More

    ರಾಣಿ ಚನ್ನಮ್ಮ ವಸತಿ ಶಾಲೆ ಸುಪರ್ದಿಗೆ

    ಬ್ಯಾಡಗಿ: ಕರೊನಾ ವೈರಸ್ ಶಂಕಿತರು ಹಾಗೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ತಾಲೂಕಿನಲ್ಲಿ ಹೋಮ್ ಕ್ವಾರಂಟೈನ್​ನಲ್ಲಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಲು ತಾಲೂಕು ಆಡಳಿತ ಮುಂದಾಗಿವೆ.

    ಲಾಕ್​ಡೌನ್ ಬಳಿಕ ಹಾಗೂ ಅದಕ್ಕೂ ಮುನ್ನ ವಿದೇಶ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ತಾಲೂಕಿನ ಬಹುತೇಕರು ಹೋಮ್ ಕ್ವಾರಂಟೈನ್​ನಲ್ಲಿದ್ದು, ಕೆಲವರು ಎಲ್ಲೆಂದರಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಕೆಲವರು ಊರು ಬಿಟ್ಟು ರಾತ್ರೋರಾತ್ರಿ ಬೇರೆ ಊರಿಗೆ ಸೇರಿಕೊಳ್ಳುವ ಮೂಲಕ ಆರೋಗ್ಯ ಇಲಾಖೆಗೆ ತಲೆನೋವಾಗಿದ್ದರು. ಈ ಹಿನ್ನೆಲೆಯಲ್ಲಿ 100 ಹಾಸಿಗೆ ಸೌಲಭ್ಯ ಹೊಂದಿರುವ ಸ್ಥಳೀಯ ರಾಣಿ ಚನ್ನಮ್ಮ ವಸತಿ ಶಾಲೆಯನ್ನು ತಾಲೂಕಾಡಳಿತ ತನ್ನ ಸುಪರ್ದಿಗೆ ಪಡೆದಿದೆ.

    ವಸತಿ ಶಾಲೆಯಲ್ಲಿ ಐಶ್ಯೂಲೇಷನ್ ಹಾಗೂ ಹೋಮ್ ಕ್ವಾರಂಟೈನ್​ನಲ್ಲಿರುವವರನ್ನು ಇಡಲು ವ್ಯವಸ್ಥೆ ಮಾಡಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲು ತಾಲೂಕು ವೈದ್ಯಕೀಯ ಸಿಬ್ಬಂದಿ ತಂಡ ಶನಿವಾರದಿಂದ ಕಾರ್ಯೋನ್ಮುಖವಾಗಿದೆ. ತಾಲೂಕಿನಲ್ಲಿ ಸುಮಾರು 13 ಜನ ವಿದೇಶದಿಂದ ಆಗಮಿಸಿದವರು ಹಾಗೂ 100ಕ್ಕೂ ಹೆಚ್ಚು ಹೊರ ರಾಜ್ಯ, 1200 ಜನ ಹೊರಜಿಲ್ಲೆಗಳಿಂದ ಸ್ವಗ್ರಾಮಕ್ಕೆ ಮರಳಿದ್ದಾರೆ.

    ಆಶಾ ಕಾರ್ಯಕರ್ತೆಯರ ಗೋಳು: ತಾಲೂಕಿನ 133 ಜನ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿ ಹೊರಗಿನಿಂದ ಬಂದವರ ಮೊದಲ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಬೇಕಿದೆ. ಆದರೆ, ಇಂಥವರ ಬಳಿ ತೆರಳಲು ಇವರಿಗೆ ಹ್ಯಾಂಡ್​ಗ್ಲೌಸ್ ಹಾಗೂ ಮಾಸ್ಕ್ ಸೇರಿ ಇತರೆ ಆರೋಗ್ಯ ಕಾಳಜಿಯ ಯಾವ ಸಾಮಗ್ರಿಗಳನ್ನು ಈವರೆಗೂ ಆರೋಗ್ಯ ಇಲಾಖೆ ನೀಡಿಲ್ಲ.

    ಮಾಧ್ಯಮಗಳು, ಸರ್ಕಾರ, ಪೊಲೀಸರು, ಆರೋಗ್ಯ ಇಲಾಖೆ ಪ್ರತಿಯೊಬ್ಬರೂ ಮುಖಕ್ಕೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಆರೋಗ್ಯ ಜಾಗೃತೆ ವಹಿಸುವ ಮೂಲಕ ಕರೊನಾ ವೈರಸ್ ತಡೆಗಟ್ಟಲು ಕೆ ೖಜೋಡಿಸುವಂತೆ ಮನವಿ ಮಾಡಲಾಗುತ್ತಿದೆ. ಆದರೆ, ಬಹತೇಕ ಸಾರ್ವಜನಿಕರು ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ಓಡಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ.

    | ಡಾ.ಬಿ.ಆರ್. ಲಮಾಣಿ, ತಾಲೂಕು ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts