More

    ರಾಜ್ಯಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ದುರ್ಗ ಚಾಂಪಿಯನ್


    ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ದಾವಣಗೆರೆಯಲ್ಲಿ ಈಚೆಗೆ ಜರುಗಿದ ರಾಜ್ಯಮಟ್ಟದ ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ಚಾಂ ಪಿಯನ್ ಆಗುವ ಮೂಲಕ, ಹೊಸದಿಲ್ಲಿಯಲ್ಲಿ ಡಿಸೆಂಬರ್ 2ನೇ ವಾರ ನಡೆಯಲಿರುವ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಎಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಹೇಳಿದರು.
    ನಗರದ ವಿಪಿ ಬಡಾವಣೆ ಸರ್ಕಾರಿ ಶಾಲಾ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಶುಭಹಾರೈಕೆ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು, 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಬೆಂಗಳೂರು ವಿಭಾಗಮಟ್ಟ ಹಾಗೂ ರಾಜ್ಯಮಟ್ಟದ ಹ್ಯಾಂಡ್‌ಬಾಲ್ ಪಂದ್ಯಗಳಲ್ಲಿ ಚಿತ್ರದುರ್ಗ ತಂಡ ಚಾಂಪಿಯನ್ ಆಗಿದೆ.
    ಅಂತಿಮವಾಗಿ ನಮ್ಮ ಜಿಲ್ಲೆಯ 9 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಪಿ ಬಡಾವಣೆ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ಎನ್.ಪ್ರಜ್ವಲ್, ಎನ್.ದಿಗಂತ್‌ಕುಮಾರ್, ಎಸ್.ಆದೀಶ್, ಎಸ್.ಪುಷ್ಪವತಿ, ಚಿನ್ಮೂಲಾದ್ರಿ ಪ್ರೌಢಶಾಲೆಯ ಎಸ್. ತೇಜಸ್ವಿನಿ, ಆರ್.ಮಂಜುನಾಥ, ಮೊಳಕಾಲ್ಮೂರು ಕಿತ್ತೂರುರಾಣಿ ಚನ್ನಮ್ಮ ಶಾಲೆಯ ಡಿ.ಎಂ.ಸುನಿತಾ, ಪಲ್ಲವಿ ಹಾಗೂ ಚಳ್ಳಕೆರೆ ಮುರಾರ್ಜಿ ದೇಸಾಯಿ ಶಾಲೆಯ ಎ.ಸುನೀಲ್ ಆಯ್ಕೆಯಾಗಿದ್ದಾರೆ.
    ಕಳೆದ 22 ವರ್ಷಗಳಿಂದ ಸತತವಾಗಿ ಹ್ಯಾಂಡ್‌ಬಾಲ್ ಪಂದ್ಯದ ಯಾವುದಾದರೂ ಒಂದು ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಜಿಲ್ಲೆಯ ಕ್ರೀ ಡಾಪಟುಗಳು ಆಯ್ಕೆಯಾಗುತ್ತಿದ್ದಾರೆ. ಈ ಹಿಂದೆ 18 ಹ್ಯಾಂಡ್‌ಬಾಲ್ ಕ್ರೀಡಾಪಟುಗಳು ತಲಾ 1 ಲಕ್ಷ ರೂ.ಕ್ರೀಡಾ ವಿದ್ಯಾರ್ಥಿವೇತನ ಪಡೆದಿದ್ದಾರೆ.
    ಈ ಬಾರಿ 12 ಕ್ರೀಡಾಪಟುಗಳು 1 ಲಕ್ಷ ರೂ.ಗಳನ್ನು ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದಾರೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪ ಟುಗಳನ್ನು ಪೌರ ಸನ್ಮಾನದ ಮೂಲಕ ಸ್ಪರ್ಧೆಗೆ ಕಳುಹಿಸಿ ಕೊಡಲಾಗುವುದು. ನಗರಸಭೆ ಸಹಯೋಗದಲ್ಲಿ ಅವರಿಗೆ ನಗರದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗುವುದು ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ನಾಗಭೂಷಣ್, ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಎಂ.ಎಚ್.ಜಯಣ್ಣ, ದೈಹಿಕ ಶಿಕ್ಷಣ ಶಿಕ್ಷಕ ಕೆ. ಎಚ್.ಶಿವರಾಮ್, ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆ ಖಜಾಂಚಿ ಸಿ.ಎಸ್.ಪ್ರೇಮಾನಂದ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts