More

    ರಾಜ್ಯದ ಪರ ಮಹಾ ತೀರ್ಪು ಸಾಧ್ಯತೆ

    ನರೇಗಲ್ಲ: ಕಳಸಾ-ಬಂಡೂರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ನಿಂದ ರಾಜ್ಯದ ಪರ ತೀರ್ಪು ಬರುವ ಲಕ್ಷಣಗಳಿವೆ. ವರ್ಷಗಳಿಂದ ರೈತರು ಮಾಡುತ್ತಿರುವ ಹೋರಾಟಕ್ಕೆ ಜಯ ಸಿಗಲಿದೆ ಎಂದು ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ಎಲ್. ಮಂಜುನಾಥ ಹೇಳಿದರು.

    ಸಮೀಪದ ಎನ್. ಮಲ್ಲಾಪುರ ಗ್ರಾಮದಲ್ಲಿ ಭಾನುವಾರ ರೈತ ಪೀಠ ವೃದ್ಧಾಶ್ರಮ ಹಾಗೂ ಅನಾಥಾಶ್ರಮ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ರೈತರ ಹೋರಾಟ ಯಾವುದೇ ಕಾರಣಕ್ಕೂ ದಿಕ್ಕು ತಪ್ಪಬಾರದು. ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ರೈತ ಸಂಘಟನೆಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಮಹದಾಯಿ ಹುಟ್ಟಿದ್ದು ಕರ್ನಾಟಕವಾದರೂ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳು ತಮ್ಮದು ಎಂಬಂತೆ ತಕರಾರು ಸಲ್ಲಿಸುತ್ತ ಸಮಸ್ಯೆ ಸೃಷ್ಟಿಸುತ್ತಿವೆ. ನಮ್ಮ ನೆಲದಲ್ಲಿ ಹುಟ್ಟಿದ ನದಿ ನೀರಿಗಾಗಿ ಹೋರಾಡುವ ಪರಿಸ್ಥಿತಿ ನಿರ್ವಣವಾಗಿರುವುದು ದುರದೃಷ್ಟಕರ ವಿಷಯ. ಹುಬ್ಬಳ್ಳಿ- ಧಾರವಾಡ ನಗರಗಳಿಗೆ ಕುಡಿಯುವ ನೀರು ಸೇರಿ ದಿನನಿತ್ಯದ ಬಳಕೆಗೆ ನ್ಯಾಯಾಧಿಕರಣದ ಮಧ್ಯಂತರ ತೀರ್ಪಿನ ಪ್ರಕಾರ 13.42 ಟಿಎಂಸಿ ನೀರು ಸಾಕಾಗುವುದಿಲ್ಲ ಎಂಬುದನ್ನು ನ್ಯಾಯಾಧಿಕರಣದ ಮುಂದೆ ಸ್ಪಷ್ಟನೆ ನೀಡಲಾಗಿದ್ದು, ಹೆಚ್ಚುವರಿ ನೀರು ಲಭ್ಯವಾಗುವ ಸಾಧ್ಯತೆಗಳಿವೆ ಎಂದರು.

    ಹಾಲಕೆರೆ ಡಾ. ಅಭಿನವ ಅನ್ನದಾನ ಸ್ವಾಮೀಜಿ ಆಶೀರ್ವಚನ ನೀಡಿ, ರೈತ ದೇಶದ ಬೆನ್ನೆಲುಬು. ರೈತರು ಒಗ್ಗಟ್ಟಾಗಿ ಹೋರಾಟ ಮಾಡಬೇಕು. ವ್ಯವಸಾಯ ಪದ್ಧತಿ ಸುಧಾರಣೆಯಾಗಬೇಕು, ಪರಿಸರಕ್ಕೆ ಪೂರಕವಾಗುವ ಬೆಳೆ ಬೆಳೆಯಬೇಕು. ಮಳೆ ಇಲ್ಲದಿದ್ದರೆ ಜೀವ ಸಂಕುಲದ ಉಳಿವು ಅಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮುಂದಿನ .ದಿನಗಳಲ್ಲಿ ರೈತ ಪೀಠದ ನೇತೃತ್ವದಲ್ಲಿ ಸಮಾಜಕ್ಕೆ ಮಾದರಿಯಾಗುವ ಕಾರ್ಯಗಳನ್ನು ಹಮ್ಮಿಕೊಳ್ಳಲಿ ಎಂದರು.

    ಇದೇ ವೇಳೆ ಸಾರ್ವಜನಿಕರಿಗೆ 1,000 ಸಸಿಗಳನ್ನು ವಿತರಿಸಲಾಯಿತು. ರೋಣ ಗುಲಗಂಜಿಮಠದ ಗುರುಪಾದ ಸ್ವಾಮೀಜಿ, ನರಗುಂದ ಪಂಚಗೃಹ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆ. ವಿಶ್ವನಾಥ ಕೊಳೂರಮಠ, ಎಚ್. ಮೀನಾಕ್ಷಿ, ವಕೀಲ ಬಿ.ಡಿ. ಹಿರೇಮಠ, ಅಮೃತೇಶ ಎನ್.ಪಿ., ಜಿಲ್ಲಾ ನ್ಯಾಯಾಧೀಶ ಜಿ.ಎಫ್. ಸಂಗ್ರೇಶಿ, ವಿ.ಎ. ಪಾಟಿಲ, ಡಾ. ಕೆ.ಬಿ. ಧನ್ನೂರ, ಬಿ.ಜೆ., ಮೇಘಾ ಪಾರ್ಥ, ಅಂದಾನಗೌಡ ಪಾಟೀಲ, ಶಿವಪ್ಪ ಹೊರಕೇರಿ, ವೀರಬಸಪ್ಪ ಹೂಗಾರ, ವಿಶ್ವನಾಥ ಗುಡಿಸಾಗರ, ರಾಘವೇಂದ್ರ ಗುಜಮಾಗಡಿ, ರವೀಂದ್ರ ಕೊಳೂರ, ದೇವೇಂದ್ರಪ್ಪ ದ್ಯಾಪಲಿಸಿ, ವಿನಯ ಹೊಸಗೌಡ್ರ, ಡಾ. ಮಹೇಶ ನಾಲವಾಡ, ಡಾ. ಅರುಣ ಕುಮಾರ, ಉಪಾಧ್ಯಕ್ಷೆ ಮಲ್ಲಮ್ಮ ಬಿಚ್ಚೂರ ಭಾಗವಹಿಸಿದ್ದರು. ಹಾಸ್ಯ ಕಲಾವಿದ ಶರಣು ಯಮನೂರ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಿತು. ಜ್ಯೋತಿ ಹಿರೇಮಠ, ಚನ್ನಪ್ಪ ಎಲಿ ತಂಡದಿಂದ ಸಂಗೀತ ಸೇವೆ ಜರುಗಿತು. ಪ್ರಶಾಂತ ಅಳಗವಾಡಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts