More

    ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆ

    ಹಳಿಯಾಳ: ಸರ್ಕಾರದ ಸೂಚನೆಯಂತೆ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರರ ಸಭೆ ಕರೆಯಬೇಕು, ಕಬ್ಬಿನ ಬಾಕಿ ನೀಡಬೇಕು ಹಾಗೂ ಪ್ರಸಕ್ತ ಹಂಗಾಮಿಗೆ ಕಬ್ಬಿಗೆ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ಪಟ್ಟಣದಲ್ಲಿ ಶುಕ್ರವಾರ ಮುಷ್ಕರ ನಡೆಸಿದರು.

    ಇಐಡಿ ಕಾರ್ಖಾನೆ ಸಂರ್ಪಸುವ ರಸ್ತೆ ಹಾಗೂ ಖಾನಾಪುರ- ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸಬೇಕು ಎಂದು ಸರ್ಕಾರಕ್ಕೆ ಗಡುವು ನೀಡಿದರು.

    ಕಬ್ಬು ಬೆಳೆಗಾರರ ಬೇಡಿಕೆಗಳು: 2016-17ನೇ ಸಾಲಿನ ಹಂಗಾಮಿನಲ್ಲಿ ನುರಿಸಿದ ಕಬ್ಬಿಗೆ ಇಐಡಿ ಪ್ಯಾರಿ ಘೊಷಿಸಿದ ಹೆಚ್ಚುವರಿ ಬೆಂಬಲ ಬೆಲೆ 305 ರೂ. ನೀಡಬೇಕು. 2019-20ನೇ ಸಾಲಿನ ಕಬ್ಬಿಗೆ ಇಐಡಿ ಕಾರ್ಖಾನೆ 2,338 ರೂ., ನೀಡಿದೆ. ಸತೀಶ ಶುಗರ್ಸ್ ಹುದಲಿ ಅವರು 2,725 ರೂ.ನೀಡಿದ್ದಾರೆ. ಹೀಗಾಗಿ ವ್ಯತ್ಯಾಸದ 387 ರೂ. ಪಾವತಿಸಬೇಕು. ಕಬ್ಬು ಕಟಾವು ಹಾಗೂ ಸಾಗಾಟದ ವೆಚ್ಚದಲ್ಲಿ ಸ್ಥಳೀಯ ಕಬ್ಬು ಬೆಳೆಗಾರರಿಗೆ ವ್ಯತ್ಯಾಸ ಹಣ ನೀಡಬೇಕು.

    ಬೇಡಿಕೆ ಸಲ್ಲಿಸಲಾಗಿದೆ: ಪ್ರತಿಭಟನಾಕಾರರ ಅಹವಾಲು ಆಲಿಸಿದ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಮಾತನಾಡಿ, ಈಗಾಗಲೇ 1,300 ರೈತರು ಕಬ್ಬು ಕಟಾವು ಮಾಡಿಸಲು ಕಾರ್ಖಾನೆಗೆ ಒಪ್ಪಿಗೆ ಪತ್ರ ನೀಡಿದ್ದು, ಕಟಾವು ಮಾಡಲಾಗುತ್ತಿದೆ ಎಂದು ಕಾರ್ಖಾನೆಯವರು ಲಿಖಿತ ಮಾಹಿತಿ ನೀಡಿದ್ದಾರೆ. ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ರ್ಚಚಿಸಿದ್ದು, ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆೆ ಎಂದರು.

    ತಾಲೂಕು ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಕುಮಾರ ಬೊಬಾಟೆ ಮಾತನಾಡಿದರು. ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಅಶೋಕ ಮೇಟಿ, ಗಿರೀಶ ಠೋಸುರ, ಸುರೇಶ ಶಿವಣ್ಣನವರ, ಅನ್ವರ ಪುಂಗಿ, ಶಿವಪುತ್ರಪ್ಪ ನುಚ್ಛಂಬ್ಲಿ, ಪುಂಡ್ಲಿಂಕ್ ಗೋಡೆಮನಿ, ಗಣಪತಿ ಕರಂಜೇಕರ, ಶಿವಾಜಿ ನರಸಾನಿ, ಅಳ್ನಾವರ, ಧಾರವಾಡ ಗ್ರಾಮೀಣ ಭಾಗದ ರೈತ ಪ್ರಮುಖರು ಇದ್ದರು.

    ಸರ್ಕಾರ ರೈತರೊಂದಿಗಿದೆ
    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಸುನೀಲ ಹೆಗಡೆ, ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಪರವಾಗಿದೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ತಾಲೂಕಿನ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದರು. ದಾಂಡೇಲಿಗೆ ತೆರಳುತ್ತಿದ್ದ ವಿ.ಪ. ಸದಸ್ಯ ಎಸ್.ಎಲ್. ಘೊಟ್ನೇಕರ ಸಹ ಪ್ರತಿಭಟನಾ ನಿರತರನ್ನು ಭೇಟಿಯಾಗಿ ಕಬ್ಬು ಬೆಳೆಗಾರರ ಬೇಡಿಕೆ ಕುರಿತು ಶಾಸಕ ಆರ್.ವಿ. ದೇಶಪಾಂಡೆ ಮುಂದಾಳತ್ವದಲ್ಲಿ ಸಭೆ ನಡೆಸುವ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts