More

    ರಾಯಣ್ಣನ ಶೌರ್ಯ ಯುವಕರಿಗೆ ಸ್ಫೂರ್ತಿ

    ರಾಮದುರ್ಗ: ಅಪ್ಪಟ ದೇಶಭಕ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದೇಶಪ್ರೇಮ, ಶೌರ್ಯ, ಸಾಹಸಮಯ ಬದುಕು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಅವರ ಚರಿತ್ರೆ ಅರಿತುಕೊಂಡಲ್ಲಿ ಪ್ರತಿಯೊಬ್ಬರೂ ದೈರ್ಯಶಾಲಿಯಾಗಿ ಬದುಕಲು ಸಾಧ್ಯವಿದೆ ಎಂದು ರಾಮದುರ್ಗದ ಸಮಾಜ ಸೇವಕ ಹಾಗೂ ಉದ್ಯಮಿ ಚಿಕ್ಕರೇವಣ್ಣ ಹೇಳಿದರು.

    ತಾಲೂಕಿನ ಎಂ. ಕಲ್ಲಾಪುರ ಗ್ರಾಮಸ್ಥರ ಕೋರಿಕೆಯ ಮೇರೆಗೆ ಸ್ಥಾಪನೆ ಮಾಡಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನೂತನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಬುಧವಾರ ಪಾಲ್ಗೊಂಡು ಅವರು ಮಾತನಾಡಿದರು.

    ದೇಶಕ್ಕೆ ಸ್ವಾತಂತ್ರ$್ಯ ತಂದುಕೊಡಲು ಹಾಗೂ ಕಿತ್ತೂರು ಸಂಸ್ಥಾನದ ರಕ್ಷಣೆಗೆ ಜೀವದ ಹಂಗು ತೊರೆದು, ಚನ್ನಮ್ಮಾಜಿಯ ಆಸ್ಥಾನದಲ್ಲಿ ಬಲಗೈ ಬಂಟನಾಗಿ ಸೇವೆ ಸಲ್ಲಿಸಿದ್ದು, ರಾಯಣ್ಣನ ಅಪ್ಪಟ ಪ್ರಾಮಾಣಿಕ ನಡೆನುಡಿಯೂ ಸಹ ಸರ್ವರೂ ಮೆಚ್ಚಿಕೊಳ್ಳುವಂತಾಗಿದೆ ಎಂದರು.

    ಸಮಾರಂಭದ ಸಾನ್ನಿಧ್ಯ ವಹಿಸಿ ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಿಲ್ಲಾ ತೊರಗಲ್​ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಕಟಕೋಳದ ತ್ರಿವಿಧ ದಾಸೋಹಿ ಸಿದ್ರಾಯಜ್ಜನವರ ಮಠದ ಅಭಿನವ ಸಿದ್ದರಾಯಜ್ಜ ಸೇರಿದಂತೆ ವಿವಿಧ ಹರಗುರು ಚರಮೂರ್ತಿಗಳು ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಕುರುಬ ಸಮಾಜದ ಮುಖಂಡ ಅಶೋಕ ಮೆಟಗುಡ್ಡ, ಸಮಾಜದ ತಾಲೂಕಾಧ್ಯಕ್ಷ ವಿಠ್ಠಲ ಜಟಗನ್ನವರ, ಬಸವರಾಜ ಸೋಮಗೊಂಡ, ಲಕ್ಕಪ್ಪ ಜಟ್ಟೆನ್ನವರ, ಎಂ. ಕಲ್ಲಾಪುರ ಗ್ರಾಮದ ಮುಖಂಡರು ಹಾಗೂ ಚಿಕ್ಕರೇವಣ್ಣ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts