More

    ರಾಣೆಬೆನ್ನೂರಲ್ಲಿ ಗರ್ಭಿಣಿ ಧರಣಿ

    ರಾಣೆಬೆನ್ನೂರ: ಕರೊನಾ ಸೋಂಕಿನ ಬಗ್ಗೆ ವೈದ್ಯರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ತಾಲೂಕಿನ ಹಿಲದಹಳ್ಳಿಯ ಗರ್ಭಿಣಿ ಹಾಗೂ ಆಕೆಯ ಕುಟುಂಬಸ್ಥರು ನಗರದ ತಾಲೂಕು ಆರೋಗ್ಯಾಧಿಕಾರಿ ಕಾರ್ಯಾಲಯದ ಎದುರು ಸೋಮವಾರ ಧರಣಿ ನಡೆಸಿದರು.

    ಗರ್ಭಿಣಿ ರೂಪಾ ಎಳವಟ್ಟಿ ಮಾತನಾಡಿ, ‘ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನದ ಹಿಂದೆ ಕರೊನಾ ಟೆಸ್ಟ್ ಮಾಡಿಸಿಕೊಂಡಿದ್ದೆ. ವರದಿ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ಆರೋಗ್ಯ ಇಲಾಖೆಯವರು ಫೋನ್ ಮಾಡಿ ತಿಳಿಸಿದ್ದರು. ಆದರೆ, ಮರುದಿನ ಖಾಸಗಿ ಆಸ್ಪತ್ರೆಯಲ್ಲಿ ಕರೊನಾ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿದೆ. ಇದರಲ್ಲಿ ಯಾರನ್ನು ನಂಬಬೇಕು ಎಂದು ಪ್ರಶ್ನಿಸಿದರು. ಅಲ್ಲದೆ, ನಮ್ಮೊಂದಿಗೆ ಗ್ರಾಮದಲ್ಲಿ ಯಾರೂ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷಕುಮಾರ ಪ್ರತಿಕ್ರಿಯಿಸಿ, ಕರೊನಾ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದ್ದು, ಮರುದಿನ ವೈರಸ್ ಕಡಿಮೆಯಾಗಿದ್ದರೆ ನೆಗೆಟಿವ್ ಬರುತ್ತದೆ. ಇದರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ತಪ್ಪಿಲ್ಲ ಎಂದು ಮನವರಿಕೆ ಮಾಡಿದರು. ನಂತರ ಧರಣಿ ಕೈ ಬಿಡಲಾಯಿತು.

    ಕುಟುಂಬಸ್ಥರಾದ ದುರಗಪ್ಪ ಬಾಲಬಸೂರ, ನಾಗರಾಜ ಸಿದ್ದಪ್ಪನವರ, ಅಜಯ ತಾವರಗೊಂದಿ, ವಿರೂಪಾಕ್ಷ ಹೊನ್ನಮ್ಮನವರ, ನಿಂಗಪ್ಪ ತಾವರಗೊಂದಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts