More

    ರಾಮದುರ್ಗ ಪೊಲೀಸರಿಂದ ಭರ್ಜರಿ ಬೇಟೆ

    ರಾಮದುರ್ಗ: ಕಟಕೋಳ ಹಾಗೂ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಎರಡು ಪ್ರತ್ಯೇಕ ದರೋಡೆ ಪ್ರಕರಣ ಬೆನ್ನಟ್ಟಿದ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 2022ರ ಅಕ್ಟೋಬರ್‌ನಲ್ಲಿ ರಾಮದುರ್ಗ ತಾಲೂಕಿನ ಬನ್ನೂರ ತಾಂಡೆಯ ಚಂದ್ರು ರಜಪೂತ್ ಅವರ ಮನೆ ಬಾಗಿಲು ಮುರಿದು, ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಿ ಸುಮಾರು 23,69,900 ರೂ.ನಗದು ಹಾಗೂ 6.30 ಲಕ್ಷ ರೂ. ಮೌಲ್ಯದ 158 ಗ್ರಾಂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು. ರಾಮದುರ್ಗ ಪಟ್ಟಣದ ಮುಖೇಶಕುಮಾರ ಪ್ರಭುಲಾಲ್‌ಜಿ ಸ್ವಾಲ್ಕಾ ಎಂಬುವರನ್ನು ಕಣ್ಣಿಗೆ ಖಾರದಪುಡಿ ಎರಚಿ ಅಪಹರಿಸಿಕೊಂಡು ಹೋಗಿ ಬಂಗಾರದ ಸರ, ಖಡಗ, 1.5 ಲಕ್ಷ ರೂ. ನಗದು ಹಾಗೂ ಮೊಬೈಲ್ ದೋಚಿ ಹಿಗ್ಗಾಮುಗ್ಗಾ ಥಳಿಸಿ ಬಿಟ್ಟು ಹೋಗಿದ್ದರು.

    ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿಗಳಾದ ಸುನ್ನಾಳ ಮೂಲದ ಹಾಲಿ ರಾಮದುರ್ಗ ಪಟ್ಟಣದ ಭಾಗ್ಯನಗರ ನಿವಾಸಿ ಪೀರ್ದೋಸ್ ನಜೀರ್ ಉಸ್ತಾದ್, ವಿಜಯಪುರ ಜಿಲ್ಲೆ ಅರಕೇರಿ ಸಿದ್ದಾಪೂರದ ಮೂಲದ ಹಾಲಿ ರಾಮದುರ್ಗದ ಶ್ರೀಪತಿನಗರ ನಿವಾಸಿ ಖಾಸೀಮಸಾಬ ಬಾಬುಸಾಬ ಶೇಖ್, ಜಮಖಂಡಿಯ ಜಮೀರ್ ಹಬೀಬ್‌ರೆಹಮಾನ್ ಮುನಸಿ, ಜಮಖಂಡಿ ತಾಲೂಕಿನ ಕಡ್ಲಿಮಟ್ಟಿ-ಜೋಗಿಮಡ್ಡಿಯ ಖಾದರ್ ಲತೀಫಸಾಬ ಕಡ್ಲಿಮಟ್ಟಿ, ಜಮಖಂಡಿ ನಗರದ ಮೋಮಿನ್ ಗಲ್ಲಿಯ ಮುಕ್ತಾರ್ ಸಾಧಿಕ್ ಶೇಖ್, ಬೀಳಗಿ ತಾಲೂಕಿನ ಕಲಾದಗಿಯ ಮೊಹ್ಮದಕೈಬ್ ರಾಜೇಸಾಬ ಕೊಡಕಿ, ಮಹ್ಮಹುಸೇನ್ ಮೈಬೂಸಾಬ ಶೇಖ್, ರಾಮದುರ್ಗ ತಾಲೂಕಿನ ಓಬಳಾಪುರದ ವಿಜಯ ಕೃಷ್ಣಪ್ಪ ಲಮಾಣಿ ಸೇರಿ 8 ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರಿಂದ 188 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಕೆ ಮಾಡಿದ 4 ಕಾರು, ಎರಡು ದ್ವಿಚಕ್ರ ವಾಹನ, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಎಸ್ಪಿ ಸಂಜೀವ ಪಾಟೀಲ, ಡಿವೈಎಸ್‌ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಸಿಪಿಐ ಐ.ಆರ್.ಪಟ್ಟಣಶೆಟ್ಟಿ, ಪಿಎಸ್‌ಐಗಳಾದ ಶಿವಾನಂದ ಕಾರಜೋಳ, ಸಿದ್ರಾಮಪ್ಪ ಉನ್ನದ, ಸಿಬ್ಬಂದಿ ಎಲ್.ಟಿ ಪವಾರ, ವೈ.ಜಿ.ಕೋಟಿ, ಡಿ.ಎಚ್.ನದಾಫ್, ಎಂ.ಎಂ.ಪಡಸಲಗಿ ಕಾರ್ಯಾಚರಣೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts