More

    ರಾಮದುರ್ಗ ಕ್ಷೇತ್ರದ ಸಕಲ ಅಭಿವೃದ್ಧಿಯೇ ಧ್ಯೇಯ

    ರಾಮದುರ್ಗ: ಸಾಯಿನಗರ ಆಂಜನೇಯ ನಗರ ನಿವಾಸಿಗಳ ಬೇಡಿಕೆಗಳಲ್ಲಿ ಶೇ.70ನ್ನು ಈಡೇರಿಸಿ ಅಭಿವೃದ್ಧಿಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಗತಿಗೆ ಶ್ರಮಿಸುವುದಾಗಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

    ಪಟ್ಟಣದ ಆಂಜನೇಯ ನಗರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಹಲಗತ್ತಿ ಬಾಯ್‌ಪಾಸ್ ರಸ್ತೆಯಿಂದ ರಾಮದೇವ ಅವರ ಮನೆಯ ಮುಂದಿನ ರಸ್ತೆ ಸುಧಾರಣೆ, ಗಾಂಧಿನಗರ ವೆಂಕಟೇಶ ಟಾಕೀಜ್ ಹಿಂಬದಿ ರಸ್ತೆ ಸುಧಾರಣೆ ಹಾಗೂ 26 ಲಕ್ಷ ರೂ. ವೆಚ್ಚದಲ್ಲಿ ನಾರಾಯಣ ಪೇಠೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ವಿವಿಧ ಯೋಜನೆ ಹಾಗೂ ಇಲಾಖೆಯಡಿ ಪಟ್ಟಣದಲ್ಲಿ ರಸ್ತೆ, ಚರಂಡಿ ನಿರ್ಮಾಣ ಸೇರಿ ಮೂಲ ಸೌಲಭ್ಯ ಕಲ್ಪಿಸಲು ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುವ ಮೂಲಕ ವಾರ್ಡ್ ನಿವಾಸಿಗಳ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಕೆಲವು ವಾರ್ಡ್‌ಗಳು ಅಭಿವೃದ್ಧಿಯನ್ನೇ ಕಂಡಿಲ್ಲ. ಶಾಸಕನಾದ ಬಳಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.
    ಪುರಸಭೆ ಅಧ್ಯಕ್ಷ ರಘುನಾಥ ರೇಣಕೆ, ಉಪಾಧ್ಯಕ್ಷ ನಾಗರಾಜ ಕಟ್ಟಿಮನಿ, ಸದಸ್ಯರಾದ ಶಾಸನೂರ ಯಾದವಾಡ, ಮಾಜಿ ಅಧ್ಯಕ್ಷ ಶಂಕ್ರಪ್ಪ ಬೆನ್ನೂರ, ಮಾಜಿ ಉಪಾಧ್ಯಕ್ಷ ರಾಘವೇಂದ್ರ ದೊಡಮನಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ದಳವಾಯಿ, ನೀರಾವರಿ ಇಲಾಖೆ ಇಂಜಿನಿಯರ್ ಶ್ರೀನಿವಾಸ, ಗುತ್ತಿಗೆದಾರರಾದ ಮಲ್ಲಿಕಾರ್ಜುನ ದೂಪದ, ಉಮೇಶಗೌಡ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts