More

    ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ – ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

    ಹಾರೂಗೇರಿ: ರಾಜ್ಯ ಸರ್ಕಾರವು ಪ್ರತಿದಿನ ಅವಶ್ಯವಿದ್ದಷ್ಟು ಆಕ್ಸಿಜನ್ ಒದಗಿಸುವ ಕೆಲಸ ಮಾಡುತ್ತಿದ್ದು, ಸದ್ಯ ರಾಜ್ಯದಲ್ಲಿ ಆಕ್ಷಿಜನ್ ಕೊರತೆ ಇಲ್ಲ. ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಮೊದಲು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

    ಹಾರೂಗೇರಿ ಕ್ರಾಸ್‌ನಲ್ಲಿ ಗುರುವಾರ ಮಲ್ಲಿಕಾರ್ಜುನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಆರಂಭಿಸಲಾದ 25 ಬೆಡ್‌ಗಳ ಕೋವಿಡ್ ಚಿಕಿತ್ಸಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕರೊನಾ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಜನತಾ ಕರ್ಫ್ಯೂ ಘೋಷಿಸಿದೆ. ಹಾಗಾಗಿ ಪ್ರತಿಯೊಬ್ಬರೂ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

    ಹೃದಯ ರೋಗ ಮತ್ತು ಮಧುಮೇಹ ತಜ್ಞ ಡಾ. ವಿಶ್ವನಾಥ ನಾರಗೊಂಡ ಮಾತನಾಡಿ, ನಾರಗೊಂಡ ಕೋವಿಡ್ ಆಸ್ಪತ್ರೆ ಒಟ್ಟು 25 ಬೆಡ್‌ಗಳನ್ನು ಹೊಂದಿದ್ದು, ಅದರಲ್ಲಿ ಆಕ್ಸಿಜನ್ ರಹಿತ 6 ಬೆಡ್‌ಗಳು ಮತ್ತು ಆಕ್ಸಿಜನ್ ಸಹಿತ 19 ಬೆಡ್‌ಗಳಿವೆ ಎಂದು ಹೇಳಿದರು.

    ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಡಾ. ಗಿರೀಶ ನಾರಗೊಂಡ, ಡಾ. ಮೃತ್ಯುಂಜಯ ನಾರಗೊಂಡ, ಡಾ. ಅಪ್ಪಾಸಾಹೇಬ ನಾರಗೊಂಡ, ಹಾರೂಗೇರಿ ಪಿಎಸ್‌ಐ ಯಮನಪ್ಪ ಮಾಂಗ, ಪುರಸಭೆ ಕಂದಾಯ ಅಧಿಕಾರಿ ಶ್ರೀಶೈಲ ದಾಶ್ಯಾಳ, ಆರೋಗ್ಯ ನಿರೀಕ್ಷಕ ಆರ್.ಡಿ.ಸನಗೊಂಡ, ಭರಮು ಹಳ್ಳೂರ, ಅಶೋಕ ಅಸ್ಕಿ, ಬಾಳೇಶ ಹಾಡಕಾರ, ಶ್ರೀಧರ ಬದ್ನಿಕಾಯಿ, ಸಿದ್ದು ನೋಗನಿಹಾಳ, ಶಿವರಾಯ ಯಲಡಗಿ, ಕುಮಾರ ಸತ್ತಿಗೌಡರ, ಅಶೋಕ ಅಮ್ಮಣಗಿ, ಗುರು ಪಾಟೀಲ, ಶ್ರೀಧರ ಬಾಗೇವಾಡಿ, ನಿಂಗಪ್ಪ ಕಂಬಾಗಿ, ಮಹಾಂತೇಶ ಮುಗಳಖೋಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts