುತ್ತಿದ್ದಾರೆ.

    ಭಗವಾನ ಮಹಾವೀರ ಅಧ್ಯಯನ ಕೇಂದ್ರಕ್ಕೆ 25 ಲಕ್ಷ ರೂ. ದೇಣಿಗೆ ನೀಡಿದ್ದು, ಎಲ್ಲರು ಕೂಡ ದೇಣಿಗೆ ನೀಡಿ ಸಹಕರಿಸಬೇಕೆಂದು ಹೇಳಿದರು. ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಸಚಿವ ವೀರಕುಮಾರ ಪಾಟೀಲ, ಕೆ.ಪಿ.ಮಗ್ಗೆಣ್ಣವರ, ಸಭೆಯ ಚೇರ್ಮನ್ಆರ್.ಜಿ.ಪಾಟೀಲ, ದತ್ತಾ ಡೋರ್ಲೆ, ಕೇಂದ್ರೀಯ ಉಪಾಧ್ಯಕ್ಷ ಬಾಲಚಂದ್ರ ಪಾಟೀಲ, ಸಾವಕರ ಮಾದನಾಯಿಕ್, ಡಾ.ಅಜಿತ ಪಾಟೀಲ, ರಾಹುಲ ಖಂಜಿರೆ, ಸಂಜಯ ಶೆಟ್ಟಿ, ಕೆ.ಜೆ.ಎ.ನಿರ್ದೇಶಕ ಉತ್ತಮ ಪಾಟೀಲ, ಉದ್ಯಮಿ ಅಭಿನಂದನ ಪಾಟೀಲ, ಪಾ.ಪಾ.ಪಾಟೀಲ, ಅಭಯಕುಮಾರ ಕರೋಲೆ, ಎನ್.ಡಿ,ಬಿರನಾಳೆ ಇತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts