More

    ರಾಜ್ಯಮಟ್ಟದ 7ನೇ ಮಹಿಳಾ ಸಮ್ಮೇಳನ 6ಕ್ಕೆ

    ಚಿತ್ರದುರ್ಗ: ದಾವಣಗೆರೆ ಪಿಬಿ ರಸ್ತೆಯ ಬೀರಲಿಂಗೇಶ್ವರ ಸ್ವಾಮಿ ದೇಗುಲ ಆವರಣದಲ್ಲಿ 2024ರ ಜ. 6, 7ರಂದು ರಾಜ್ಯಮಟ್ಟದ 7ನೇ ಮಹಿಳಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಶಾಂತಾ ತಿಳಿಸಿದರು.

    ಬುಧವಾರ ಸಮ್ಮೇಳನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, 6ರಂದು ಬೆಳಗ್ಗೆ 10ಕ್ಕೆ ಜಯದೇವ ವೃತ್ತದಿಂದ ನಡೆಯುವ ಮೆರವಣಿಗೆಗೆ ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಷನ್‌ನ ಮಾಜಿ ಅಧ್ಯಕ್ಷ ಎಂ.ಆರ್.ಹಿರೇಮಠ ಚಾಲನೆ ನೀಡಲಿದ್ದಾರೆ. 10.45ಕ್ಕೆ ಸೂಕ್ತಿ, ಛಾಯಾಚಿತ್ರ ಪ್ರದರ್ಶನವನ್ನು ನಿವೃತ್ತ ಪ್ರಾಚಾರ್ಯ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ ಎಂದರು.

    ಲೇಖಕಿ ರೂಪಾ ಹಾಸನ ಬಹಿರಂಗ ಅಧಿವೇಶನ ಉದ್ಘಾಟಿಸುವರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ಅಧ್ಯಕ್ಷತೆ ವಹಿಸುವರು. ಅಧ್ಯಕ್ಷೆ ಬಿ.ಆರ್.ಅಪರ್ಣಾ, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಛಬ್ಬಿ ಮೊಹಂತಿ, ಉಪಾಧ್ಯಕ್ಷೆ ಡಾ.ಸುಧಾ ಕಾಮತ್, ಸ್ವಾಗತ ಸಮಿತಿ ಅಧ್ಯಕ್ಷೆ ಡಾ.ಪಿ.ಎಂ.ಅನುರಾಧಾ, ಎಸ್‌ಯುಸಿಐ(ಸಿ), ರಾಜ್ಯ ಕಾರ್ಯದರ್ಶಿ ಕೆ.ಉಮಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

    ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಅಂದು ಸಂಜೆ 4ಕ್ಕೆ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಬರಹಗಾರ್ತಿ ಬಿ.ಟಿ.ಜಾಹ್ನವಿ ಉದ್ಘಾಟಿಸುವರು. ಬಂಡಾಯ ಸಾಹಿತಿ ಕಲೀಮ್ ಭಾಷ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಎಸ್‌ಯುಸಿಐ(ಸಿ) ಪಾಲಿಟ್ ಬ್ಯೂರೋ ಸದಸ್ಯ ಕೆ.ರಾಧಾಕೃಷ್ಣ, ಎಐಎಂಎಸ್‌ಎಸ್‌ನ ಅಖಿಲ ಭಾರತ ಅಧ್ಯಕ್ಷೆ ಡೆ.ಕೆಯಾ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

    ಜಿಲ್ಲಾ ಸಂಘಟನಾ ಸಂಚಾಲಕಿ ಡಿ.ಸುಜಾತಾ ಮಾತನಾಡಿ, ಮಹಿಳೆಯರು, ಮಕ್ಕಳ ಕಳ್ಳಸಾಗಾಣಿಕೆ ತಡೆಗಟ್ಟಿ. ಶಿಕ್ಷಣ ಸಂಸ್ಥೆಗಳಲ್ಲಿ ಜೂಡೋ-ಕರಾಟೆಯಂತಹ ಆತ್ಮರಕ್ಷಣಾ ತರಬೇತಿ ಕಡ್ಡಾಯಗೊಳಿಸಿ. ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಿ. ಶಿಕ್ಷಣ, ಉದ್ಯೋಗ, ಆರೋಗ್ಯ ಖಚಿತಪಡಿಸಿ. ಕನಿಷ್ಠ ವೇತನ, ಸೇವಾ ಭದ್ರತೆ ಖಾತ್ರಿ ಪಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಸಮ್ಮೇಳನಕ್ಕೆ ಸಜ್ಜಾಗಿದ್ದೇವೆ ಎಂದು ಮಾಹಿತಿ ನೀಡಿದರು.

    ಸಹ ಸಂಚಾಲಕಿ ಕುಮುದಾ, ಸದಸ್ಯೆ ಗಿರಿಜಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts